ಮಹಿಳಾ ದಿನಾಚರಣೆಯಂದು ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದ ಶಾಸಕ ರಾಜು ಕಾಗೆ
ಕಾಗವಾಡ, 08; ಶಾಸಕರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಅವರು ಮಹಿಳಾ ದಿನಾಚರಣೆ ದಿನ ಶನಿವಾರ ದಿ. 08 ರಂದು ಕ್ಷೇತ್ರದ 18 ಜನ ವಿಕಲಚೇತನರಿಗೆ ಮಂಜೂರಾದ ದ್ವಿಚಕ್ರ ವಾಹನ ವಿತರಣೆ ಮಾಡಿದರು. ಬೆಳಗಾವಿಯಲ್ಲಿ ಇತ್ತಿಚಿಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ರಾಜು ಕಾಗೆ ಅವರು ತಮ್ಮ ಕ್ಷೇತ್ರದ ವಿಕಲಚೇತನರಿಗೆ ದ್ವಿಚಕ್ರ ವಾಹನ ನೀಡಲು ಶಿಪಾರಸ್ಸು ಮಾಡಿದ್ದರು. ಈಗ ಬೆಳಗಾವಿ ಜಿಲ್ಲೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಛೇರಿ ಬೆಳಗಾವಿ ಇವರಿಂದ ಕ್ಷೇತ್ರದ ಒಟ್ಟು 18 ಜನ ವಿಕಲಚೇನರಿಗೆ ತಲಾ ರೂ. 1.40 ಲಕ್ಷ ಅನುದಾನದ ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ಉಗಾರ ಖುರ್ದದ ತಮ್ಮ ಗೃಹ ಕಚೇರಿಯಲ್ಲಿ ಶಾಸಕರು ವಾಹನದ ಕೀ ಹಸ್ತಾಂತರಿಸಿ, ವಿತರಿಸಿದರು. ಈ ಸಮಯದಲ್ಲಿ ತಾ.ಪಂ. ಎಓ ವೀರಣ್ಣಾ ವಾಲಿ ಮಾತನಾಡಿ, ಫಲಾನುಭವಿಗಳು ಈ ದ್ವೀಚಕ್ರ ವಾಹನದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಮಯದಲ್ಲಿ ಸಿಡಿಪಿಓ ಸಂಜೀವಕುಮಾರ ಸದಲಗಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವಿಶ್ವನಾಥ ಮೋರೆ, ಮುಖಂಡ ವಸಂತ ಖೋತ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ಅರಳಿಹಟ್ಟಿ ಗ್ರಾ.ಪಂ. ಅಧ್ಯಕ್ಷ ಬಸನಗೌಡಾ ಪಾಟೀಲ (ಬೊಮ್ಮನಾಳ), ರಾಜು ಮದನೆ, ಸಂಜು ಸಲಗರೆ ಸೇರಿದಂತೆ ಮುಖಂಡರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.