ಮಾ.2, 3 ರಂದು ಮಿಂಚಿನ ಮತದಾರರ ನೋಂದಣಿ

ಲೋಕದರ್ಶನ ವರದಿ

ವಿಜಯಪುರ 27: ಜಿಲ್ಲೆಯ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಇದೇ ಮಾಚರ್್ 2 ಹಾಗೂ 3 ರಂದು ನಡೆಯಲಿರುವ ಮಿಂಚಿನ ಮತದಾರರ ನೊಂದಣಿ ಸಂದರ್ಭದಲ್ಲಿ ಹೆಚ್ಚಿನ ಮತದಾರರನ್ನು ಮತಪಟ್ಟಿ ಸೇರ್ಪಡೆಗೆ ತಕ್ಷಣ ಬಿಎಲ್ಎಗಳನ್ನು ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವಾಯ್.ಎಸ್.ಪಾಟೀಲ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ರಾಜಕೀಯ ಪಕ್ಷಗಳು ತಕ್ಷಣ ಬ್ಲಾಕ್ ಲೆವೆಲ್ ಏಜೆಂಟ್ಗಳನ್ನು ನೇಮಿಸಿಕೊಂಡಲ್ಲಿ ಹೆಚ್ಚು ಹೆಚ್ಚು ಅರ್ಹ ಮತದಾರರನ್ನು ಮತದಾರ ಯಾದಿಯಲ್ಲಿ ಸೇರ್ಪಡೆಗೆ ಸಹಕಾರಿಯಾಗಲಿದೆ. ಈಗಾಗಲೇ ದಿ 07ರಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ವಿವಿಧ ಚುನಾವಣಾ ಸಂದರ್ಭದಲ್ಲಿ ಬಳಸಲಾಗುವ ವಿವಿಧ ಮುದ್ರಣ ಸಾಮಗ್ರಿ, ಇತರೆ ಪರಿಕರಗಳ ದರಪಟ್ಟಿಗಳನ್ನು ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಸಹ ಕಲ್ಪಿಸಲಾಗಿತ್ತು. ಆದರೆ ಯಾವುದೇ ರೀತಿಯ ಆಕ್ಷೇಪಣೆಗಳು ಸ್ವೀಕೃತವಾಗದ ಹಿನ್ನಲೆಯಲ್ಲಿ ದರಪಟ್ಟಿ ಈಗಾಗಲೇ ನಿಗದಿಪಡಿಸಲಾಗಿದೆ. ಅದರಂತೆ ವಿಜಯಪುರ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 17,18, 19 ಮೂರೂ ಮತಗಟ್ಟೆಗಳನ್ನು ಮತದಾರರ ಅನುಕೂಲಕ್ಕಾಗಿ ಸಮೀಪಕ್ಕೆ   ಬದಲಾವಣೆ ಮಾಡಲಾಗಿದೆ. ಅದರಂತೆ ನಾಗಠಾಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ  77 ಸಹ ಬದಲಾವಣೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. 

ಇದೇ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ ವಿವಿಪ್ಯಾಟ್, ಬ್ಯಾಲೆಟ್ ಯೂನಿಟ್ ಕುರಿತಂತೆಯೂ ಸಹ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ  ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಪಿ.ಎಂ.ಪೂಜಾರಿ ಅವರು ಪ್ರಾತ್ಯಕ್ಷಿಕೆ ಮೂಲಕ ಅವಶ್ಯಕ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಉಪಸ್ಥಿತರಿದ್ದರು.