ಕೊಪ್ಪಳ 18: ಲಾಕ್ಡೌನ್ ಪರಿಸ್ಥಿತಿಯಲ್ಲಿಯೂ ತನ್ನ ಬೆಳೆ ಹಾಳಾಗದಂತೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿರುವ ಕೊಪ್ಪಳ ಜಿಲ್ಲೆಯ ಯಲಬುಗರ್ಾ ತಾಲ್ಲೂಕಿನ ಕೃಷಿಕ ಭೀಮರಾವ್ ದೇಶಪಾಂಡೆ.
ಕೋವಿಡ್-19ನಿಂದಾಗಿ ದೇಶದಾದ್ಯಂತ ಇರುವ ಲಾಕ್ಡೌನ್ನಿಂದಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಗಳಂಥ ದ್ರಾಕ್ಷಿ ಬೆಳೆಗಾರರು ಬೆಲೆ ಕುಸಿತದಿಂದಾಗಿ ಮತ್ತು ಬೇಡಿಕೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಸಲಹೆ ಪಡೆದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವಲ್ಲಿ ಇಲಾಖಾ ಯೋಜನೆಗಳನ್ನು ರೈತರು ಸದ್ಭಳಕೆ ಮಾಡಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ತೋಟಗಾರಿಕೆ ಇಲಾಖೆ ಸಹಾಯಹಸ್ತ ನೀಡುತ್ತಿದೆ.
ಜಿಲ್ಲೆಯ ಯಲಬುಗರ್ಾ ತಾಲ್ಲೂಕಿನ ಕಟಗಿಹಳ್ಳಿ ಗ್ರಾಮದ ರೈತರಾದ ಭೀಮರಾವ್ ದೇಶಪಾಂಡೆ ತನ್ನ 3 ಎಕರೆ ಜಮೀನಿನಲ್ಲಿ ಸೋನಾಕಾ ಹಾಗೂ ಇತರೇ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. 2016 ರಲ್ಲಿ ದ್ರಾಕ್ಷಿ ಬೆಳೆಯಲು ಕ್ರಮ ಕೈಗೊಂಡಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಆದಾಯ ಪಡೆದಿದ್ದರು. ಆದರೆ ಈ ಸಾರಿ ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಬೆಳೆ ತಡವಾಗಿ ಕಟಾವಿಗೆ ಬಂದಿದ್ದು, ಬೇಡಿಕೆ ಇರದೆ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಕೊರೋನಾ ಮಾರಿಯಿಂದಾಗಿ ಉಂಟಾದ ಲಾಕ್ ಡೌನ್ನಿಂದಾಗಿ ದ್ರಾಕ್ಷಿ ಮಾರಾಟವಾಗದೇ ಇವರ ಕಣ್ಣೀರು ಕಪಾಳಕ್ಕಿಳಿಯಿತು. ಇಂತಹ ಸಂದರ್ಭದಲ್ಲಿ ರೈತ ಭೀಮರಾವ್ ದೇಶಪಾಂಡೆ ಅವರು ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಲಿಂಗನಗೌಡ ಪೋಲಿಸಪಾಟೀಲ್ರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ಆಗ ಲಿಂಗನಗೌಡ ಪೋಲಿಸಪಾಟೀಲ್ರು ರೈತರಿಗೆ ಒಣದ್ರಾಕ್ಷಿ ಮಾಡುವ ಶೆಡ್ ನಿಮರ್ಿಸಿಕೊಂಡು ಮೌಲ್ಯವರ್ಧನೆ ಮಾಡಿದರೆ ವಷರ್ಾನುಗಟ್ಟಲೆ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಿಕೊಂಡು ಉತ್ತಮ ಲಾಭ ಗಳಿಸಬಹುದೆಂದು ಎಂದು ಸಲಹೆ ನೀಡಿದರು. ಭೀಮರಾವ್ ಮಣೂಕ ಮಾಡುವ ವಿಧಾನವನ್ನು ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ವಿಜ್ಞಾನಿಗಳಿಂದ ಹಾಗೂ ಹಿರೇವಡ್ರಕಲ್ ಗ್ರಾಮದ ರೈತ ಬಸವರಾಜ ಕಾಡಾಪೂರ ಮಾರ್ಗದರ್ಶನದಲ್ಲಿ ಈ ಬಗ್ಗೆ ತಿಳಿದುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.
ನಾನು ಬೆಳೆದ ದ್ರಾಕ್ಷಿ ಮಾರುಕಟ್ಟೆ ಇಲ್ಲದೇ ನಾನು ಸಂಕಷ್ಟದಲ್ಲಿದ್ದೆ ಆಗ ಕೊಪ್ಪಳ ತೋಟಗಾರಿಕೆ ಉಪನಿದರ್ೇಶಕರು ಮತ್ತು ಯಲಬುಗರ್ಾ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರನ್ನು ಸಂಪಕರ್ಿಸಿದಾಗ ಮಣೂಕಾ ಶೆಡ್ ನಿಮರ್ಿಸಿಕೊಂಡು ಒಣ ದ್ರಾಕ್ಷಿ ಮಾಡಲು ಸಲಹೆ ನೀಡಿದರು ಅದರಂತೆ ನಾನು ಕಾರ್ಯಪ್ರವೃತ್ತನಾಗಿ ಸುಮಾರು 30 ಟನ್ನಷ್ಟು ದ್ರಾಕ್ಷಿ ಹಣ್ಣುನ್ನು ಮಣೂಕ ಮಾಡಲು ನಿರ್ಧರಿಸಿದೆ. ಈ ಸದ್ಯ 5 ರಿಂದ 6 ಟನ್ ಒಣ ದ್ರಾಕ್ಷಿ ಸಿದ್ದವಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ. ನನ್ನ ಆದಾಯ ಸಂಪೂರ್ಣ ಕುಸಿಯುವ ಸಮಯದಲ್ಲಿ ತೋಟಗಾರಿಕೆ ಇಲಾಖೆ ಸಹಾಯದಿಂದ ನನ್ನ ಬೆಳೆ ಉಳಿಸಿಕೊಳ್ಳುವಂತಾಯಿತು. ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ನಾನು ಚಿರಋಣ ಎಂದು ಭೀಮರಾವ್ ದೇಶಪಾಂಡೆ ಹೇಳಿದರು.