ಸಾಹಿತಿಗಳು ಮತ್ತು ಕಲಾವಿದರಿಗೆ ಸಾಮಾಜಿಕ ಬದ್ಧತೆ ಇರಬೇಕು: ಪ್ರೊ. ಯಲ್ಲಪ್ಪ ಹಿಮ್ಮಡಿ
Literary writers and artists should have social commitment: Prof. Yallappa Himmadi
ಧಾರವಾಡ.30 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಧಾರವಾಡ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬಸವರಾಜ ಕಟ್ಟೀಮನಿ ದತ್ತಿ ಉಪನ್ಯಾಸ ಮತ್ತು ವಚನ ಗಾಯನ ಸ್ಪರ್ಧೆಯನ್ನು ಆಯೋಜಿಸಿತ್ತು . ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಯಲ್ಲಪ್ಪ ಹಿಮ್ಮಡಿ ಉದ್ಘಾಟನೆ ನೆರವೇರಿಸಿ ಬಸವರಾಜ ಕಟ್ಟೀಮನಿ ಓದಿದ್ದು ಬಹಳ ಕಡಿಮೆ ಆದರೆ ಅವರ ಸಾಹಿತ್ಯಿಕ ಸಾಧನೆ ತುಂಬಾ ದೊಡ್ಡದು. ಬಸವರಾಜ ಕಟ್ಟೀಮನಿ ಅವರು ನೇರ ದಿಟ್ಟತನದಿಂದ ತಮ್ಮ ಸಾಹಿತ್ಯ ರಚನೆ ಮಾಡಿ ಹಲವಾರು ಕಥೆ ಕಾದಂಬರಿಗಳನ್ನು ರಚಿಸಿ ಸಮಾಜದ ವ್ಯವಸ್ಥೆಯನ್ನು ವಾಸ್ತವಿಕವಾಗಿ ಚಿತ್ರಿಸಿದ ಹಿರಿಮೆಗೆ ಅವರದು ಎಂದು ತಿಳಿಸಿದರು.
ಡಾ. ಧನವಂತ ಹಾಜವಗೋಳ ಬಸವರಾಜ ಕಟ್ಟೀಮನಿ ಬಡ ಅನಕ್ಷರಸ್ಥ ಕುಟುಂದದಲ್ಲಿ ಜನಿಸಿದ ಅವರು ಹಲವಾರು ಪ್ರಗತಿಪರ ಕಾದಂಬರಿ ಬರೆದು ಸಮಾಜದ ಅಂಕು ಡೊಂಕು ತಿದ್ದಲು ಶ್ರಮವಹಿಸಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಸರ್ಕಾರದ ವಿರುದ್ಧ ದ್ವನಿ ಎತ್ತಿದ ಧಿಮಂತ ವ್ಯಕ್ತಿತ್ವ ಹೊಂದಿದವರು ಎಂದು ಉಪನ್ಯಾಸ ನೀಡಿದರು.ಡಾ . ವೀಣಾ ಬಿರಾದಾರ ದತ್ತಿ ದಾನಿಗಳ ಪರವಾಗಿ ಮಾತನಾಡಿ ಬಸವರಾಜ ಕಟ್ಟೀಮನಿ ಕುಟುಂಬ ವತ್ಸಲರಾಗಿದ್ದರೆಂದು ನೆನಪಿಸಿಕೊಂಡರು.
ಡಾ . ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೇದಿಕೆ ಮೇಲೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಮಂಜುಳಾ ಬಿರಾದಾರ, ಪ್ರೊ. ಎಸ್ ಜಿ ಚಿಕ್ಕನರಗುಂದ, ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ ಎಸ್ ಕೌಜಲಗಿ, ಹುಬ್ಬಳ್ಳಿ ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡಶೆಟ್ಟರ ಉಪಸ್ಥಿತರಿದ್ದರು. ಉಮಾಕಾಂತ ಅರ್ಕಸಾಲಿ ಪ್ರಾರ್ಥಿಸಿದರು. ಮಹಾಂತೇಶ ನರೇಗಲ್ ಸ್ವಾಗತಿಸಿದರು. ಡಾ.ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಎಸ್ ಎಸ್ ದೊಡಮನಿ ವಂದಿಸಿದರು. ನಿರ್ಣಾಯಕರಾಗಿ ಶ್ರೀಮತಿ ಪ್ರಮೀಳಾ ಜಕ್ಕನ್ನವರ ಹಾಗೂ ಅನ್ನಪೂರ್ಣ ತಾಳಿಕೋಟಿ ಕಾರ್ಯ ನಿರ್ವಹಿಸಿದರು.
ಬಸವಾದಿ ಶರಣರ ವಚನ ಗಾಯನ ಸ್ಪರ್ಧೆಯಲ್ಲಿ ಒಂಬತ್ತು ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ (ಖೈರುನಿಸಾ )ಗಾನ ಸಿಂಚನ ಮಹಿಳಾ ಮಂಡಳ, ದ್ವೀತಿಯ ಸ್ಥಾನ (ಕಲಾವತಿ ಹೂಗಾರ) ತುಂಗಭದ್ರ ಮಹಿಳಾ ಮಂಡಳ, ತೃತೀಯ ಸ್ಥಾನ (ಪ್ರಿಯಾ ದೇಗಾವಿಮಠ ) ವನಸಿರಿ ಮಹಿಳಾ ಮಂಡಳ ಹಾಗೂ ಸಮಾಧಾನಕರ ಬಹುಮಾನ (ಗೌರಮ್ಮ ನ್ಯಾಮತಿ) ಅಕ್ಕನ ಬಳಗ ಮಹಿಳಾ ಮಂಡಳ ಪಡೆದುಕೊಂಡವು.ನೀತಿನ ಚಂದ್ರ ಹತ್ತಿಕಾಳ, ಚಿಂತನ ಹತ್ತಿಕಾಳ, ಅರುಣ್ ಕುಮಾರ್ ಹಬ್ಬು, ಅರುಣ್ ಕಲ್ಲೋಳಿಕರ, ಡಾ. ಎಸ್ ಬಿ ಗಾಡಿ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 