ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಮನಗೂಳಿ ಚಾಲನೆ

ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಮನಗೂಳಿ ಚಾಲನೆ MLA Managooli launches foot-and-mouth disease vaccination campaign


ಸಿಂದಗಿ 07: ರೈತರಿಗೆ ಅರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ರೋಗವಾಗಿದ್ದು, ರೋಗದಿಂದ ಮುಕ್ತ ರಾಜ್ಯವನ್ನಾಗಿ ಮಾಡಲು ಹೊರಟ್ಟಿದ್ದು ಕಾರಣ ರೈತರು ಸಹಕರಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.   ಪಟ್ಟಣದ ಪಶು ಆಸ್ಪತೆಯಲ್ಲಿ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನ. 3ರಿಂದ ಡಿ. 2ರವರೆಗೆ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಗೋಮಾತೆಗೆ ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು. 

      ವೈದ್ಯಾಧಿಕಾರಿ ಡಾ.ಶಿವಶರಣ ಯಲಗೋಡ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಸುಮಾರು 11 ಸಾವಿರ ದನಗಳು, 8 ಸಾವಿರ ಎಮ್ಮೆಗಳು ಒಟ್ಟು 19 ಸಾವಿರ ಆಲಮೇಲ ತಾಲೂಕಿನಲ್ಲಿ ಆಕಳು, ಎಮ್ಮೆಗಳು ಸೇರಿ 15 ಸಾವಿರ ಎರಡು ತಾಲೂಕುಗಳಲ್ಲಿ 33 ಸಾವಿರ ಜಾನುವಾರುಗಳಿದ್ದು ಎಲ್ಲಾ ದನಗಳಿಗೆ  ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗ ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗಲುವ ಮಾರಕ ರೋಗವಾಗಿದ್ದು, ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟುಮಾಡುತ್ತದೆ. ವರ್ಷದಲ್ಲಿ ಕನಿಷ್ಟ ಎರಡು ಬಾರಿ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ರಾಜ್ಯ ಹಾಗೂ ದೇಶದಿಂದ ನಿರ್ಮೂಲನೆ ಮಾಡುವ ಗುರಿಹೊಂದಿದ್ದು ಈಗಾಗಲೇ 16 ಸುತ್ತು ಲಸಿಕಾ ಕಾರ್ಯಕ್ರಮವಾಗಿದ್ದು ಎರಡನೇ ಸುತ್ತಿನಲ್ಲಿ 8ನೇ ಅಭಿಯಾನವಾಗಿದೆ. ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ. ಕಾರಣ ಎಲ್ಲಾ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು.  ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಕರು, ದನ ಮತ್ತು ಎಮ್ಮೆಗಳಿಗೆ ತಪ್ಪದೇ ಲಸಿಕೆ ಹಾಕಿಸಿ. ಗರ್ಭಧರಿಸಿದ ಹಸು, ಎಮ್ಮೆಗಳಿಗೂ ಸಹ ತಪ್ಪದೇ ಲಸಿಕೆ ಹಾಕಿಸಿ, ಹಿಂದೆ ಎಷೆ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ, ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.  

     ಸುನಂದಾ ಯಂಪೂರೆ, ನಾಮನಿರ್ದೇಶಿತ ಸದಸ್ಯೆರಾದ ಜೈ ಭೀಮ ತಳಕೇರಿ ಅವರು, ಮುಖ್ಯ ಪಶು ವೈದ್ಯಾಧಿಕಾರಿ ಡಾ ಮಾರುತಿ ತಡಲಗಿ, ಡಾ ಶರಣಗೌಡ ಬಿರಾದಾರ, ಎಸ್ ಎನ್ ಜೋಶಿ, ಚೂರಿ, ಪ್ರಭು ಬಿರಾದಾರ, ಯಮನಪ್ಪ ಚೌಧರಿ, ಎಸ್ ಎಂ ಬಗಲಿ, ಪರಶುರಾಮ ಬಿಸನಾಳ, ಅಯ್ಯಪ್ಪ, ಅಂಬ್ರೀಶ ಚೌಗಲೆ ಮತ್ತು ಇಲಾಖೆಯ ಎಲ್ಲ ಸಿಬ್ಬಂದಿ ವರ್ಗ ಮತ್ತು ತಾಲೂಕಿನ ಎಲ್ಲ ಪಶುಸಕಿಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.