ಹಿಂದುಳಿದ ವರ್ಗದ ತಾಲೂಕು ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta attack on backward class taluk officer's house

ಹಿಂದುಳಿದ ವರ್ಗದ ತಾಲೂಕು ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯ ಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ತಾಲೂಕಿನ ಹಿಂದುಳಿದ ವರ್ಗದ ಇಲಾಖೆಯ ತಾಲೂಕು ಅಧಿಕಾರಿ ಆರ್‌.ಹೆಚ್‌.ಲೋಕೇಶ್ ಅವರ ಇಲ್ಲಿನ ರಾನಾಂಜಿನೇಯ ನಗರದಲ್ಲಿನ ಮನೆಯ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಲಾಖೆಗೆ ವಾರ್ಡ್‌ ನ್ ಆಗಸ್ಟ್‌ ನೇಮಕಗೊಂಡು ಲೋಕೇಶ್ ತಾಲೂಕು ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು.ಎರೆಡು ಹಂತಸ್ತಿನ 2 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಮನೆ ಇವರದ್ದಾಗಿದೆ. ಮೂಲತಃ ಕುಡಿತಿನಿ ಗ್ರಾಮದವರಾದ ಇವರು ಬಿಸಿಎಂ ಹಾಸ್ಟಲ್ ನಲ್ಲಿಯೇ ವಿದ್ಯಾಭ್ಯಾಸ ಮಾಡಿ ನೌಕರಿಪಡೆದವರಾಗಿದ್ದಾರೆ. ಕುರುಗೋಡು ಬಳಿ ನಾಲ್ಕು ಎಕರೆ ತೋಟ ಹೊಂದಿದ್ದಾರೆ ಎಂದು ಮಾಹಿತಿ ಇದೆ. ಇವರ ಹುಟ್ಟು ಹಬ್ಬಕ್ಕೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಹೂವಿನ ಮಳೆ ಸುರಿಸಿ ಸ್ವಾಗತಿಸಿದ್ದ ವೀಡಿಯೋ ಸೋಶಿಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ರೀತಿ ಮಾಡದಿದ್ದರೆ ಹಾಸ್ಟಲ್ ಮಕ್ಕಳಿಗೆ ಲೋಕೇಶ್ ನಿಂದ ಕಿರುಕುಳ ಅನುಭವಿಸಬೇಕಿತ್ತೆಂಬ ಆರೋಪವೂ ಕೇಳಿ ಬಂದಿದೆ. ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಇವರು. ಇತ್ತಿಚೆಗೆ ನಡೆದ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಆಂತರಿಕವಾಗಿ ಇಲಾಖೆಯ ವಲಯದಲ್ಲಿ ಪ್ರಭಾವಕ್ಕೆ ಗಳಾಗಿ ವರ್ಗಾವಣೆ ದಂಧೆ ಮಾಡುತ್ತಿದ್ದರೆಂಬ ಆರೋಪವೂ ಕೇಳಿ ಬಂದಿದೆ. ಇವರು ಇಲಾಖೆಯ ಅನುಮತಿ ಪಡೆಯದೇ ವಿದೇಶಿ ಪ್ರವಾಸ ಮಾಡಿದ್ದರೆಂದು ಹೇಳಲಾಗುತ್ತಿದೆ. ಈ ದಾಳಿ ಬಗ್ಗೆಯೂ ಮೊದಲೇ ಮಾಹಿತಿ  ಪಡೆದಿದ್ದ ಲೋಕೇಶ ದಾಳಿ ವೇಳೆ ಮನೆಯಲ್ಲಿ ಇರಲಿಲ್ಲ. ಅಷ್ಟೇ ಅಲ್ಲದೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದಾನೆಂದು ಹೇಳಿದ್ದಾರೆ.