ಪ್ರಶಸ್ತಿ ಪುರಸ್ಕೃತೆ ಉಮಾ ತಂಬ್ರಳ್ಳಿ ನಿವಾಸಕ್ಕೆ ಶಾಸಕರ ಭೇಟಿ

MLA's visit to awardee Uma Tambralli's residence

ಪ್ರಶಸ್ತಿ ಪುರಸ್ಕೃತೆ ಉಮಾ ತಂಬ್ರಳ್ಳಿ ನಿವಾಸಕ್ಕೆ ಶಾಸಕರ ಭೇಟಿ 

ಕೊಪ್ಪಳ 15:  ಉತ್ತಮ ಸಮಾಜ ಸೇವಾ ಕಾರ್ಯಕ್ಕೆ ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೋಡ ಮಾಡಿದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಯವರ ಕೊಪ್ಪಳದ ನಿವಾಸಕ್ಕೆ ರವಿವಾರದಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಭೇಟಿ ಮಾಡಿ ಶುಭ ಕೋರಿದರು, ಇದೆ ವೇಳೆ ಶಾಸಕರಿಗೆ ತಂಬ್ರಳ್ಳಿ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಕ್ಲಬ್ ಪರವಾಗಿ ಪ್ರಶಸ್ತಿ ಪುರಸ್ಕೃತೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಮಹೇಶ್ ತಂಬ್ರಳ್ಳಿ, ಪ್ರಭು ತಂಬ್ರಳ್ಳಿ, ಹಿರಿಯ ವೈದ್ಯ ಡಾ, ಕೆ,ಜಿ ಕುಲಕರ್ಣಿ, ಡಾ, ರಾಧಾ ಕುಲಕರ್ಣಿ, ನಗರಸಭೆಯ ಮಾಜಿ ಅಧ್ಯಕ್ಷ ಸುರೇಶ್ ದೇಸಾಯಿ ಸಮಾಜದ ನಾಯಕರಾದ ಶಿವು ಪೌಲಿ ಶೆಟ್ಟರ್, ಕರಿಯಪ್ಪ ಸಂಗಟಿ ಸುದೆಶ್ ಪಟ್ಟಣಶೆಟ್ಟಿ,ಸೇರಿದಂತೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳಾದ ಸುಜಾತಾ ಪಟ್ಟಣಶೆಟ್ಟಿ, ಮಧು ಶೆಟ್ಟರ್, ಮೀನಾಕ್ಷಿ ಬಣ್ಣದ ಬಾವಿ, ಮಧು ನಿಲೋಗಲ್, ಆಶಾ ಕವಲೂರು, ನಾಗವೇಣಿ, ಸೇರಿದಂತೆ ಸದಸ್ಯರು ಮಹಿಳಾ ಸಂಘಟನೆ ಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.