ವಿದ್ಯಾಥರ್ಿಗಳು ಕಲಿತ ಶಾಲೆಯ ಕೀತರ್ಿ ಹೆಚ್ಚಿಸಲಿ: ಬಸವರಾಜೇಂದ್ರ ಶ್ರೀ

ಲೋಕದರ್ಶನ ವರದಿ

ಮುಗಳಖೋಡ 01: ಗ್ರಾಮೀಣ ಭಾಗದ ವಿದ್ಯಾಥರ್ಿಗಳು ಗುಣಮಟ್ಟದ ಶಿಕ್ಷಣ ಪಡೆದು ತಾವು ಕಲಿತ ಶಾಲೆಗೆ ಕೀತರ್ಿ ಬರುವಂತೆ ಸಾಧನೆ ಮಾಡಬೇಕು ಎಂದು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿ ಬಸವರಾಜೇಂದ್ರ ಮಹಾಸ್ವಾಮಿಗಳು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

     ಅವರು ಪಟ್ಟಣದ ಉಣ್ಣಿಬಸವೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ದಿ 29ರಂದು ರಾತ್ರಿ 7.30ಕ್ಕೆ ಹಮ್ಮಿಕೊಂಡ 30ನೇ ವಾಷರ್ಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಜ್ಯೋತಿ ಬೆಳಗಿಸುವರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

    ಇಂದಿನ ಯುವ ಪೀಳಿಗೆ ಬಲಿಷ್ಠವಾಗಿದ್ದಲ್ಲಿ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಅವಿಸ್ಮರಣಿವಾದದ್ದು, ಅದರೊಂದಿಗೆ ಮಾಡುವ ಕೆಲಸದಲ್ಲಿ ನೆಮ್ಮದಿ ಪಡೆಯಬೇಕು. ಹಣ, ಆಸ್ತಿ, ಅಂತಸ್ತು ಗಳಿಸುವುದಕ್ಕಿಂತ ಮಕ್ಕಳಿಗೆ ಪಳ್ಳೇಯ ಶಿಕ್ಷಣ, ಸಂಸ್ಕಾರ ನೀಡುವದು ಪಾಲಕರ ಪ್ರಮುಖ ಜವಾಬ್ಧಾರಿಯಾಗಿದೆ ಎಂದು ಶ್ರೀಗಳು ಆಶಿರ್ವಚನ ನೀಡಿದರು.

      ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ ನಮ್ಮ ಒತ್ತಡದ ಜೀವನದಲ್ಲಿ ಮಕ್ಕಳ ಕಡೆಗೆ ಗಮನ ಹರಿಸಿ ಮಕ್ಕಳ ಸಾಧನೆಯನ್ನು ನಾವೇಲ್ಲರೂ ಪ್ರೋತ್ಸಾಹಿಸಬೇಕೆಂದು ನುಡಿದರು. ಹಾರೂಗೇರಿ ಆರಕ್ಷಕ ಠಾಣೆ ಪಿ.ಎಸ್.ಐ ಯಮನಪ್ಪ ಮಾಂಗ ಮಾತನಾಡಿ ಪಾಲಕರು ಇಂದು ಟಿ.ವಿ. ಮೋಬೈಲ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳ ಓದಿನಕಡೆಗೆ ಗಮನಹರಿಸಿ ಅವರನ್ನು ಉನ್ನತ ಅಧಿಕಾರಿಗಳಾಗಿ ನಿಮರ್ಿಸಬೇಕೆಂದು ತಿಳಿಸಿದರು.

    ಈ ಸಮಾರಂಭದಲ್ಲಿ ಭೆಂಡವಾಡ ಪೂಜ್ಯರಾದ ಗುರುಸಿದ್ದ ಸ್ವಾಮಿಜಿ, ಸಂಸ್ಥೆ ಅಧ್ಯಕ್ಷ ಗೌಡಪ್ಪ ಖೇತಗೌಡರ, ಮಲ್ಲಿಕಾಜರ್ುನ ಖಾನಗೌಡರ, ಡಿ.ಎಸ್.ಡಿಗ್ರಜ, ಸಿಆರ್ಪಿ ಎಸ್.ಬಿ. ಹಣಸಿ, ರಮೇಶ ಖೇತಗೌಡರ, ಶಿವಾನಂದ ಗೋಕಾಕ, ಕಾಂತು ಬಾಡಗಿ, ಮಾರುತಿ ಕಲ್ಯಾಣಕರ, ಸುರೇಶ ಖೇತಗೌಡರ, ಯಲ್ಲಪ್ಪ ಗೋಕಾಕ, ಬಸವರಾಜ ಖೋತ, ಕುಮಾರ ಹಟ್ಟಿ, ಸಂಸ್ಥೆಯ ಎಲ್ಲ ಸದಸ್ಯರು, ಸಿಬ್ಬಂದಿವರ್ಗದವರು ಮುಂತಾದವರು ಪಾಲ್ಗೊಂಡಿದ್ದರು