ಲಾಭ, ನಷ್ಟವಾದರೂ ರೈತರಿಗೆ ಸಾಲ ನೀಡಲೇಬೇಕು : ಸಚಿವ ಜಾರಕಿಹೊಳಿ

ಲಾಭ, ನಷ್ಟವಾದರೂ ರೈತರಿಗೆ ಸಾಲ ನೀಡಲೇಬೇಕು : ಸಚಿವ ಜಾರಕಿಹೊಳಿ  Loans must be given to farmers regardless of profit or loss: Minister Jarkiholi


ಬೆಳಗಾವಿ 13: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ಗೆ ಲಾಭವಾಗಲಿ, ನಷ್ಟವಾಗಿಲಿ ರೈತರಿಗೆ ಮಾತ್ರ ಆರ್‌ಬಿಐ, ನಬಾರ್ಡ್‌ ನಿರ್ದೇಶನದಂತೆ ಸಾಲವನ್ನು ನೀಡಲೇಬೆಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. 

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಾದವರೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ರೈತರ ಬ್ಯಾಂಕು. ಬ್ಯಾಂಕ್‌ನಿಂದ ರೈತರಿಗೆ ಸಾಲ ನೀಡಲೇಬೇಕು. ಆದರೆ ಆರ್‌ಬಿಐ, ನಬಾರ್ಡ್‌ ನಿರ್ದೇಶನದಂತೆ ಮಾತ್ರ ಸಾಲ ನೀಡಬೇಕಾಗುತ್ತದೆ. ಇನ್ನು ಬ್ಯಾಂಕ್ ಅಭಿವೃದ್ಧಿ ದೃಷ್ಠಿಯಿಂದ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಖಾಸಗಿಯವರಿಗೂ ಸಾಲ ನೀಡುತ್ತಿದ್ದಾರೆಂದು ತಿಳಿಸಿದರು.   

ರೈತರಿಗೆ ನೀಡುವ ಸಾಲದ ಮೀತಿಯನ್ನು ಹೆಚ್ಚು ಮಾಡುವುದು ಬಿಡಿಸಿಸಿ ಬ್ಯಾಂಕ್ ಕೈಯಲ್ಲಿ ಇಲ್ಲ. ರೈತರಿಗೆ ಸಾಲದ ಮೀತಿ ಹೆಚ್ಚು ಮಾಡುವ ಅಧಿಕಾರ ಆರ್‌ಬಿಐ, ನಬಾರ್ಡ್‌ ಕೈಯಲ್ಲಿ ಇದೆ ಎಂದ ಸಚಿವರು, ಡಿಸಿಎಂ ಡಿಕೆಶಿಗೆ ಸಿಎಂ ಆಗುವ ಯೋಗ ಸಮೀಪ ಬಂದಿದೆ ಎಂಬ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲವೆಂದರು.   

ಶಾಸಕರು ಆಯಾ ಇಲಾಖೆಗೆ ತಮಗೆ ಬೇಕಾದ ಕೆಲಸಗಳಿಗೆ ಬಜೆಟ್‌ನಲ್ಲಿ ಅನುದಾನ ಕೇಳಿದ್ದಾರೆ. ಬೆಳಗಾವಿ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೇಳಿಲ್ಲ. ಇಲಾಖಾವಾರು ಸಿಗುವ ಅನುದಾನಲ್ಲಿ ಜಿಲ್ಲೆಗೆ ಅವಶ್ಯವಿರುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ನೀರಾವರಿಗೆ ಹೆಚ್ಚಿನ ಅನುದಾನ ದೊರಕುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.   

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಲಾಗಲೇ ಬಿಎಲ್‌ಒ ಶೇಕಡಾ 70ಅ ಕೆಲಸವನ್ನು ಮಾಡಿದ್ದಾರೆ. ಬಿಎಲ್‌ಒಗಲೇ ಮನೆ ಮನೆಗೆ ತೆರಳಿ ಜನರಿಗೆ ಈ ಕುರಿತು ಜಾಗೃತಿ ನೀಡುತ್ತಿದ್ದಾರೆ. ಇನ್ನು ಖಾನಾಪುರದಲ್ಲಿ ಹಕ್ಕಿಪಿಕ್ಕಿ ಜನರಿಗೆ ಏಕೆ ಮತದಾನದ ಹಕ್ಕು ನೀಡಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಪರೀಶೀಸಲು ಸೂಚಿಸುತ್ತೇನೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಹೆಸರುಗಳನ್ನು ತೆಗೆದಿಲ್ಲ. ಹೆಸರು ತೆಗೆಯಲು ಇನ್ನು ನಿರ್ದೇಶನ ಬಂದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2028ರವರೆಗೆ ನಡೆಯಲಿ ಎಂದರು. 


BDCC Bank Chairman Annasahab Jolle Satish Jarkiholi Loan Distribution to Farmers