ಮಹಾರಾಣಾ ಪ್ರತಾಪ್ ದೇಶ ಕಂಡ ಅಪ್ರತಿಮ ವೀರ : ವಿಜಯಸಿಂಗ್
Maharana Pratap was an unparalleled hero the country has ever seen: Vijay Singh
ತಾಳಿಕೋಟಿ 20: ಮಹಾರಾಣಾ ಪ್ರತಾಪ್ ಸಿಂಹ ಅವರು ಮಾತೃಭೂಮಿಯ ರಕ್ಷಣೆಗಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ಮಹಾನ್ ನಾಯಕ,ಅವರ ದೇಶಪ್ರೇಮ ಹಾಗೂ ತ್ಯಾಗದ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಯುವ ಮುಖಂಡ ವಿಜಯಸಿಂಗ್ ಹಜೇರಿ ಹೇಳಿದರು. ಸೋಮವಾರ ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ರಾಣಾ ಪ್ರತಾಪರ ಹುತಾತ್ಮ ಸ್ಮರಣಾರ್ಥ ರಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ ರಂಥಹ ಶೌರ್ಯ ಹಾಗೂ ಪರಾಕ್ರಮದ ಬೇರೋಬ್ಬ ಅರಸ ನಮಗೆ ಸಿಗುವುದಿಲ್ಲ. ಅವರ ಸ್ವಾಭಿಮಾನದ ಬದುಕು ಭಾರತೀಯರ ಪಾಲಿಗೆ ಸ್ಪೂರ್ತಿಯಾಗಿದೆ ಎಂದರು.
ರಾಜು ರಜಪೂತ ಮಹಾರಾಣಾ ಪ್ರತಾಪ ಸಿಂಹ ಅವರ ಜೀವನ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ,ಉಪಾಧ್ಯಕ ರತನಸಿಂಗ್ ಕೊಕಟನೂರ, ಪ್ರಮುಖರಾದ ನಿವೃತ್ತ ಯೋಧ ಶ್ರೀಪಾಲ್ ಸಂಗಮಿ, ಜಿ.ಜಿ.ಮದರಕಲ್ಲ,ಎಂ.ಕೆ. ಪಟ್ಟಣಶೆಟ್ಟಿ, ಭರತಸಿಂಗ್ ವಿಜಾಪುರ, ಮುದುಕಪ್ಪ ಬಡಿಗೇರ, ರಾಘು ಚೌಹಾಣ, ಗೋವಿಂದಸಿಂಗ್ ಗೌಡಗೇರಿ, ಸುರೇಶ್ ಹಜೇರಿ, ಬಾಲಾಜಿಸಿಂಗ್ ವಿಜಾಪುರ, ಗೋವಿಂದಸಿಂಗ್ ಮೂಲಿಮನಿ, ದೀಲೀಪ ಹಜೇರಿ,ವಿಠ್ಠಲ್ ಹಜೇರಿ, ಪ್ರಹ್ಲಾದ್ ಹಜೇರಿ, ಕೇಸರಸಿಂಗ್ ದೇವಿ, ಪಿಂಟು ಹಜೇರಿ, ಸೂರಜ ಹಜೇರಿ, ಆನಂದ ಹಜೇರಿ, ಬಾಲಾಜಿ ಬಾಯ್ಸ್ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 