ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರವಾಗಲಿ: ಅನೀಲ ಕವಿಶೆಟ್ಟಿ ಕರೆ
Let the temple become a major religious center: Aneela Kavishetty calls
ಬೆಳಗಾವಿ 11 : ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಸಮಾಜದಿಂದ ಸಾಕಷ್ಟು ಸಹಾಯವಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನಷ್ಟು ಅನುದಾನ ಪಡೆದುಕೊಂಡು ದೇವಸ್ಥಾನವನ್ನು ಪ್ರಮುಖ ಧಾರ್ಮಿಕ ಕೇಂದ್ರವಾಗಲು ಶ್ರಮಿಸುವದಾಗಿ ಎಂದು ನವಿಲೇ ಶ್ರೀ ಜಡೇಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ.ಹುಬ್ಬಳ್ಳಿಯ ಬಣಗಾರ ಸಮಾಜದ ಅಧ್ಯಕ್ಷ ಅನೀಲ ಕವಿಶೆಟ್ಟಿ ಹೇಳಿದರು.
ಅವರು ಲಿಂಗಸಗೂರ ತಾಲೂಕಿನ ನವಲಿ ಸುಕ್ಷೇತ್ರಶ್ರೀ ಜಡೆಶಂಕರಲಿಂಗನ ಸಾನಿಧ್ಯದಲ್ಲಿ ರಬಕವಿ ಹಾಗೂ ನಿಪ್ಪಾಣಿಯ ಗುಣಕೀ ಪರಿವಾರದಿಂದ ನಡೆದ 11 ಜನ ಗುಗ್ಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವಲಿ ಸುಕ್ಷೇತ್ರದಲ್ಲಿ ಪದೇ ಪದೇ ಜರಗಲಿ ಎಲ್ಲರೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಮತ್ತು ಜವಳ ಕಾರ್ಯಕ್ರಮವನ್ನು ಹಾಗೂ ಗುಗ್ಗುಲ ಕಾರ್ಯಕ್ರಮವನ್ನು ಮದುವೆಯನ್ನು ಇತರೆ ಕಾರ್ಯಕ್ರಮಗಳನ್ನು ನಮ್ಮ ಕುಲದೇವರ ಸಾನಿಧ್ಯದಲ್ಲಿ ನಡೆಸಲು ವಿನಂತಿಸಿಕೊಳ್ಳುತ್ತೇನೆ ಎಂದರು.
ರಬಕವಿಯ ಗುಣಕಿ ಪರಿವಾರದ ಮುಖ್ಯಸ್ಥ ಸೋಮಶೇಖರ ಗುಣಕಿ ಮಾತನಾಡಿ ನವಲೇ ದೇವಸ್ಥಾನದ ಜಿರ್ಣೋದಾರ ಸಮಿತಿಯ ಸರ್ವ ಸದಸ್ಯರಿಂದ ದೇವಸ್ಥಾನ ಅಭಿವೃದ್ಧಿಯಾಗಿದ್ದು ದೇವಸ್ಥಾನ ಆವರಣ ಸಭಾ ಭವನದಲ್ಲಿ ಜವಳ.ನಿಶ್ಚಿಯ ಮದುವೆಯಂತ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ಮಾಡಬಹುದಾಗಿದೆ ಹೀಗಾಗಿ ಜಿರ್ಣೋದ್ದಾರ ಅಧ್ಯಕ್ಷ ಕಾರ್ಯಧರ್ಶಿಗಳ ಕಾರ್ಯ ಶ್ಲಾಘನೀಯ ಎಂದರು.
ಈ ಸಮಯದಲ್ಲಿ ಸಂತೋಷ ಹತಪಾಕಿ. ಹುಬ್ಬಳ್ಳಿ ಇಲಕಲ್ಲ ಮಸ್ಕಿ.ರಬಕವಿ. ಸಿಂಧೂನೂರು.ಗೋಕಾಕ.ನಿಪ್ಪಾನಿ.ಬನಹಟ್ಟಿ ಬಣಗಾರ ಬಾಂಧವರು ಉಪಸ್ಥಿತರಿದ್ದರು. ಅತ್ಯಂತ ಯಶಸ್ವಿಯಾಗಿ ಸುಂದರವಾಗಿ ನೆರವೇರಿತು ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಬಾಗಿಯಾಗಿದ್ದು ಅವರೆಲ್ಲರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು .
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 