ಮೆಮು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಪ್ರಯಾಣಿಕರ ರೈಲಿಗೆ ಉತ್ತರ ಕರ್ನಾಟಕದಲ್ಲಿ ್ರ್ರಥಮ ಬಾರಿಗೆ ಚಾಲನೆ
MEMU Mainline Electric Multiple Unit Passenger Train Commences Operation for the First Time in Nort
ಹೊಸಪೇಟೆ 31: ರಾಜ್ಯದಲ್ಲಿ ಬೆಂಗಳೂರು-ಮೈಸೂರು-ತುಮಕೂರು ಭಾಗದಲ್ಲಿ ಮಾತ್ರ ಸಂಚರಿಸುತ್ತಿರುವ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ಪ್ರಯಾಣಿಕರ ರೈಲಿಗೆ ಉತ್ತರ ಕರ್ನಾಟಕದಲ್ಲಿ ್ರ್ರಥಮ ಬಾರಿಗೆ ಚಾಲನೆ ನೀಡಲಾಗಿದೆ. ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ಹುಬ್ಬಳ್ಳಿ-ಹೊಸಪೇಟೆ-ಗುಂತಕಲ್ ನಡುವೆ ಗಾಡಿ ಸಂಖ್ಯೆ : 56911/56912, ದಿನಾಂಕ : 31.10.2025 ರಿಂದ ಸಂಚಾರ ಆರಂಭಿಸಿದೆ. ಈ ರೈಲು ಇತರ ಸಾಂಪ್ರದಾಯಿಕ ಹಾಗೂ ಡೆಮು ರೈಲುಗಳಿಗಿಂತ ಭಿನ್ನವಾಗಿರುತ್ತದೆ. ಡೆಮು ರೈಲು ಡೀಸಲ್ ಮತ್ತು ವಿದ್ಯುತ್‌ನಿಂದ ಸಂಚರಿಸಿದರೆ ಮೆಮು ರೈಲು ಸಂಪೂರ್ಣವಾಗಿ ವಿದ್ಯುತ್ ಅವಲಂಬಿತವಾಗಿದೆ. ಈ ರೈಲು ಹೊಗೆ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ರೈಲಿನ ಎರಡು ಬದಿ ಹಾಗೂ ಮಧ್ಯಭಾಗದಲ್ಲಿ ಇಂಜಿನ್ ಇರುವುದರಿಂದ ಸಾಮಾನ್ಯವಾಗಿ ಯಾವುದೇ ಸಂದರ್ಭದಲ್ಲಿ ರೈಲು ದುರಸ್ಥಿಯಾಗಿ ನಿಲ್ಲುವುದಿಲ್ಲ. ಗಮ್ಯ ನಿಲ್ದಾಣದಲ್ಲಿ ಇಂಜಿನ್ ತಿರುಗುಸುವಿಕೆ ಇಲ್ಲದಿರುವುದರಿಂದ ಸಮಯ ವ್ಯರ್ಥವಾಗದೆ ಕೂಡಲೇ ಅಲ್ಲಿಂದ ನಿರ್ಗಮಿಸಿ, ಸಕಾಲದಲ್ಲಿ ರೈಲಿನ ಸಮಯಪಾಲನೆಗೆ ಅನುಕೂಲವಾಗಿದೆ. ರೈಲಿನ ಕೋಚ್‌ಗಳು ಸುಸರ್ಜಿತವಾಗಿದ್ದು ಪ್ರಯಾಣಿಕರಿಗೆ ಅಗತ್ಯವಾದ ಮೂಲ ಸೌಲಭ್ಯಗಳಿರುತ್ತವೆ. ರೈಲಿನಲ್ಲಿ (ಉಕಖ) ಜಿ.ಪಿ.ಎಸ್.ಸೌಲಭ್ಯ ಅಳವಡಿಸಿರುವುದರಿಂದ ಪ್ರತಿಯೊಂದು ಮುಂದಿನ ನಿಲ್ದಾಣದ ನಿಲುಗಡೆಯನ್ನು ಮೊದಲೇ ಈ ರೈಲಿನಲ್ಲಿ ಪ್ರಕಟಿಸಲಾಗುವುದು (ಉದಾಃ ಬೆಂಗಳೂರಿನ ಮೆಟ್ರೋ ರೈಲಿನಂತೆ). ಇತರ ರೈಲುಗಳಿಗಿಂತ ನಿರ್ವಹಣ ವೆಚ್ಚವು ಕಡಿಮೆ ಮತ್ತು ಮಿತವ್ಯಯವಾಗಿರುತ್ತವೆ. ಈ ಮುಂಚೆ ಸಂಚರಿಸುತ್ತಿದ್ದ ಹುಬ್ಬಳ್ಳಿ-ಗುಂತಕಲ್ ಸಾಂಪ್ರದಾಯಿಕ (ಋಈ) ಐ.ಸಿ.ಎಫ್. ರೈಲನ್ನು ಬದಲಾಯಿಸಿ ಅದೇ ವೇಳಾಪಟ್ಟಿಯಲ್ಲಿ ಮೆಮು ಆರಂಭಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 7.45ಕ್ಕೆ ನಿರ್ಗಮಿಸಿ ಹೊಸಪೇಟೆಗೆ 11.00 ಗಂಟೆಗೆ ಆಗಮಿಸಿ, ಇಲ್ಲಿಂದ ನಿರ್ಗಮಿಸಿ ಗುಂತಕಲ್‌ಗೆ ಮ.2.30 ಗಂಟೆ ತಲುಪುತ್ತದೆ. ಅಲ್ಲಿಂದ ಮ.3.30ಕ್ಕೆ ನಿರ್ಗಮಿಸಿ ಹೊಸಪೇಟೆಗೆ ಸ.6.30ಕ್ಕೆ ಆಗಮಿಸಿ, ಹುಬ್ಬಳ್ಳಿಯನ್ನು ರಾತ್ರಿ 10.30ಕ್ಕೆ ತಲುಪುತ್ತದೆ. ಪ್ರಯಾಣಧರ ಹೊಸಪೇಟೆಯಿಂದ ಹುಬ್ಬಳ್ಳಿಗೆ ರೂ.35/- ಇದ್ದು, ಬಳ್ಳಾರಿಗೆ ರೂ.20/- ಹಾಗೂ ಗುಂತಕಲ್‌ಗೆ ರೂ.30/- ನಿಗದಿಪಡಿಸಿದೆ. ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ ಮಾರ್ಗದಲ್ಲಿ ಮೆಮು ರೈಲು ಆರಂಭಿಸುವಂತೆ ಕಳೆದ 1 ವರ್ಷದಿಂದ ವಿಜಯನಗರ ರೈಲ್ವೇ ಬಳಕೆದಾರರ ಸಂಘವು ನೈರುತ್ಯ ರೈಲ್ವೇ ಪ್ರದಾನ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಇಲಾಖೆಯ ಅಧಿಕಾರಿಗಳಿಗೆ ವಿಜಯನಗರ ರೈಲ್ವೇ ಬಳಕೆದಾರರ ಸಂಘವು ಕೃತಜ್ಞತೆ ಸಲ್ಲಿಸಿದ್ದು, ಉತ್ತರ ಕರ್ನಾಟಕದಿಂದ ರಾಯರ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಈ ರೈಲನ್ನು ಮಂತ್ರಾಲಯದ (ರಾಯಚೂರು) ವರೆಗೆ ವಿಸ್ತರಿಸುವಂತೆ ಆಗ್ರಹಪಡಿಸಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 