ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಿ

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಿ Mahadayi, Kalasa-Banduri project to be implemented, get central government permission and start wor


          ಧಾರವಾಡ 21: ನವದೆಹಲಿಯ ಸುಪ್ರೀಂ ಕೋರ್ಟ್‌ ಬಾರ್ ಅಸೋಶಿಯೇಷನ್ ಹಾಗೂ ದೆಹಲಿ ಹೈ ಕೋರ್ಟ್‌ ವಕೀಲರ ಸಂಘದ ಕಟ್ಟಡ ವೀಕ್ಷಿಸಲು ದಿ.20 ರಂದು ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಹಿರಿಯ ವಕೀಲರು ಹಾಗೂ ಶಾಸಕರುಗಳ ನಿಯೋಗದೊಂದಿಗೆ ಕಟ್ಟಡ ವೀಕ್ಷಣೆ ಮಾಡಿ ಅಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಉತ್ತರ ಕರ್ನಾಟಕದ ಧಾರವಾಡ ಹೈ ಕೋರ್ಟ್ನಲ್ಲಿ ವಕೀಲರ ಸಂಘದ ಃಂಖ ಠಚಿಣಠ ಕಟ್ಟಡವನ್ನು ಅದೇ ಮಾದರಿಯ ಎಲ್ಲ ಸೌಲಭ್ಯಗಳನ್ನು ವಕೀಲರಿಗೆ ಹಾಗೂ ಕಕ್ಷಿದಾರರು, ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸಭಾಂಗಣ, ಗ್ರಂಥಾಲಯ, ಕಾನ್ಫರೆನ್ಸ್‌ ಹಾಲ್, ಮಿಡಿಯೇಷನ್ ಸೆಂಟರ್ಸ್‌ ಹಾಗೂ ಡಿಜಿಟಲ್ ಸೌಲಭ್ಯಗಳನ್ನು ಒಳಗೊಂಡ ಅತ್ಯಾಧುನಿಕ ಮೂಲಭೂತ ಸೌಕರ್ಯ ಒದಗಿಸುವದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಸತೀಶ ಜಾರಕಿಹೊಳಿ ಅವರು ಹೇಳಿದರು.  

  ಇದರೊಂದಿಗೆ ಕಟ್ಟಡ ನಿರ್ಮಿಸುವ ಕುರಿತು ಸುಪ್ರೀ ಕೋರ್ಟ್‌ ಅಂತರರಾಜ್ಯ ಜಲವಿವಾದದ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರೊಂದಿಗೆ ಚರ್ಚಿಸಿ ಈ ರೀತಿ ಧಾರವಾಡದಲ್ಲಿ ಕಟ್ಟಡ ನಿರ್ಮಿಸಲು ದೆಹಲಿಗೆ ವೀಕ್ಷಣೆಗೆ ಆಗಮಿಸಿದ್ದು ನಮಗೆ ಸಂತೋಷವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಈಗಾಗಲೇ ಮಹಾದಾಯಿ ನ್ಯಾಯಾಧೀಕರಣ ತೀಪು ನೀಡಿದ್ದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಡಿಪಿಆರ್ಗೆ ಅನುಮತಿ ಕೂಡ ನೀಡಿದೆ. ಈಗ ರಾಜಕೀಯ ಇಚ್ಛಾಶಕ್ತಿ ಮೂಲಕ ಸರ್ವರೆಲ್ಲರು ಕೂಡಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದು ಈಗಾಗಲೇ ರಾಜ್ಯ ಸರ್ಕಾರದಿಂದ ಟೆಂಡರ್ ಕರೆದು ಕಾರ್ಯಾದೇಶ ನೀಡಿದ್ದು ಕಾಮಗಾರಿ ಪ್ರಾರಂಭಿಸಿದರೆ ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡಿ 7 ಟಿ.ಎಂ.ಸಿ. ಹೆಚ್ಚುವರಿ ನೀರನ್ನು ಪಡೆಯಲು ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಘಟಪ್ರಭಾ ಹಾಗೂ ಮಲಪ್ರಭಾ ಡ್ಯಾಂಗಳಿಗೆ ನೀರಿನ ಕೊರತೆಯಾಗಿದ್ದು ಅದನ್ನು ಸರಿದೂಗಿಸಲು ಮಳೆಗಾಲದಲ್ಲಿ ಪ್ರವಾಹ ಬಂದು ಆಲಮಟ್ಟಿ ಡ್ಯಾಂ ತುಂಬುತ್ತದೆ, ಅದರಿಂದ ಹೆಚ್ಚಾದ ನೀರು ಹೊರಬಿಡುತ್ತೇವೆ. ಆ ನೀರನ್ನು ಕೊರತೆ ಇರುವ ಘಟಪ್ರಭಾ ್ಘ ಮಲಪ್ರಭಾ ಡ್ಯಾಂಗಳ ಮೂಲಕ ನೀರಾವರಿ ಹಾಗೂ ಕುಡಿಯುವ ನೀರಿಗೆ ಬೇಕಾಗುವ ವಿವಿಧ ಜಿಲ್ಲೆಗಳಿಗೂ ಸಹ ನೀರು ಪೂರೈಕೆ ಮಾಡಬಹುದೆಂದು ಕಾತರಕಿ ಅವರು ನಿಯೋಗಕ್ಕೆ ಸಲಹೆ ನೀಡಿದರು.  

