ಶಾಸಕ ಬೆಲ್ದಾಳೆ ಬೀರಲಿಂಗೇಶ್ವರ ಭವನಕ್ಕೆ 20 ಲಕ್ಷ ಅನುದಾನ ಘೋಷಣೆ
MLA Beldale announces Rs 20 lakh grant for Beeralingeshwara Bhavan
ಬೀದರ್ 03: ಭಾನುವಾರ ಬೀರಲಿಂಗೇಶ್ವರಜಾತ್ರೆಯಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡರುಗೋರನಳ್ಳಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಘೋಷಣೆ ಬೀರಲಿಂಗೇಶ್ವರ ಭವನಕ್ಕೆ 20 ಲಕ್ಷಅನುದಾನಬೀದರ್‌ದಕ್ಷಿಣಕ್ಷೇತ್ರದ ಗೋರನಳ್ಳಿ ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರಜಾತ್ರಾ ಮಹೋತ್ಸವ ಶೃದ್ದೆ, ಭಕ್ತಿಯಿಂದಅದ್ದೂರಿಯಾಗಿ ನಡೆಯಿತು. ಕ್ಷೇತ್ರದ ಶಾಸಕರಾದಡಾ.ಶೈಲೇಂದ್ರ ಬೆಲ್ದಾಳೆ ಅವರು ಹಾಗೂ ಗ್ರಾಮದ ಮುಖಂಡರು ಹಾಗೂ ವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರುಜನರು ಪಾಲ್ಗೊಂಡಿದ್ದರು.ಗ್ರಾಮದ ಹನುಮಾನ ಮಂದಿರದಿಂದ ಬೀರಲಿಂಗೇಶ್ವರ ಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು.ಡೊಳ್ಳುಕುಣಿತ ವಿಶೇಷ ಆಕರ್ಷಣೆಯಾಗಿತ್ತು. ಮಹಿಳೆಯರು ಕುಂಭ, ಕಲಷ ಹೊತ್ತು ಭಕ್ತಿಯ ಹೆಜ್ಜೆ ಹಾಕಿದರು.ಮಹಾತ್ಮ ಬೀರಲಿಂಗೇಶ್ವರ ಮಹಾರಾಜಕಿಜೈಉದ್ಘೋಷ ಮೊಳಗಿದವು.ಅನೇಕರು ಸಾಂಪ್ರದಾಯಿಕ ನೃತ್ಯ ಮಾಡಿ ಗಮನ ಸೆಳೆದರು.ಮಂದಿರದಲ್ಲಿ ಪೂಜೆ, ಅಭಿಷೇಕ ಸೇರಿಧಾರ್ಮಿಕಕಾರ್ಯಕ್ರಮ ನಡೆದವು.ಮರದಲ್ಲಿಟ್ಟ ಅಂಬಲಿ ಮಡಿಕೆ ಬಡಿಗೆಯಿಂದಒಡೆಯುವುದುಜಾತ್ರೆ ವಿಶೇಷವಾಗಿತ್ತು.ಕ್ಷೇತ್ರದ ಶಾಸಕರಾದಡಾ.ಶೈಲೇಂದ್ರ ಬೆಲ್ದಾಳೆ ಉತ್ಸವದಲ್ಲಿ ಭಾಗಿಯಾಗಿ, ದರ್ಶನ ಪಡೆದು ಮಾತನಾಡಿ, ಎಲ್ಲ ಸಮಾಜದವರು ಸೇರಿಇಲ್ಲಿ ವೈಭವದಿಂದಜಾತ್ರೋತ್ಸವಆಚರಿಸುವುದು ಮಾದರಿಯಾಗಿದೆ.ಧರ್ಮ ಸಮನ್ವಯಕ್ಕೆ ಈ ಜಾತ್ರೆ ಸಾಕ್ಷಿಯಾಗಿದೆ. ಸ್ಥಳೀಯರ ಅಪೇಕ್ಷೆಯಂತೆ ಮಂದಿರದ ಪಕ್ಕದಲ್ಲಿರುವಜಾಗದಲ್ಲಿ ವಿವಿಧಕಾರ್ಯಕ್ರಮ ನಡೆಸಲು ಅನುಕೂಲವಾಗಲು ಸಮುದಾಯ ಭವನಕ್ಕೆ 20 ಲಕ್ಷರೂ.ಅನುದಾನ ನೀಡುತ್ತಿದ್ದು, ಶೀಘ್ರ ಕೆಲಸ ಆರಂಭಿಸುವುದಾಗಿ ಘೋಷಿಸಿದರು.ಬಳಿಕ ಗ್ರಾಮಸ್ಥರು ಶಾಸಕರಿಗೆ ಕಂಬಳಿ ಹೊದ್ದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡಅಮೃತರಾವಚಿಮಕೋಡೆ, ಪ್ರಮುಖರಾದ ಮಾರುತಿಗೈಬಣ್ಣ ಮೇತ್ರೆ, ನರಸಪ್ಪ ಪೂಜಾರಿ, ಮಲ್ಲಿಕಾರ್ಜುನ ಮೇತ್ರೆ, ಮಲ್ಲಪ್ಪಅರ್ಜಗೊಂಡ, ಸುಭಾಷ ಹೂಗಾರ್, ಬಸವರಾಜತೋರಣ, ಗಣಪತಿರೆಡ್ಡಿ, ಗಣಪತರಾವ್ ಪಾಟೀಲ್, ಶಂಕರ್‌ಅರಗಲ್‌ದೊಡ್ಡಿ, ಉದಯಕುಮಾರತೋರಣ, ಶಿವಕುಮಾರ ಹಜಾರೆ, ಗಜಾನಂದತೋರಣ, ಜಗನ್ನಾಥ ಮೈಲಾರ, ಪ್ರಕಾಶ್‌ಖಂಡೋಬ, ಶಿವಕುಮಾರ ಸ್ವಾಮಿ, ಚಂದ್ರಯ್ಯ ಸ್ವಾಮಿ, ಯಾದವರಾವ್‌ಅರ್ಜಗೊಂಡ, ಶಿವಕುಮಾರ ಅರಗಲ್ದೊಡ್ಡಿ, ಸಾಯಿನಾಥ ಮೇತ್ರೆ, ಗಣೇಶ್‌ಅರ್ಜಗೊಂಡ, ಗಣಪತಿಅರ್ಜಗೊಂಡಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 