ಪ್ರೇಮ ಪ್ರಕರಣ: ಯುವಕನ ಕೊಲೆ ಖಂಡನೀಯ
Love affair: The murder of a young man is condemnable
ಪ್ರೇಮ ಪ್ರಕರಣ: ಯುವಕನ ಕೊಲೆ ಖಂಡನೀಯ
ಕೊಪ್ಪಳ 06: ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಪ್ರೇಮ ಪ್ರಕರಣದ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ಅತ್ಯಂತ ಖಂಡನೀಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರೆಲ್ಲರಿಗೂ ಬೇಲ್ ನೀಡದೇ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅಗ್ರಹಿಸಿರುವ ಪ್ರಗತಿಪರ ಮುಖಂಡರಾದ ಅಲ್ಲಂಪ್ರಭು ಬೆಟದೂರು, ಬಸವರಾಜ ಸುಳೆಭಾವಿ ಒತ್ತಾಯಿಸಿದರಲ್ಲದೇ ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿರುವ ಎಸ್‌ಪಿ ಅವರು ಆರೋಪಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಂತೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯಿಂದ ಅವರುಕರ್ತವ್ಯಕ್ಕೆಚ್ಯುತಿತಂದಿದ್ದಾರೆಎಂದುಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.ಕೊಪ್ಪಳ ನಗರದಲ್ಲಿ ಈ ರೀತಿ ಕೊಲೆ ನಡೆದಿರುವ ಘಟನೆ ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಒಂದು ಕೊಮಿನ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆಇನ್ನೊಂದು ಕೊಮಿನ ಯುವಕನನ್ನು ಮಚ್ಚಿನಿಂದ ಕೊಲೆ ಮಾಡುವಂತಹದೃಷ್ಕೃತ್ಯಕ್ಕೆಯುವಕರು ಕೈ ಹಾಕಿರುವುದುಖಂಡನೀಯವಾಗಿದೆ. ಪ್ರೀತಿ, ಪ್ರೇಮಕ್ಕೆಜಾತಿ, ಧರ್ಮಅಡ್ಡಿ ಬರಬಾರದು.ಎರಡುಕಡೆಯ ಪಾಲಕರುಇದನ್ನು ಸರಿಪಡಿಸಿ ಅಂತರ್‌ಜಾತಿ ವಿವಾಹ ಮಾಡಿ ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಿತ್ತು.ಕೆಲವು ಮುಖಂಡರುಕೂಡಾಇದನ್ನು ಬಗೆಹರಿಸಿ ಸೌಹಾರ್ದ ವಾತಾವರಣ ಮೂಡಿಸಬೇಕಾಗಿತ್ತು.ಆದರೆಇದು ಸಾಧ್ಯವಾಗದೇಕೊಲೆಯ ಹಂತಕ್ಕೆ ಹೋಗಿರುವುದು ನೋವ್ವಿನ ಸಂಗತಿಯಾಗಿದೆ.ಈ ಘಟನೆಯಲ್ಲಿ ಕೋಮು ಭಾವನೆ ಸೃಷ್ಟಿಸಬಾರದು.ಎಲ್ಲರು ಸಾಮಾರಸ್ಯಕಾಪಾಡಬೇಕು.ಎಂದು ಸಾರ್ವಜನಿಕರಿಗೆ ಪ್ರಗತಿಪರ ಮುಖಂಡರು ಮನವಿ ಮಾಡಿದರು.ಗೋಷ್ಟಿಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರತ್ನಾಕರ, ಕೊಲೆಯಾದಯುವಕನತಂದೆ ನಿಂಗಜ್ಜ, ಮುಖಂಡ ಬಸವರಾಜ ಶಿಲಂವತರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 