 ಈ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ ಹಿರಿಯ ನ್ಯಾಯವಾದಿಗಳಾದ ನೂಲ್ವಿ, ನಿಶಾಂತ ಪಾಟೀಲ, ಶಿವಶಂಕರ ಕುಲಕರ್ಣಿ, ಜೆ.ಎಂ. ಗಂಗಾಧರ, ಧಾರವಾಡ ಹೈಕೋರ್ಟ್‌ ಪೀಠದ ಹೋರಾಟಗಾರ ಬಿ.ಡಿ. ಹಿರೇಮಠ, ಶಾಸಕರುಗಳಾದ ಎನ್‌.ಹೆಚ್‌. ಕೋನರಡ್ಡಿ ನವಲಗುಂದ, ಬಾಬಾಸಾಹೇಬ ಪಾಟೀಲ ಕಿತ್ತೂರ, ರಾಜು ಸೇಠ ಬೆಳಗಾವ, ವಿಶ್ವಾಸ ವೈಧ್ಯ ಸವದತ್ತಿ, ಡಾ: ಶ್ರೀನಿವಾಸ, ರಘುಮೂರ್ತಿ, ಬಸವಂತಪ್ಪ, ಮಾಜಿ ಸಂಸದ ಚಂದ್ರ​‍್ಪ, ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷ ಸುನೀಲ ಹನಮಣ್ಣವರ, ಜಿಲ್ಲಾಧ್ಯಕ್ಷರುಗಳಾದ ಎಸ್‌.ಜಿ. ನಂಜಯ್ಯನಮಠ (ಬಾಗಲಕೋಟ), ಅನೀಲಕುಮಾರ ಪಾಟೀಲ (ಧಾರವಾಡ), ವಿನಯ ನಾವಲಗಟ್ಟಿ (ಬೆಳಗಾವಿ), ಸಂಜೀವ ನೀರಲಗಿ (ಹಾವೇರಿ), ವಕೀಲರಾದ ಅಲಿ ಗೊರವನಕೊಳ್ಳ ಕಾರ್ಯದರ್ಶಿ, ಹರ್ಷಾ ನಿಲೋಪಂತ ಉಪಾಧ್ಯಕ್ಷರು, ಮಾಲಿ ಪಾಟೀಲ ಕಾರ್ಯದರ್ಶಿಗಳು, ಕಿವುಡಸನ್ನವರ, ಸಂತೋಷ ಹತ್ತಿಕಟಗಿ, ವಿನಯ ಮಾಂಗಲೇಕರ, ಸಿದ್ದನಗೌಡ ಪಾಟೀಲ (ಹಾವೇರಿ), ಮತ್ತಿ ಹುಬ್ಬಳ್ಳಿ, ಹೆಚ್‌.ಎಸ್‌. ಸೋಂಪುರ, ಪ್ರಕಾಶ ಭಾವಿಕಟ್ಟಿ, ಪ್ರಶಾಂತಗೌಡ ಪಾಟೀಲ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.