ಮಡಿವಾಳ ಮಾಚಿದೇವರ ಜಯಂತೋತ್ಸವ ವಚನಗಳ ರಕ್ಷಕ ವೀರ ಮಡಿವಾಳ ಮಾಚಿದೇವ : ಶೇಖರ ಅಂಗಡಿ
Madiwala Machideva's birthday celebration: The protector of the verses of Madiwala Machideva: Shekh
ಮಹಾಲಿಂಗಪುರ 01 : ಇಂದು ನಾವೆಲ್ಲರೂ ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನು ನೋಡುತ್ತಿದ್ದೇವೆ ಓದುತ್ತಿದ್ದೇವೆ ಅಂದರೆ ಅದಕ್ಕೆ ಕಾರಣರಾದವರೇ ಮಡಿವಾಳ ಮಾಚಿದೇವರು. ಅವರು ಅಂದು ವಚನಗಳನ್ನು ರಕ್ಷಿಸದಿದ್ದರೆ ಇಂದು ನಮಗೆ ಅವುಗಳ ಅನುಭವದ ಸ್ವಾದ ನಮಗೆ ದೊರೆಯುತ್ತಿರಲಿಲ್ಲ. ವಚನಗಳನ್ನು ರಕ್ಷಿಸಿ ನಮಗೆ ಬಳುವಳಿಯಾಗಿ ಕೊಟ್ಟ ವೀರ ಮಡಿವಾಳ ಮಾಚಿದೇವ ಎಂದು ಪುರಸಭೆ ಮಾಜಿ ಅಧ್ಯಕ್ಷರಾದ ಶೇಖರ ಅಂಗಡಿ ಹೇಳಿದರು. ಅವರು ನಗರದ ಪುರಸಭೆಯಲ್ಲಿ ಆಯೋಜಿಸಿದ ವೀರ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನೆರವೇರಿಸಿ ಮಾತನಾಡಿ ಕಾಯಕವೇ ಕೈಲಾಸ 'ಎಂದು ತಿಳಿದು ದುಡಿವ ಮಡಿವಾಳ ಸಮಾಜ ಹನ್ನೆರಡನೆ ಶತಮಾನದ ಶರಣ ಮಡಿವಾಳ ಮಾಚಿದೇವನನ್ನು ಆರಾಧ್ಯ ದೈವವನ್ನಾಗಿಸಿಕೊಂಡು ಭಕ್ತಿ ಭಾವದಿಂದ ಸಮಾಜ ಸೇವೆ ಮಾಡುತ್ತದೆ ಎಂದರು.
ನಂತರ ಮಾತನಾಡಿದ ಪುರಸಭೆ ಅಧಿಕಾರಿ ಎಸ್ ಎನ್ ಪಾಟೀಲ ಮಡಿವಾಳರ ಸಮುದಾಯವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದೆ. ರಾಜಕೀಯ ಕ್ಷೇತ್ರದಲ್ಲಂತೂ ಹೇಳಿ ಕೊಳ್ಳಲು ಒಬ್ಬನೇ ಒಬ್ಬ ಜನನಾಯಕನಿಲ್ಲ. ಹೀಗಾಗಿ ಆರ್ಥಿಕವಾಗಿ ಸಭಲರಾಗುವ ದಿಸೆಯಲ್ಲಿ ಸಾಗುವದು ದೂರದ ಕನಸೇ ಸರಿ. ಮಡಿವಾಳ ಸಮಾಜವನ್ನು ದೆಹಲಿ, ಆಸ್ಸಾಂ, ಬಿಹಾರ, ಹಿಮಾಚಲಪ್ರದೇಶ ,ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ ,ಪಶ್ಚಮ ಬಂಗಾಳ, ಅರುಣಾಚಲ ಪ್ರದೇಶದಲ್ಲಿ ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ದಶಕಗಳ ಅವಿಶ್ರಾಂತ ಹೋರಾಟದ ಹಿನ್ನಲೆ ಇದ್ದರೂ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬೇಡಿಕೆ ಇಡೇರಿಲ್ಲ ಎಂದರು. ಈ ಸಂದರ್ಭದಲ್ಲಿ ಮಾರುತಿ ದಳವಾಯಿ, ಶಿವಾನಂದ ಚೌದರಿ, ಲಕ್ಷ್ಮೀ ಪರೀಟ, ದುರ್ಗಪ್ಪ ಜಮಖಂಡಿ, ಶ್ರೀಶೈಲ ಅಂಗಡಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 