ಅಂಗನವಾಡಿ ಕಟ್ಟಡಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ

ಅಂಗನವಾಡಿ ಕಟ್ಟಡಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ MLA Dr. Chandru Lamani performs Bhoomi Pooja for Anganwadi building

ಅಂಗನವಾಡಿ ಕಟ್ಟಡಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ 


ಶಿರಹಟ್ಟಿ 16: ತಾಲೂಕಿನ ಹೊಳೆಇಟಗಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಂಗನವಾಡಿ ನೂತನಕಟ್ಟಡಕ್ಕೆ ಚಾಲನೆ ನೀಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿಇನ್ನು ಅನೇಕ ಅಂಗನವಾಡಿಗಳು ಬಾಡಿಗೆ ಕಟ್ಚಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಮಾನಗಳಲ್ಲಿ ಸರಕಾರದ ಗಮನಕ್ಕೆ ತಂದುಎಲ್ಲಾ ಅಂಗನವಾಡಿಗಳಿಗೆ ಸ್ವಂತಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಎಂದು ಶಾಸಕ ಡಾ. ಚಂದ್ರು ಲಮಾಣಿ ಭರವಸೆ ನೀಡಿದರು. 

ಅವರುತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿಜಿಲ್ಲಾ ಪಂಚಾಯತ್, ಪಂಚಾಯತ್‌ರಾಜ್‌ವಿಭಾಗ ಹಾಗೂ ಉಪವಿಭಾಗಗದಗಇವರು ಏರಿ​‍್ಡಸಿದ ಅಂಗನವಾಡಿ20 ಲಕ್ಷರೂನೂತನಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ, ಚಿಕ್ಕಮಕ್ಕಳಿಗೆ ಪ್ರಾರಂಭಿಕ ಹಂತದಿಂದಲೇಉತ್ತಮ ಸೌಕರ್ಯಗಳೊಂದಿಗೆ ದೊರೆಯುವಉದ್ದೇಶದಿಂದಅಂಗನವಾಡಿಕಟ್ಟಡ ನಿರ್ಮಾವಾಗುತ್ತಿದೆ.ಗುತ್ತಿಗೆದಾರರುಅಂಗನವಾಡಿಕಟ್ಟಡವನ್ನು ಸುಸಜ್ಜಿತವಾಗಿ ನಿಗದಿತಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು.ಕಳಪೆ ಕಾಮಗಾರಿಯಾಗದಂತೆ ಸ್ಥಳೀಯರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಮಂಜನಾಥ ಶಂಕಿನದಾಸರ, ಎಸ್ ಪಿ.ಕಂಠಿಗೌಡ್ರ, ದ್ಯೌಮವ್ವ ನಡುವಿನಕೇರಿ, ಮುತ್ತಪ್ಪದಾಸರ, ಬಸವರಾಜ ಬಾರಕೇರ, ಫಕ್ಕೀರ​‍್ಪ ನರಸಮ್ಮನವರ, ಈರಣ್ಣ ಮೆಣಸಿನಕಾರಿ, ಚನ್ನವೀರಗೌಡತೆಗ್ಗಿನಮನಿ, ಈಶ್ವರ ಹೊನ್ನಪ್ಪನವರ, ಶಾಂತಗೌಡ ಪಾಟೀಲ, ದೇವರಾಜ ಮೇಟಿ, ನಾಗನಗೌಡ ಮಣಕವಾಡ, ಹೊನ್ನೇಶ ಪೋಟಿ, ಶರಣಪ್ಪ ಬಾರಕೇರ್, ರವಿ ಕನವಳ್ಳಿ, ಎಇಇ ಮಲ್ಲಿಕಾರ್ಜುನಗೌಡ ಪಾಟೀಲ ಹಾಗೂ ಅನೇಕರುಇದ್ದರು.