ಶಾಸಕಿ ರೂಪಾಲಿಗೆ ನಮಿಸಿದ ಶಾಸಕ ಶಿವರಾಂ ಹೆಬ್ಬಾರ
ಕಾರವಾರ: ಯಲ್ಲಾಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರ್ ಪರ ಕೆಲಸ ಮಾಡಿ, ಪಕ್ಷ ನೀಡಿದ ಕೆಲಸ ಯಶಸ್ವಿಯಾಗಿ ನಿಭಾಯಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕಗೆ ನೂತನ ಶಾಸಕ ಶಿವರಾಮ ಹೆಬ್ಬಾರರು ಫಲಿತಾಂಶ ಬರುತ್ತಿದ್ದಂತೆ ಕೃತಜ್ಞತೆ ಅಪರ್ಿಸಿದರು.
ಗೆಲುವಿಗೆ ಯಲ್ಲಾಪುರದಲ್ಲಿ ನೆಲೆ ನಿಂತು ಕಾರ್ನರ್ ಮೀಟಿಂಗ್ ಹಾಗೂ ಮನೆ ಮನೆ ಭೇಟಿ ಮಾಡಿ ಮತಯಾಚಿಸಿದ ನಿಮಿತ್ತ ಶಾಸಕಿ ರೂಪಾಲಿ ಅವರಿಗೆ ನಮಸ್ಕರಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ಅವರು ಹೆಬ್ಬಾರರು ಅಭೂತಪೂರ್ವ ದಾಖಲೆಯ ಗೆಲುವನ್ನು ಸಾಧಿಸಿರುತ್ತಾರೆ ಎಂದು ನಮಗೆ ಗೊತ್ತಿತ್ತು. ಮತದಾರರಿಗೆ ಯಡಿಯೂರಪ್ಪ ಸಕರ್ಾರದ ಸ್ಥಿರತೆ ಇದ್ದರೆ, ಅಭಿವೃದ್ಧಿ ಸಾಧ್ಯ ಎಂದು ಮತದಾರರಿಗೆ ಮನವರಿಕೆ ಮಾಡಿದ್ದೆವು ಎಂದರು. ಯಲ್ಲಾಪುರ ಉಪಚುನಾವಣೆಯ ನಗರ ಉಸ್ತುವಾರಿಯನ್ನು ನನಗೆ ಪಕ್ಷ ನೀಡಿತ್ತು. ಅದನ್ನು ನಿರ್ವಹಿಸಿದ್ದೇವೆ ಎಂದರು. ಯಲ್ಲಾಪುರ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿಯೂ ಶಾಸಕಿ ರೂಪಾಲಿ ನಾಯ್ಕ ಹೇಳಿದರು.