ಗವಿಮಠದ ಮಹಾದಾಸೋಹ: ಹತ್ತರಿಂದ ಹನ್ನೆರಡು ಲಕ್ಷ ಭಕ್ತರಿಗೆ ಮೈಸೂರ್ ಪಾಕ್ ತಯಾರಿಕೆ

ಗವಿಮಠದ ಮಹಾದಾಸೋಹ: ಹತ್ತರಿಂದ ಹನ್ನೆರಡು ಲಕ್ಷ ಭಕ್ತರಿಗೆ ಮೈಸೂರ್ ಪಾಕ್ ತಯಾರಿಕೆ Mahadasoha at Gavi Math: Mysore Pak being prepared for ten to twelve lakh devotees

ಕೊಪ್ಪಳ 03: ಗವಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಮಹಾದಾಸೋಹಕ್ಕೆ ಅನೇಕ ಭಕ್ತರು ವಿವಿಧ ರೀತಿಯ ಖಾದ್ಯಗಳ ಸೇವೆ ಸಮರ​‍್ಿಸುವುದು ಜಾತ್ರ ಮಹೋತ್ಸವದ ವಿಶೇಷತೆ. ಇಂದು ಸಿಂಧನೂರಿನ ಗೆಳೆಯರ ಬಳಗದ ವತಿಯಿಂದ ದಿ. 5 ಮತ್ತು 6ರಂದು ಭಕ್ತರಿಗೆ ಮೈಸೂರುಪಾಕ  ಸವಿಯಲು  ತಯಾರಿಕೆಯಲ್ಲಿ ತೊಡಗಿದ್ದಾರೆ. ಇಂದು ದಿನಾಂಕ 3ರಂದು ಬೆಳಗ್ಗೆ 6 ಗಂಟೆಯಿಂದ ತಯಾರಿಕೆಯಲ್ಲಿ ತೊಡಗಿದ್ದು, ಇದು ರಾತ್ರಿ 11ರವರೆಗೆ ಮತ್ತು ನಾಳೆಯು ಸಹ ಮುಂದುವರಿಯಲಿದೆ.  

ಮೈಸೂರು ಪಾಕ್ ತಯಾರಿಸುವುದಕ್ಕೆ 60ಕ್ವಿಂಟಲ್ ಸಕ್ಕರೆ, 5000 ಲೀಟರ್ ಅಡುಗೆ ಎಣ್ಣೆ, 30ಕ್ವಿಂಟಲ್ ಕಡಲೆ ಹಿಟ್ಟು, 5ಕ್ವಿಂಟಲ್ ಮೈದಾ ಹಿಟ್ಟು, 30 ಕ್ವಿಂಟಲ್ ತುಪ್ಪ, 50ಕೆಜಿ ಯಾಲಕ್ಕಿ ಸಾಮಗ್ರಿಗಳೊಂದಿಗೆ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ಅಂದಾಜು ಹತ್ತರಿಂದ ಹನ್ನೆರಡು ಲಕ್ಷ ಜನ ಇದನ್ನು ಸೇವಿಸಬಹುದಾಗಿದೆ. ತಯಾರಿಸುವುದಕ್ಕೆ ಅಥಣಿ, ಧನಾವರ, ಮಸ್ಕಿ, ಗಬ್ಬೂರ, ಬಳಗಾನೂರ, ತಾವರಗೇರಾ ಮುಂತಾದ 100ಕ್ಕೂ ಹೆಚ್ಚು ಬಾಣಸಿಗರು ಆಗಮಿಸಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಸಹಾಯಕರಾಗಿ ಮತ್ತು ಇತರೆ ವ್ಯವಸ್ಥೆಗಾಗಿ 200ಕ್ಕೂ ಹೆಚ್ಚು ಜನ ತಯಾರಿಕೆ ಸೇವೆಯಲ್ಲಿ ತೊಡಗಿ ಕೊಂಡಿರುತ್ತಾರೆ ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.