ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರಿಗೆ ಶಾಸಕ ಹಿಟ್ನಾಳ ಕರೆ

ಲೋಕದರ್ಶನ ವರದಿ

ಕೊಪ್ಪಳ 25: ಹುಲಗಿ ಗ್ರಾಮದ ತುಂಗಭದ್ರಾ ಪ್ರೌಢ ಶಾಲೆಯ 2019-20 ನೇ ಸಾಲಿನ 8ನೇ ತರಗತಿ ವಿದ್ಯಾಥರ್ಿಳಿಗೆ ಉಚಿತ ಬೈಸಕಲ್ ವಿತರಣೆ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಮಕ್ಕಳಿಗೆ ಶಿಕ್ಷಣ ಹೋರೆಯಾಗದಂತೆ ಅವರಲ್ಲಿ ವಿಧ್ಯಾಭ್ಯಾಸದ ಜೋತೆಗೆ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನಮಾಡಬೇಕು. ಸರಕಾರವು ಶಿಕ್ಷಣದ ಜೋತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ಮತ್ತು ಅನುದಾನ ನೀಡುತ್ತದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ನಮ್ಮ ಜಿಲ್ಲೆಯ ವಿಧ್ಯಾಥರ್ಿಗಳು ಪಾಲ್ಗೋಂಡು ನಾಡಿಗೆ ಹಾಗೂ ಜಿಲ್ಲೆಗೆ ಕೀತರ್ಿ ತರುವಂತೆ ಮಾಡಬೇಕು. ನಮ್ಮ ಭಾಗವೂ 371ಜೆ ಕಾಲಂಗೆ ಒಳವಡುವುದರಿಂದ ಈ ಭಾಗದ ವಿದ್ಯಾಥರ್ಿಗಳಿಗೆ ವಿಫಲವಾಗಿರುತ್ತವೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾಥರ್ಿ-ವಿದ್ಯಾರ್ಥಿ ನಿಯರು ಪಡೆದುಕೊಳ್ಳಬೇಕು. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಿದರೆ ಈ ಜಿಲ್ಲೆಯಿಂದ ಐ.ಎ.ಎಸ್ ಇನ್ನಿತರ ಉನ್ನತ ಹುದ್ದೆಗೆ ಹೊಂದಲು ಅನೂಕೂಲ ವಾಗುವದೆಂದು ತಿಳಿಸಿದರು. ಹಾಗೂ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ಬರವ ಶೈಕ್ಷಣಿಕ ವರ್ಷದಲ್ಲಿ ಹುಲಗಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಎರಡು ದಿನಗಳಲ್ಲಿ ಬಗೆಹರಿಸಲಾಗುವದೆಂದು ಹೇಳಿದರು.

ಜಿ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಮಾಜಿ ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ವೀರಣ್ಣ ಹುಲಗಿ, ಜಿಯಾಖಾನ್, ಮಂಜುನಾಥ ಗೊಂಡಬಾಳ, ಶ್ರೀನಿವಾಸ ಪಂಡಿತ್, ವಿಜಯಕುಮಾರ, ಹನುಮಂತಪ್ಪ ನಾಯಕ್, ಅನಿಲಕುಮಾರ, ನಾಗರತ್ನ, ಕಪ್ಪತ್ತೇಪ್ಪ, ಪ್ರಭುರಾಜ ಪಾಟೀಲ, ಬಾಬುಗೌಡ ಪಾಟೀಲ, ಹನುಮಂತಪ್ಪ ಗಿಡ್ಡಾಲಿ, ಯೋಗೇಶ ಇಳಿಗೇರ, ಇನ್ನೂ ಅನೇಕರು ಉಪಸ್ಥಿತರಿದ್ದರು.