ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ

Madaveri's helper Mavuthan was brutally killed by an elephant

ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ

ಹಾರೂಗೇರಿ 23  : ಆನೆಗೆ ಮದವೇರಿ ಸಹಾಯಕ ಮಾವುತನನ್ನೆ ದಾರುಣವಾಗಿ ಕೊಂದ ಘಟನೆ ರಾಯಬಾಗ ತಾಲೂಕಿನ ಸುಕ್ಷೇತ್ರ ಅಲಖನೂರಿನ  ಕರೆಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. 

 ಅಥಣಿ ತಾಲೂಕಿನ ಭರಮಕೋಡಿಯ ಕರೆಪ್ಪ ಸಖಾರಾಮ ಬೇವನೂರ (28) ಮೃತ ವ್ಯಕ್ತಿ. ಕಳೆದ ಎಂಟು ವರ್ಷಗಳಿಂದ ಅಲಖನೂರ ಗ್ರಾಮದ  ಕರೆಸಿದ್ದೇಶ್ವರ ದೇವಸ್ಥಾನದಲ್ಲಿರುವ ದ್ರುವ (ಗಂಡು ಆನೆ) ಆನೆಗೆ (ಮಾವುತನಿಗೆ ಸಹಾಯಕ) ಕವಾಡಿಗನಾಗಿ ಕೆಲಸ ನಿರ್ವಹಿಸುತ್ತಿದ್ದನು. ಸೋಮವಾರ ಬೆಳಿಗ್ಗೆ ಆನೆಗೆ ಆಹಾರ, ಸ್ವಚ್ಛತೆ ಕೆಲಸದಲ್ಲಿ ನಿರತನಾಗಿದ್ದ ವೇಳೆ, ಆನೆಗೆ ಮದವೇರಿ ಸೊಂಡಿಲಿನಿಂದ ಹೊಡೆದು, ಕಾಲಿನಿಂದ ತುಳಿದು ಸಾಯಿಸಿದೆ. ಮೃತ ಕರೆಪ್ಪ ಬೇವನೂರ ಪತ್ನಿಗೆ ಕಳೆದ 10 ದಿನಗಳ ಹಿಂದೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆಂದು ತಿಳಿದು ಬಂದಿದೆ.  ಘಟನಾ ಸ್ಥಳಕ್ಕೆ ಪಿಎಸ್‌ಐ ಮಾಳಪ್ಪ ಪೂಜಾರಿ ಭೇಟಿ ನೀಡಿ ಪರೀಶೀಲಿಸಿದರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.