ಡೋಣಿ ನದಿ ಪ್ರವಾಹ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ, ಪರೀಶೀಲನೆ.

ಡೋಣಿ ನದಿ ಪ್ರವಾಹ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ, ಪರೀಶೀಲನೆ. MLA Rajugowda visits and inspects the Doni River flood site.

ಡೋಣಿ ನದಿ ಪ್ರವಾಹ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ, ಪರೀಶೀಲನೆ. 

ದೇವರಹಿಪ್ಪರಗಿ, 08 : ಡೋಣಿ ನದಿ ಪ್ರವಾಹದಿಂದಾಗಿ ಸಂತ್ರಸ್ತವಾದ ಗ್ರಾಮಗಳು ಮತ್ತು ರೈತರ ಜಮೀನುಗಳಿಗೆ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.  

ಮತಕ್ಷೇತ್ರದ ನಾನಾ ಕಡೆ ಶುಕ್ರವಾರದಂದು ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು, ಸುರಕ್ಷಾ ಕ್ರಮಗಳನ್ನು ಹಾಗೂ ಸೂಕ್ತ ಪರಿಹಾರ ನೀಡುವಂತೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ. 

ಡೋಣಿ ನದಿ ತೀರದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಜಂಟಿ ಸರ್ವೆ ಕಾರ್ಯ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು. 

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ, ಮುಖಂಡರುಗಳಾದ ಸಿದ್ದನಗೌಡ ಜಲಪೂರ, ನಾಗೇಶ ಅವಟಿ, ಕಾಸು ಸಾಸಟ್ಟಿ, ಮಶಾಕ್ ಕನ್ನೊಳ್ಳಿ, ವಿಶ್ವನಾಥ ಅವಟಿ, ಪ್ರಕಾಶ ಗುಡಿಮನಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.