ತಾಲೂಕಿನ 13 ಗ್ರಾಮಗಳ ದೇವಸ್ಥಾನಗಳಿಗೆ ಆರಾಧನಾ ಚೆಕ್ ವಿತರಿಸಿದ ಶಾಸಕ ಪಠಾಣ

ತಾಲೂಕಿನ 13 ಗ್ರಾಮಗಳ ದೇವಸ್ಥಾನಗಳಿಗೆ ಆರಾಧನಾ ಚೆಕ್ ವಿತರಿಸಿದ ಶಾಸಕ ಪಠಾಣ MLA Pathana distributed worship checks to temples in 13 villages of the taluk

ಶಿಗ್ಗಾವಿ 24 : ಕ್ಷೇತ್ರವು ಬಸವಾದಿ ಶರಣರು, ಕನಕದಾಸರು, ಶರೀಫರಂತ ಮಹಾಪುರುಷರು ಬಾಳಿದ ನಾಡು. ಪ್ರತಿ ಗ್ರಾಮ ವಿಭಿನ್ನ ಸಂಸ್ಕೃತಿಯಿಂದ ಕೂಡಿರುವುದರಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸುಮಾರು 400 ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.  ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮುಜಾರಾಯಿ ಇಲಾಖೆಯಿಂದ ಹಿಂದೂ ದೇವಸ್ಥಾನಗಳಿಗೆ ನೀಡಲಾಗುವ ಆರಾಧನಾ ಚೆಕ್ ಗಳನ್ನು ದೇವಸ್ಥಾನ ಕಮಿಟಿಯವರಿಗೆ ವಿತರಿಸಿ ಮಾತನಾಡಿದ ಅವರು ಈ ಹಿಂದೆ ತಾಲೂಕಿನ 13 ಗ್ರಾಮಗಳ ದೇವಸ್ಥಾನಗಳಿಗೆ ಆರಾಧನಾ ಚೆಕ್ ವಿತರಿಸಲಾಗಿತ್ತು.

ಇಂದು 19 ಗ್ರಾಮಗಳ ದೇವಸ್ಥಾನಗಳಿಗೆ ಚೆಕ್ ವಿತರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಗ್ರಾಮಗಳ ದೇವಸ್ಥಾನಗಳಿಗೆ ಆರಾಧನಾ ಚೆಕ್ ವಿತರಿಸಲಾಗುತ್ತದೆ ಎಂದರು. ತಾಲೂಕಿನ ಕನಕದಾಸರ ಕರ್ಮಭೂಮಿಯಾದ ಗುಡ್ಡದ ಚನ್ನಾಪುರ ಗ್ರಾಮದಲ್ಲಿರುವ ಚನ್ನಕೇಶ್ವರ ಮತ್ತು ಹೊರಬಿರೇಶ್ವರ ದೇವಸ್ಥಾನಗಳನ್ನು 17 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.   ತಾಲೂಕಿನ ಗ್ರಾಮದ ದೇವಸ್ಥಾನಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಬೇಡಿಕೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಿಂದ ಅನುದಾನ ತಂದು ಇನ್ನಷ್ಟು ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ ಎಂದು ಹೇಳಿದರು.  ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣನವರ, ಗುಡ್ಡಪ್ಪ ಜಲದಿ, ಎಸ್‌.ಎಫ್‌. ಮಣಕಟ್ಟಿ ಅಣ್ಣಪ್ಪ ಲಮಾಣಿ, ಸುಧೀರ ಲಮಾಣಿ, ಗೌಸಖಾನ್ ಮುನಸಿ, ಮಂಜುನಾಥ ತಿಮ್ಮಾಪುರ, ಶಿವಣ್ಣವರ, ವಸಂತಾ ಬಾಗೂರ, ಶಂಭು ಆಜೂರ, ನದಾಫ, ಅಶೋಕ, ಮಂಜುನಾಥ ಹಿರೂರ ಇತರರಿದ್ದರು.