ಮಹಾ ಶಿವರಾತ್ರಿ ಸಪ್ತಾಹ: 9ರಿಂದ ಓಂ ನಮಃ ಶಿವಾಯ ತಾರಕ ಮಂತ್ರದ ಶತಮಾನೋತ್ಸವ
Maha Shivaratri Week: Centenary of Om Namah Shivaya Taraka Mantra from 9th
ಹಾರೂಗೇರಿ 06: ಪಟ್ಟಣದ ಆರಾದ್ಯದೈವ ಗುರು ಚನ್ನವೃಷಭೇಂದ್ರ (ದೇವರಕೊಂಡಜ್ಜ) ಮಹಾರಾಜರ ಲೀಲಾಮಠದಲ್ಲಿ ಫೆ.9 ಸೋಮವಾರದಿಂದ 17 ಮಂಗಳವಾರದವರೆಗೆ 100ನೇ ವರ್ಷದ ಮಹಾ ಶಿವರಾತ್ರಿ ಸಪ್ತಾಹದ ಓಂ ನಮಃ ಶಿವಾಯ ತಾರಕ ಮಂತ್ರದ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.
ಫೆ.9ರಂದು ಸೋಮವಾರ ನಸುಕಿನ ಬ್ರಾಹ್ಮೀ ಮಹೂರ್ತದಲ್ಲಿ ಇಂಚಲ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಯರ ದಿವ್ಯಸಾನಿಧ್ಯದಲ್ಲಿ ರುದ್ರಹೋಮ, ಮಹಾದ್ವಾರ ಕಳಸದ ಪ್ರಾಣ ಪ್ರತಿಷ್ಠಾಪನಾ ಹೋಮ, ಹವನ, ಪೂಜೆ, ಚನ್ನವೃಷಭೇಂದ್ರರು ಹಾಗೂ ಡಾ.ಶಿವಾನಂದ ಭಾರತಿ ಸ್ವಾಮೀಜಿಯರ ಮೂರ್ತಿಗಳಿಗೆ ರುದ್ರಾಭಿಷೇಕ, ಸುವರ್ಣ ಕೀರೀಟ ಧಾರಣೆ, ಅಭಿಷೇಕ ಮತ್ತು ಮಹಾಪೂಜೆ ನೆರವೇರಲಿದೆ.
ಬೆಳಿಗ್ಗೆ 8.30 ಗಂಟೆಗೆ 1001 ಸುಮಂಗಲೆಯರಿಂದ ಕುಂಭೋತ್ಸವ ಹಾಗೂ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸರ್ವ ಮಹಾತ್ಮರ ಸ್ವಾಗತ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. 11.30ಗಂಟೆಗೆ ವೇದಾಂತ ವೇದಿಕೆಯಲ್ಲಿ ಜ್ಯೋತಿ ಬೆಳಗಿಸಿ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಸಂಜೆ 6.30ರಿಂದ ರಾತ್ರಿ 9.30ರವರೆಗೆ ಮಹಾತ್ಮರಿಂದ ಪ್ರವಚನ ನಡೆಯಲಿದೆ.
ಫೆ.10ರಂದು ಮಂಗಳವಾರ ಬೆಳಿಗ್ಗೆ 9ಗಂಟೆಗೆ ಸರ್ವ ಮಹಾತ್ಮರು ಮತ್ತು ಮಹಾದ್ವಾರದ ದಾನಿಗಳಿಂದ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಲಾಗಿರುವ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಮಹಾದ್ವಾರದ ಉದ್ಘಾಟನೆ, 9. 30ರಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 6.30 ರಿಂದ 9.30ಗಂಟೆವರೆಗೆ ಮಹಾತ್ಮರಿಂದ ಪ್ರವಚನ ನಡೆಯಲಿದೆ. ಫೆ.11 ರಿಂದ 17ರವರೆಗೆ ನಿರಂತರ 7 ದಿನಗಳವರೆಗೆ ಓಂ ನಮಃ ಶಿವಾಯ ತಾರಕ ಮಂತ್ರದ ಪಠಣ ಮೊಳಗಲಿದೆ.
ಬೀದರ ಕುಮಾರೇಶ್ವರ ಸ್ವಾಮೀಜಿ, ಹರಿದ್ವಾರದ ವಿದ್ಯಾನಂದ ಪುಂಜಿ ಮಹಾಮಂಡಲೇಶ್ವರರು, ಋಷಿಕೇಶದ ಅಭಿನವ ಚೈತನ್ಯಜಿ ಮಹಾಮಂಡಲೇಶ್ವರರು, ನಿಡಸೋಶಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮುಗಳಖೋಡದ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಇಂಚಲ ಪೂರ್ಣಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮಾತೋಶ್ರೀಯರಾದ ಲಕ್ಷ್ಮೀ ತಾಯಿ, ನೀಲಮ್ಮ ತಾಯಿಯವರು, ಅನುಸೂಯಾ ತಾಯಿಯವರು, ಶಿವರಾಮಾನಂದ ಭಾರತಿ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಮಲ್ಲೇಶ್ವರ ಶರಣರು, ನಿಜಗುಣಾನಂದ ಸ್ವಾಮೀಜಿ, ಬಿ.ಎಂ.ಮುಜಾವರ ಸಾಹೇಬರು ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲಿರುವರೆಂದು ಗುರು ಚನ್ನವೃಷಭೇಂದ್ರ ಮಹಾರಾಜರ ಲೀಲಾಮಠದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 