'ಕೇಳುವ ಕೌತುಕ' ಕೃತಿ ಬಾನುಲಿಯ ವಿಶ್ವಕೋಶ

ಲೋಕದರ್ಶನ ವರದಿ

ಧಾರವಾಡ 11: ನಗರದ ಆಕಾಶವಾಣಿ ಕೇಂದ್ರದ ನಿವೃತ್ತ ನಿದರ್ೆಶಕ ಸಿ.ಯು. ಬೆಳ್ಳಕ್ಕಿ ಅವರು ತಮ್ಮ ಆಕಾಶವಾಣಿ ವೃತ್ತಿ ಬದುಕಿನ ವಿಭಿನ್ನ ಅನುಭವಗಳ ನೆಲೆಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ 'ಕೇಳುವ ಕೌತುಕ' ಕೃತಿ ಬಾನುಲಿಯ ವಿಶ್ವಕೋಶದಂತೆ ವ್ಯಾಪಕ ಮಾಹಿತಿಗಳನ್ನು ಒಳಗೊಂಡಿದೆ ಎಂದು ಹಿರಿಯ ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಅವರು ಇಲ್ಲಿಯ ರಂಗಾಯಣ ಆವರಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಂಗಣದಲ್ಲಿ ನವಕನರ್ಾಟಕ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಕಾಶವಾಣಿ ನಿವೃತ್ತ ನಿದರ್ೆಶಕ ಸಿ.ಯು. ಬೆಳ್ಳಕ್ಕಿ ಅವರ 'ಕೇಳುವ ಕೌತುಕ' ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ನಭೋವಾಣಿ, ಬಾನುಲಿ, ಆಕಾಶವಾಣಿ ಎಂಬೆಲ್ಲ ಹೆಸರಿನಿಂದ ಕರೆಯುವ ಆಲ್ ಇಂಡಿಯಾ ರೇಡಿಯೋ ವ್ಯವಸ್ಥೆಯು ಒಂದು ಉತ್ಕೃಷ್ಟ ಮಾಧ್ಯಮವಾಗಿ ಜನಮನವನ್ನು ತಲುಪಿದ ಆಯಾಮಗಳನ್ನು ಬಹಳ ಸೊಗಸಾಗಿ ಚಿತ್ರಿಸುವಲ್ಲಿ ಬೆಳ್ಳಕ್ಕಿ ಯಶಸ್ವಿಯಾಗಿದ್ದಾರೆ ಎಂದರು. 

ಆಕಾಶವಾಣಿ ಬಿತ್ತರಿಸಿದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ನಾಟಕ, ಕೃಷಿ ಮಾಹಿತಿ, ಸುದ್ದಿ ಪ್ರಸಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹಿಂದಿನ ಅನೇಕ ಕೌತುಕ ಪ್ರಸಂಗಗಳು ಕೇಳುಗರ ಮೇಲೆ ಬೀರುವ ಪರಿಣಾಮಗಳನ್ನು ಇಲ್ಲಿ ಹಿಡಿದಿಡಲಾಗಿದೆ. ಬಾನುಲಿಯ ಮೂಲಕ ಖ್ಯಾತನಾಮರಾದವರ ವ್ಯಕ್ತಿ ಚಿತ್ರಣ, ಅವರ ಸಾಧನೆಯ ವೈಶಿಷ್ಟ್ಯತೆಗಳು, ಜಾಗತಿಕ ಹಂತದಲ್ಲಿ, ರಾಷ್ಟ್ರ ವ್ಯಾಪಿಯಾಗಿ ಮತ್ತು ಕನರ್ಾಟಕದಲ್ಲಿ ಆಕಾಶವಾಣಿಯ ಆರಂಭ ಹಾಗೂ ವಿಭಿನ್ನ ಪ್ರಯೋಗಗಳ ಉಲ್ಲೇಖಗಳನ್ನು 'ಕೇಳುವ ಕೌತುಕ' ಕೃತಿ ಒಳಗೊಂಡಿರುವುದು ವಿಶೇಷವಾಗಿದೆ. ಕನ್ನಡದ ಬಾನುಲಿಯ ಮೊದಲ ಪ್ರಸಾರಕ್ಕೆ ರಾಷ್ಟ್ರಕವಿ ಕುವೆಂಪು ಅವರು ಮೊದಲ ಧ್ವನಿ ನೀಡಿದಂತಹ ಚಾರಿತ್ರಿಕ ಸಂಗತಿಗಳು ಕೃತಿಯ ಪುಟಗಳಲ್ಲಿ ಅನಾವರಣಗೊಂಡಿವೆ ಎಂದೂ ಪಟ್ಟಣಶೆಟ್ಟಿ ಎತ್ತಿ ತೋರಿಸಿದರು.

ಅಧ್ಯಕ್ಷತೆವಹಿಸಿದ್ದ ಹಿರಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ ಮಾತನಾಡಿ, ತಾವು ಕಾರ್ಯನಿರ್ವಹಿಸಿದ ಬಾನುಲಿ ಕೇಂದ್ರಗಳಲ್ಲಿ ಅನೇಕ ಹೊಸ ಜನಪರ ಪ್ರಯೋಗಗಳ ಮೂಲಕ ಕೇಳುಗರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡಿರುವ ಸಿ.ಯು. ಬೆಳ್ಳಕ್ಕಿ ಅವರು ಆಕಾಶವಾಣಿಯ ಆರಂಭದ ದಿನಗಳಿಂದ ಮೊದಲ್ಗೊಂಡು ಈ ತನಕ ಆಗಿರುವ ವಿದ್ಯುನ್ಮಾನ ಮಾಧ್ಯಮದ ಅತ್ಯಾಧುನಿಕ ವಿಕಾಸದ ಹೆಜ್ಜೆ ಗುರುತುಗಳನ್ನು ತಮ್ಮ ಕೇಳುವ ಕೌತುಕ ಕೃತಿಯಲ್ಲಿ ದಾಖಲಿಸಿರುವುದು ವಿಶಿಷ್ಟವಾಗಿದೆ ಎಂದರು. 

ನವಕನರ್ಾಟಕ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ನಿದರ್ೆಶಕ ಡಾ.ಸಿದ್ಧನಗೌಡ ಪಾಟೀಲ ಹಾಗೂ ಕೇಳುವ ಕೌತುಕ ಕೃತಿಯ ಲೇಖಕ ಸಿ.ಯು.ಬೆಳ್ಳಕ್ಕಿ ಮಾತನಾಡಿದರು. ನವಕನರ್ಾಟಕ ಪ್ರಕಾಶನದ ಕಾರ್ಯನಿವರ್ಾಹಕ ನಿದರ್ೆಶಕ ಎ. ರಮೇಶ ಉಡುಪ ಸ್ವಾಗತಿಸಿದರು. 

ಗುಬ್ಬಚ್ಚಿ ಗೂಡು ಮಾಸಪತ್ರಿಕೆ ಸಂಪಾದಕ ಶಂಕರ ಹಲಗತ್ತಿ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸರೋಜಿನಿ ಬಡಿಗೇರ ಅವರು ನಾಡೋಜ ಡಾ. ಕಣವಿ ಅವರ ಭಾವಗೀತೆಯನ್ನು ಪ್ರಸ್ತುತಪಡಿಸಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಲವಾರು ಸಾಹಿತಿಗಳು, ಕಲಾವಿದರು, ಆಕಾಶವಾಣಿ ನಿಲಯದ ಅಧಿಕಾರಿಗಳು, ಪ್ರಾಧ್ಯಾಪಕರು ಇದ್ದರು.