ಧಾರವಾಡ 11: ಸಾಹಿತ್ಯ ಮತ್ತು ಇತಿಹಾಸವೆಂದರೆ ಕೇವಲ ಗತಕಾಲದ ಚರಿತ್ರೆಯ ಕ್ರೋಢಿಕರಣಮಾತ್ರವಲ್ಲ. ಅದರಲ್ಲಿ ಜ್ಞಾನ, ವಿಜ್ಞಾನ, ತತ್ವಜ್ಞಾನ, ಕಲೆ, ಸಾಹಿತ್ಯ ಮತ್ತು ಭಾಷೆ ಹಾಗೂ ಸಾಂಸ್ಕೃತಿಯು ಒಳಹೊಳುವುಗಳ ಒಟ್ಟು ಮೊತ್ತವು ಅಡಗಿರುತ್ತದೆ. ಹಾಗಾಗಿ ಇತಿಹಾಸ ಮತ್ತು ಸಾಹಿತ್ಯ ಇವು ಬಹು ಶಿಸ್ತೀಯ ಅಧ್ಯಯನಗಳಾಗಿವೆ. ಇತಹಾಸಕಾರರು ಸತ್ಯಶೋಧಕರಾಗಬೇಕೆ ಹೊರತು ಪಂಥವಾದಗಳ ಅವಕರಣ ಕರ್ತರಾಗಬಾರದು. ಸಾಹಿತಿಗಳು ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸುವಂತಹ ಕೃತಿಗಳನ್ನು ರಚಿಸಬೇಕೆ ಹೊರತು ಪಂಥೀಯ ವಾದಗಳಿಗೆ ಆಹಾರವಾಗಬಾರದು ಎಂದು ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಸಹಾಯಕ ಪ್ರಾಧ್ಯಾಪಕರುಗಳಿಗೆ ಕರೆ ನೀಡಿದರು
ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ನಡೆದ 35 ಮತ್ತು 36 ನೇ ತಂಡಗಳ ಕನ್ನಡ ಮತ್ತು ಇತಿಹಾಸ ವಿಷಯಗಳ ಸಹಾಯಕ ಪ್ರಾಧ್ಯಾಪಕರುಗಳ ವೃತ್ತಿ ಬುನಾದಿ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಗುರುರಾಜ ಜಮಖಂಡಿ ಅವರು ಪಠ್ಯವನ್ನು ಪೂರೈಸಿ ಕೈ ತೊಳೆದು ಕೊಂಡರೆ ಉನ್ನತ ಶಿಕ್ಷಣದ ಉದ್ದೇಶ ಸಾಕಾರವಾಗುವುದಿಲ್ಲ. ವಿದ್ಯಾರ್ಥಿ ಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಂಡಾಗ ಮಾತ್ರ ವೃತ್ತಿಗೆ ವಿಶೇಷ ಗೌರವವು ಬರುತ್ತ್ತದೆ ಎಂದು ಮಾರ್ಮಿ ಕವಾಗಿ ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಂಬಳ ಅವರು ಉಪನ್ಯಾಸಕರಿಗೆ ನಿಜವಾದ ಕಲಿಕೆ ಆರಂಭವಾಗುವುದೇ ಅವರು ಪ್ರವಚನದ ಜವಾಬ್ದಾರಿಯನ್ನು ಹೊತ್ತುಕೊಂಡಾಗ. ಹಾಗಾಗಿ ಕಲಿಕೆಯು ಶಿಕ್ಷಕರಿಗೆ ಅನಿವಾರ್ಯ ಎಂದು ಮನಮುಟ್ಟುವಂತೆ ಮಾತನಾಡಿದರು.
ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇ ಶಕರಾದ ಪ್ರೊ. ಎಸ್. ಎಮ್. ಶಿವಪ್ರಸಾದ ಅವರು ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರುಗಳಿಗೆ 21 ದಿನಗಳ ಕಾಲ ನಡಿಯಿಸಿದ ವೃತ್ತಿ ಬುನಾದಿ ತರಬೇತಿಯ ಮಹತ್ವವನ್ನು ಮತ್ತು ಅದನ್ನು ವೃತ್ತಿ ಜಿವನದಲ್ಲಿ ರೂಢಿಸಿಕೊಳ್ಳುವ ಬಗೆಯನ್ನು ವಿವರಿಸಿದರು
ಅಕಾಡೆಮಿಯ ಡೀನರುಗಳಾದ ಡಾ. ಈಶ್ವರ ಸಾತಿಹಾಳ, ಡಾ. ಎ.ಆರ್. ಜಗತಾಪ, ಡಾ. ಹೆಚ್ ಬಿ. ನೀಲಗುಂದ, ಡಾ. ಅರುಂದತಿ ಕುಲಕಣರ್ಿ ಹಾಗೂ ಸಿಬ್ಬಂದಿಯವರು ಹಾಜರಿದ್ದರು