ಆಸ್ಪತ್ರೆಗೆ ಶಾಸಕ ರಾಜುಗೌಡ ಭೇಟಿ, ಪರೀಶೀಲನೆ

 ಆಸ್ಪತ್ರೆಗೆ ಶಾಸಕ ರಾಜುಗೌಡ ಭೇಟಿ, ಪರೀಶೀಲನೆ MLA Raju Gowda visits the hospital and inspects it

                        ದೇವರಹಿಪ್ಪರಗಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಊಟದ ನಂತರ ಅಸ್ವಸ್ಥಗೊಂಡ ಘಟನೆ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ. ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ, ಘಟನೆಯ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತನಾಡಿ, ಆರೋಗ್ಯದ ಕುರಿತು ವೈದ್ಯರ ಜೊತೆ ಸಮಾಲೋಚಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಅಧಿಕಾರಿಗಳ ಜೊತೆ ಚರ್ಚಿಸಿ. ಘಟನೆಗೆ ಕಳಪೆ ಆಹಾರ ಪೂರೈಕೆ ಕಾರಣವಾಗಿದ್ದರೆ ಕೂಡಲೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

            ಪಟ್ಟಣದಲ್ಲಿ ಇರುವ ಎಲ್ಲಾ ವಸತಿ ನಿಲಯಗಳನ್ನು ಹೊಸ ಕಟ್ಟಡಗಳಿಗೆ ಶಿಫ್ಟ್‌ ಮಾಡಲಾಗಿದೆ. ಇದು ಒಂದು ವಸತಿ ನಿಲಯ ಬಾಡಗಿ ಕಟ್ಟಡದಲ್ಲಿ ಹಲವು ವರ್ಷಗಳಿಂದ ನಡೆಸಲಾಗುತ್ತಿದ್ದು. ನಾನು ಶಾಸಕನಾದ ಮೇಲೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿ, ಕಟ್ಟಡ ಪೂರ್ಣಗೊಳಿಸಲಾಗಿದೆ. ಈ ಹಾಸ್ಟೆಲ್ ನೂತನ ಕಟ್ಟಡಕ್ಕೆ ಶೀಘ್ರದಲ್ಲಿ ಶಿಫ್ಟ್‌ ಮಾಡಲಾಗುವುದು ಹಾಗೂ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಆರೋಗ್ಯ ಹಾಗೂ ಶಿಕ್ಷಣಕ್ಕೆ ತೊಂದರೆ ಆಗದ ರೀತಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು. 

               ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ, ಜಿಲ್ಲಾ ಉಪ ನಿರ್ದೇಶಕರಾದ ಮಹೇಶ ಪೋತದಾರ, ಸಿಂದಗಿ ಸಹಾಯಕ ನಿರ್ದೇಶಕರಾದ ಭವಾನಿ ಪಾಟೀಲ, ಪ.ಪಂ ಸದಸ್ಯರಾದ ಶಾಂತಯ್ಯ ಜಡಿಮಠ, ಮುಖಂಡರಾದ ಎಂ.ಡಿ.ಮುಲ್ಲಾ, ಮಹಾಂತೇಶ ವಂದಾಲ, ಡಿಎಸ್‌ಎಸ್ ತಾಲೂಕು ಘಟಕದ ಸಂಚಾಲಕರಾದ ರಾಜಕುಮಾರ ಸಿಂದಗೇರಿ, ಬಸವರಾಜ ಇಂಗಳಗಿ, ಸಾಯಬಣ್ಣ ದಳಪತಿ, ಪ್ರಶಾಂತ ಭೂತಾಳೆ, ಯಮನೂರಿ ಹರಿಜನ, ಮಾಂತೇಶ ಚಲವಾದಿ,ವಾರ್ಡನ್ ನಫೀಸಾ ಬೇಗಂ, ಸರ್ವೇಶ ಆಲಮೇಲ ಸೇರಿದಂತೆ ಅಧಿಕಾರಿಗಳು, ಪಾಲಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.