ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ 5 ರೂ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ರವರಿಂದ ಭೂಮಿ ಪೂಜೆ

  ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ 5 ರೂ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ರವರಿಂದ ಭೂಮಿ ಪೂಜೆ   MLA Ashok Managuli performs Bhoomi Puja for Rs 5 crore worth of work in Mahatma Gandhiji Circle

ಸಿಂದಗಿ 12: ದೇಶದ ಒಂದು ಭಕ್ತಿ ಮತ್ತು ಗೌರವದ ಅನುಗುಣವಾಗಿ ಸರಕಾರಿ ಎಲ್ಲಾ ಇಲಾಖೆಗಳು ಇರುವುದರಿಂದ ಒಂದು ರಾಷ್ಟ್ರೀಯ ಲಾಂಛನ ವೃತ್ತ ಇರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಅಂಶಗಳನ್ನು ಭೂಮಿ ಪೂಜೆ ನೇರವೇರಿಸಲಾಗಿದೆ ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗಾಗಿ ಎರಡುವರೆ ವರ್ಷದ ನನ್ನ ಕಾಲಾವಧಿಯಲ್ಲಿ ಸರಕಾರದಿಂದ ಸಕಷ್ಟು ಅನುದಾನ ತರುವ ಮೂಲಕ ಅಭಿವೃದ್ಧಿಗೆ ಮೂಂದಾಗಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ 2023-24 ನೇ ಸಾಲಿನ 5054-04-37-01-154 ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆ (ಅಪೆಂಡಿಕ್ಸ-ಇ) ಯೋಜನೆಯಡಿಲ್ಲಿನ ಗಾಂಧಿಜಿ ವೃತ್ತದಿಂದ ಡಾಲಪಿನ್ ದಾಬಾ ಆಲಮೇಲ-ಸಿಂದಗಿ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ 18.39 ರಿಂದ 19.50ರವರೆಗೆ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಮಾಡುವದು. ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವ ಮತ್ತು ರಾಷ್ಟ್ರೀಯ ಲಾಂಛನ ರೂ 5 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಿಂದಗಿ ಕ್ಷೇತ್ರದ 106 ಹಳ್ಳಿ 16 ತಾಂಡಾಗಳ ಸರ್ವಾಂಗಿಣ ಅಭಿವೃದ್ದಿಗೆ 5 ಗ್ಯಾರೆಂಟಿಗಳ ನೀಡುವುದರ ಮಧ್ಯದಲ್ಲಿ ಈ ಕ್ಷೇತ್ರಕ್ಕೆ ಸರ್ವಾಂಗಿಣ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ. ಎಂದು ಹೇಳಿದ ಅವರ, ಇನನೂ ಬಾಕಿ ಉಳಿದ ಕಾಮಗರಿಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಚಿಕ್ಕಸಿಂದಗಿ ಬೈಪಾಸ್ ನಿಂದ ನವೀನ ಪೆಟ್ರೋಲ ಪಂಪವರೆಗೆಗಿನ ರಸ್ತೆ 2019 ರಲ್ಲಿ ರಸ್ತೆ ನಿರ್ಮಾಣವಾಗಿತ್ತು ನಿತ್ಯ ತಿರುಗಾಡುವ ರಸ್ತೆಯಾಗಿರುವ ತುಂಬಾ ಹದಿಗೆಟ್ಟಿದ್ದು ರೂ 4 ಕೋಟಿ 60 ಲಕ್ಷ ಮಂಜೂರು ಮಾಡಿಸುವಂತ ಕಾರ್ಯ ಮಾಡಲಾಗಿದೆ. ಟೀಪು ಸುಲ್ತಾನ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರೂ. 2 ಕೋಟಿ 15 ಲಕ್ಷ ಡಾಂಬರಿಕರಣ ರಸ್ತೆಗೆ ಹಾಗೂ ಕೆರೆ ಅಭಿವೃದ್ಧಿಗೆ ರೂ 2 ಕೋಟಿ ಹಣ ಮಂಜುರಾಗಿದೆ. ಅಲ್ಲದೆ ಜನದಟ್ಟನೆಯ ಸಂಚಾರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನ್ನು ಅಳವಡಿಸಿ ಸಿಗ್ನಲ್ ಅಳವಡಿಕೆಗಾಗಿ ರೂ 1 ಕೋಟಿ 10 ಲಕ್ಷಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಜನೆವರಿವರೆಗೆ ಮಂಜೂರಾಗುವ ಸಾದ್ಯತೆಯಿದೆ. ಸಾರ್ವಜನಿಕರ ಆಸ್ಪತ್ರೆಯಲ್ಲಿರುವ ಹಳೆ ಅಂಬುಲೆನ್ಸಗಳು ಕೆಲಸಕ್ಕೆ ಬರದೆ ಇರುವುದರಿಂದ ಹೊಸ ಅಂಬುಲೆನ್ಸ ಖರೀದಿಗೆ ಶಾಸಕರ ಅನುದಾನದಡಿ ರೂ 25 ಲಕ್ಷಗಳ ವೆಚ್ಚದಲ್ಲಿ ಹೈಟೆಕ್ ಅಂಬುಲೇನ್ಸ ಮಂಜೂರಾಗಿದೆ ಈ ಕಾಮಗಾರಿಗಳು ಸೇರಿದಂತೆ ಹಲವಾರು ಕೆಲಸಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಿದ್ದೇನೆ ಕಾರಣ ಈ ಕ್ಷೇತ್ರದ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಮಾತನಾಡಿ, ಅಪಘಾತಗಳನ್ನು ತಡೆಗಟ್ಟಲು ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಟ್ರಾಫಿಕ ಸಿಗ್ನಲ್ ಅಳವಡಿಕೆಗೆ ಅನುದಾನ  ಸರಕಾರದಿಂದ ಮಂಜೂರು ಪಡಿಸಬೇಕು ಎಂದು ಮನವಿ ಮಾಡಿದರು. 

.