ಮಹಾನ್ ಪುಣ್ಯ ಪುರುಷರ ಜೀವನವು ಸಾಕ್ಷಿಯಾಗಿದೆ: ಬಸವರಾಜ ಬೊಮ್ಮಾಯಿ

Lives of great pious men bear witness: Basavaraja Bommai

ಮಹಾನ್ ಪುಣ್ಯ ಪುರುಷರ ಜೀವನವು ಸಾಕ್ಷಿಯಾಗಿದೆ: ಬಸವರಾಜ ಬೊಮ್ಮಾಯಿ 

ಹಾವೇರಿ 08: ಹಸಿವು, ಅರಿವು, ಮರೆವು ಮತ್ತು ಸಾವು ಇವು ದೇವರು ಮನುಷ್ಯನಿಗೆ ಕೊಟ್ಟಿರುವ ಮಹಾನ್ ವರಗಳು, ಇವುಗಳು ಇಲ್ಲದಿದ್ದರೆ ಮಾನವನ ಬದುಕು ಕ್ರಿಯಾಶೀಲತೆ ಇಲ್ಲದ ನಿಸ್ಸಾರವಾಗುತ್ತಿತ್ತು. ಇವುಗಳನ್ನು ಬಳಸಿಕೊಂಡು ಬದಕನ್ನು ಹಸನಮಾಡಿಕೊಳ್ಳಬೇಕು. ಅದಕ್ಕೆ ಮಹಾನ್ ಪುಣ್ಯ ಪುರುಷರ ಜೀವನವು ಸಾಕ್ಷಿಯಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. 

              ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79 ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವದ 2 ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

              ಸಮಾಜದಲ್ಲಿ ಇಂದು ಸಬ್ದಾವನೆ, ಸದ್ವಿಚಾರ, ಸಹಬಾಳ್ವೆ, ಸಹನಶೀಲತೆ ಕಡಿಮೆಯಾಗಿವೆ. ಪುಣ್ಯ ಸ್ಮರಣೆಯ ಜೊತೆಗೆ ಮುಂದಿನ ಜನಾಂಗಕ್ಕೆ ಭಕ್ತಿ ಕ್ರಾಂತಿಯ ನೇತೃತ್ವವನ್ನು ವಹಿಸಿಕೊಳ್ಳುವ ಅನಿವಾರ್ಯತೆ ಇಂದು ಸಮಾಜಕ್ಕೆ ಇದೆ. ಏಕೆಂದರೆ ಜಗತ್ತಿನಲ್ಲಿ ಎಲ್ಲೂ ಕಾಣದ ಭಕ್ತಿ ಚಳುವಳಿಗಳು ಭಾರತದಲ್ಲಿ ಕಂಡುಬಂದಿವೆ. ಕಾಲ ಬದಲಾದಂತೆ ವೈಚಾರಿಕತೆ ಹೆಸರಿನಲ್ಲಿ ಅರಾಜಕತೆ ಕಾಣದೇ ಇರಲು ಆಧ್ಯಾತ್ಮಿಕ ಸಿಂಚನದ ಅವಶ್ಯಕತೆ ಇಂದು ಅತೀ ಅವಶ್ಯವಾಗಿದೆ ಎಂದರು. 

