ಸಮುದಾಯ ಭವನ ಸದ್ಬಳಕೆಯಾಗಲಿ: ಈರಣ್ಣ ಕಡಾಡಿ

ಸಮುದಾಯ ಭವನ ಸದ್ಬಳಕೆಯಾಗಲಿ: ಈರಣ್ಣ ಕಡಾಡಿ Let the community hall be put to good use: Iranna Kadadi


ಬೆಳಗಾವಿ 25: ಪೊಲೀಸರು ತಮ್ಮ ಕಾನೂನು ಸುವ್ಯವಸ್ಥೆಯ ಜೊತೆಗೆ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿರುವ ಪುರಾತನ ಕಾಲದ ವೀರಭದ್ರೇಶ್ವರ ದೇವಸ್ಥಾನವನ್ನು ಅಭಿವೃದ್ಧಿಮಾಡಿ ಸಮುದಾಯ ಭವನವನ್ನು ನಿರ್ಮಾಣ ಮಾಡುವ ಮುಖಾಂತರ ಬೆಳಗಾವಿ ನಗರದ ಬಡ ಜನತೆಯ ಮದುವೆ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಉಪಯೋಗ ಮಾಡಿಕೊಳ್ಳಲು ಅನುಕೂಲವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. 

ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್‌ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಸಮುದಾಯ ಭವನಗಳು ಸಾರ್ವಜನಿಕವಾಗಿ ಯೋಗ್ಯ ಕಾರ್ಯಗಳಿಗೆ ಉಪಯೋಗ ಆಗಬೇಕು ಮತ್ತು ಸ್ವಚ್ಛತೆ, ಶಿಸ್ತಿಗೆ ಮಹತ್ವ ಕೊಡಬೇಕು ಎಂದರಲ್ಲದೇ ಈ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ನಗರದ ಜನತೆಗೆ ಈ ಸಮುದಾಯ ಭವನ ಸದ್ಬಳಕೆಯಾಗಲಿ ಎಂದು ಹೇಳಿದರು. 

ಜಿಲ್ಲಾಧಿಕಾರಿ  ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಮಾಜಿ ಶಾಸಕ ಅನೀಲ ಬೆನಕೆ, ನಗರ ಸೇವಕ ರಾಜಶೇಖರ ಡೊಣಿ, ಉಪ ಪೊಲೀಸ್  ಅಧಿಕ್ಷಕ ಆರ್‌. ಬಿ. ಬಸರಗಿ, ಪೊಲೀಸ್ ನೀರೀಕ್ಷಕರಾದ (ಸಶಸ್ತ್ರ)  ಕೆ.ಎ. ಗಾಂಜಿ,  ಮಾರುತಿ ಹೆಗಡೆ, ಬಿಜೆಪಿ ಬೆಳಗಾವಿ ಉತ್ತರ ಮಂಡಲ ಅಧ್ಯಕ್ಷ ವಿಜಯ ಕೊಡಗಾನೂರ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.