ಮಹಾತ್ಮರ ಚಿಂತನೆಗಳನ್ನು ಯುವ ಸಮೂಹ ಅಳವಡಿಸಿಕೊಳ್ಳಲಿ: ಡಾ. ಪೋತೆ
Let the youth adopt the thoughts of the Mahatma: Dr. Pote
ವಿಜಯಪುರ 20: ಸಾಮಾಜಿಕ ಚಿಂತನೆಯ ಮೂಲಕ ಸಮಸಮಾಜ ಕಟ್ಟಿದ ನಮ್ಮ ಬಾಗೇವಾಡಿಯ ಬಸವಣ್ಣ ಮತ್ತು ಅಂಬೇಡ್ಕರ್, ಗಾಂಧಿ, ಕನಕದಾಸರು ಮೊದಲಾದವರ ಚಿಂತನೆಗಳನ್ನು ನಮ್ಮ ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ಕಲಬುರಗಿ ವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಎಚ್.ಟಿ.ಪೋತೆ ಹೇಳಿದರು. ರಾಜಾಜಿನಗರದ ಪ್ರಗತಿ ಶಾಲೆಯಲ್ಲಿ ನಡೆದ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಜನಪದರು, ತತ್ವಪದಕಾರರು ಬದುಕಿನ ಸತ್ಯವನ್ನು ಸರಳವಾಗಿ ಹೇಳಿದರು. ಇವತ್ತಿನ ಸಾಹಿತಿಗಳು ಗೊಂದಲದಲ್ಲಿದ್ದು ಯಾವುದನ್ನು ಆರಿಸಿಕೊಳ್ಳಬೇಕೆಂಬ ಆತಂಕದಲ್ಲಿ ಓದಬಲ್ಲ ಕೃತಿಗಳನ್ನು ರಚಿಸುತ್ತಿಲ್ಲ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಪ್ರಕಾಶ ಖಾಡೆ? ಪ್ರಸ್ತುತ ಸಮ್ಮೇಳನಾಧ್ಯಕ್ಷ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಅವರಿಗೆ ಪುಸ್ತಕ ಅರ್ಿಸುವ ಮೂಲಕ ಸಮ್ಮೇಳನಾಧ್ಯಕ್ಷತೆ ವಹಿಸಿಕೊಟ್ಟು ಮಾತನಾಡಿ ' ಬೆಳಕಿನ ಪರ್ಯಾಯ ಹೆಸರೆ ಪುಸ್ತಕ. ಪುಸ್ತಕ ಓದುವ ಸಂಸ್ಕೃತಿಯನ್ನು ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೆ ಕಲಿಸಬೇಕು. ಪುಸ್ತಕಗಳ ಜ್ಞಾನ ಮಾತ್ರ ಚಿರಂತನವಾದುದು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ? ಸಿದ್ಧಲಿಂಗ ಮನಹಳ್ಳಿ ಮಾತನಾಡಿ ಪುಸ್ತಕ ಸಂಸ್ಕೃತಿಯನ್ನು ಉಳಿಸಿ? ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರು ಆಸ್ತೆವಹಿಸಬೇಕು. ನಿರಂತರ ಓದು ಜ್ಞಾನವೃದ್ಧಿಸಿ? ಬುದ್ಧಿವುದ್ದೀಪನಗೊಳಿಸುವುದು. ಅದಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಬಸವನಬಾಗೇವಾಡಿಯ ಪತ್ರಕರ್ತ ? ಸಾಹಿತಿ ಮಹಾಂತೇಶ ಸಂಗಮ ಸರ್ವಾಧ್ಯಕ್ಷ ಸಿದ್ಧಲಿಂಗ ಮನಹಳ್ಳಿ ಅವರ ಬದುಕು ಬರಹ ಮತ್ತು ಸಾಧನೆಯನ್ನು ಪರಿಚಯಿಸಿದರು.
ಮಹಾನಗರಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ? ಅಧ್ಯಕ್ಷತೆ ವಹಿಸಿದ್ದರು. ಡಿ.ಚ್.ಒ. ಡಾ. ಸಂಪತ್ ಗುಣಾರಿ? ಧುರೀಣ ಬಿ.ಎಂ.ಪಾಟೀಲ? ಬಬಲೇಶ್ವರ ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ? ಪರಿಷತ್ತಿನ ಕಾರ್ಯದರ್ಶಿ ಶಂಕರ ಬೈಚಬಾಳ? ಸಾಹಿತಿ ಮುರುಗೇಶ ಸಂಗಮ ಇದ್ದರು. ಪರಿಷತ್ ಅಧ್ಯಕ್ಷ ಪ.ಗು.ಸಿದ್ದಾಪುರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಅಡವಿಸ್ವಾಮಿ ಕೊಳಮಲಿ ಸ್ವಾಗತಿಸಿದರು. ಶಿಕ್ಷಕ ಬಸನಗೌಡ ಬಿರಾದಾರ ನಿರೂಪಿಸಿದರು. ಜಿ.ಎಸ್.ಭೂಸಗೊಂಡ ವಂದಿಸಿದರು.
ರಾಮನಗೌಡ ಪಾಟೀಲ (ಯತ್ನಾಳ) ಹರ್ಷಗೌಡ ಪಾಟೀಲ? ಡಿವೈ ಎಸ್ ಪಿ. ಬಸವರಾಜ ಯಲಿಗಾರ? ಉಮೇಶ ಕೌಲಗಿ ಪ್ರಗತಿ ಶಾಲೆಯ ಬೆಳ್ಳಿ ಹಬ್ಬ ಹಾಗೂ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದರು. ಮಹಾನಗರಪಾಲಿಕೆ ಸದಸ್ಯ ಗೀರೀಶ ಬಿರಾದಾರ? ವಿವೇಕ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಚೌಧರಿ? ಸಿದ್ಧರಾಮ ಬಿರಾದಾರ? ಗುರು ಬೈಚಬಾಳ? ಬಿ.ಎಂ.ಬಿರಾದಾರ? ಶಿವಲಿಂಗ ಕಾರಜೋಳ? ಡಿ.ಜೋಶೆಫ್? ಮಹೇಶ ಕಬಾಡೆ? ಮಹಾಂತೇಶ ಹೊಸಮನಿ? ಎಂ.ಎಸ್.ತೋಟದ? ಕೆ.ಎಸ್.ಬಾಗೇವಾಡಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 