           ವಾಸನದ ನಾಟಿ ವೈದ್ಯ ಹನುಮಂತಪ್ಪ ಮಳಲಿ ಆಹಾರ ಮತ್ತು ಆರೋಗ್ಯ ವಿಷಯದ ಮೇಲೆ ಮಾತನಾಡಿದರು.ಸಾನಿಧ್ಯ ವಹಿಸಿದ್ದ ಶಿರಹಟ್ಟಿಯ ಜಗದ್ಗುರು ಫಕೀರಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಶರಣ ಸಂಸ್ಕೃತಿ ಜೀವಂತಿಕೆಯನ್ನು ನಾವು ಶ್ರೀ ಹುಕ್ಕೇರಿಮಠದಲ್ಲಿ ಕಾಣಬಹುದು. ನಾಗರೀಕತೆ ಬೆಳೆದಂತೆ ಸಂಸ್ಕೃತಿಯು ಬೆಳೆಯುತ್ತಿಲ್ಲ. ಭಕ್ತಿ, ಭಾವ ನಮ್ಮಲ್ಲಿ ಕಡಿಮೆಯಾಗುತ್ತಿದೆ. ನಾಗರೀಕತೆಗಿಂತ ಸಂಸ್ಕೃತಿಯ ಉಳಿವು ಅವಶ್ಯವಾಗಿದೆ. ಪುಣ್ಯ ಸ್ಮರಣೋತ್ಸವಗಳು ನಮ್ಮಲ್ಲಿ ಸಂಸ್ಕೃತಿಯ ಪುನರಾರಂಭಕ್ಕೆ ದಾರೀದೀಪವಾಗಿವೆ ಎಂದು ಹೇಳಿದರು. 

        ಹೊಸಮಠದ ಬಸವಶಾಂತ ಶ್ರೀಗಳು ಮತ್ತು ಹರಸೂರು ಬಣ್ಣದಮಠದ ಅಭಿನವ ಚನ್ನಮಲ್ಲಿಕಾರ್ಜುನ ಶ್ರೀಗಳು,ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳು ಆರ್ಶಿವಚನ ನೀಡಿದರು.ಇದೇ ಸಂದರ್ಭದಲ್ಲಿ ಸ್ಲೈಕಿಂಗ ಸಾಧಕ ತಿಮ್ಮೇಶಕುಮಾರ ಸಂಪಳ್ಳಿ ಮತ್ತು ಉಪ ವಿಭಾಗಾಧಿಕಾರಿ ಎಚ್‌.ಬಿ. ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಹಿಂದುಸ್ಥಾನಿ ಕೊಳಲು ವಾದಕ ಅಕ್ಷಯ ಜೋಶಿ ಸಂಗೀತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

                  ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಹಾವನೂರ ದಳವಾಯಿಮಠದ ಶ್ರೀಗಳು, ಕಮಲಾ ಯಡ್ರಾಮಿ, ಸಣ್ಣಗೋವಿಂದಪ್ಪ ಕಲಾಲ, ಪ್ರಕಾಶ ಶೆಟ್ಟಿ, ಗಂಗನಗೌಡ್ರ ಪಾಟೀಲ, ಮಲ್ಲೇಶ ಬಣಕಾರ, ರೋಹಿಣಿ ಪಾಟೀಲ, ಎಂ.ಸಿ. ಮಳಿಮಠ, ಶಿವಬಸಪ್ಪ ಶೀಲವಂತ, ತಮ್ಮಣ್ಣ ಮುದ್ದಿ, ಅಮೃತಮ್ಮ ಶೀಲವಂತರ, ಸಿ.ಜಿ. ತೋಟಣ್ಣನವರ, ಮಾಂತಣ್ಣ ಹಲಗಣ್ಣವರ, ಗಂಗಣ್ಣ ಮಳಗಿ, ಗಣೇಶ ಮುಷ್ಠಿಲಲಿತಕ್ಕ ಹೊರಡಿ, ಶಿವಯೋಗಿ ಬೆನಕೊಪ್ಪ, ಸೋಮಶೇಖರ ಯಾಡವಾಡ ಮತ್ತಿತರರು ಉಪಸ್ಥಿತರಿದ್ದರು.ಮಮತಾ ನಂದೀಹಳ್ಳಿ ಪ್ರಾರ್ಥಿಸಿದರು. ಅಶೋಕ ಮಾಗನೂರ ಸ್ವಾಗತಿಸಿದರು. ಎಸ್‌.ಎನ್‌. ಮಳೆಪ್ಪನವರ ನಿರೂಪಿಸಿದರು. ಬಿ. ಬಸವರಾಜ ವಂದಿಸಿದರು.