ರೇಕೈ ಶರತ್ ಆಚಾರಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Life imprisonment for Rekai Sharath Achari murder accused
ರೇಕೈ ಶರತ್ ಆಚಾರಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕಾರವಾರ, 11 : ಸಿದ್ದಾಪುರದ ಹಿರೇಕೈ ಗ್ರಾಮದ ಶರತ್ ಆಚಾರಿ ಕೊಲೆ ಅಪರಾಧಿಗಳಿಗರ ಶಿರಸಿ ಜಿಲ್ಲಾ ಪ್ರಧಾನ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಸಿದರು. ಅಗಸ್ಟ 2016 ರಲ್ಲಿ ಸಿದ್ದಾಪುರ ತಾಲುಕಿನ ಹಿರೇಕೈಯಲ್ಲಿ ಶರತ್ ಗಣೇಶ್ ಅಚಾರಿ ಕೊಲೆ ನಡೆದಿತ್ತು.ಅಪರಾಧಿಗಳಾದ ದಿಲರಾಜ ದ್ಯಾನಿ, ಭರತ್ ಸಿಂಗ್ ತ್ರಿಲೋಕ ಸಿಂಗಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡವನ್ನು ನ್ಯಾಯಾಧೀಶರಾದ ಕಿರಣ್ ಕಿಣಿ ಪ್ರಕಟಿಸಿದರು.ಕಾನಸೂರು ನಿಂದ ಶರತ್ ಬೈಕ್ ನಲ್ಲಿ ಸಂಜೆ ಹಿರೇಕೈಗೆ ಹೊರಟಿದ್ದ. ಡ್ರಾಪ್ ಕೇಳಿದ ದಿಲರಾಜ್ ಧ್ಯಾನಿ ಮತ್ತು ಭರತ್ ಸಿಂಗ್ ತ್ರಿಲೋಕ ಸಿಂಗ್ ದಾರಿ ಮಧ್ಯ ಬೈಕ್ ನಿಂದ ದಾರಿ ಪಕ್ಕದ ಕಾಲುವೆಗೆ ತಳ್ಳಿ, ಕಲ್ಲು ಎತ್ತಿ ಹಾಕಿದ್ದರು. ಅಲ್ಲದೆ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ದಿಲರಾಜ್ ಪೊಲೀಸರ ಕೈಗೆ ಸಿಕ್ಕಿದ್ದ. ಕೊಲೆಯಾದ ದಿನದಿಂದ ಭರತ ಸಿಂಗ್ ತಲೆ ಮರೆಸಿಕೊಂಡಿದ್ದ. ನಂತರ ಆತನನ್ನು ಹಿಡಿದ ಸಿದ್ದಾಪುರ ಪೊಲೀಸರು ಪ್ರತ್ಯೇಕ ಚಾರ್ಜಶೀಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ರಾಜೇಶ್ ಮಳಗೀಕರ ಸಮರ್ಥವಾಗಿ ವಾದ ಮಂಡಿಸಿ, ಆರೋಪಿಗಳ ಅಪರಾಧವನ್ನು ಸಾಬೀತು ಮಾಡಿದ್ದರು. ವೈಜ್ಞಾನಿಕ ಸಾಕ್ಷಾಧಾರದಿಂದ ಆರೋಪ ಸಾಬೀತಾಗಿತ್ತು.ನ್ಯಾಯಾಧೀಶರು ಎಲ್ಲಾ ಅಂಶ ಗಮನಿಸಿ ಅಪರಾಧಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ದಿಲರಾಜ್ ದ್ಯಾನಿ ಮತ್ತು ಭರತ್ ತ್ರಿಕೋಕ ಸಿಂಗ್ ಇಬ್ಬರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಶರತ್ ಆಚಾರಿ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.....
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 