ಸೇವೆಯು ಬದುಕಿನ ಅವಿಭಾಜ್ಯ ಅಂಗವಾಗಲಿ: ಜೈ ಮೋಲ್ ನಾಯಕ
ಜಮಖಂಡಿ 16: ಸೇವೆಯು ಬದುಕಿನ ಅವಿಭಾಜ್ಯ ಅಂಗವಾಗಬೇಕು. ಸೇವೆಗಾಗಿ ಒಂದಿಷ್ಟು ಸಮಯವನ್ನು ಮೀಸಲಾಗಿಟ್ಟು ಅದರಲ್ಲಿ ತೊಡಗಿದರೆ ಅದರಲ್ಲಿ ಸಿಗುವ ಸಂತೃಪ್ತಿಗೆ ಬೆಲೆ ಕಟ್ಟಲಾಗದು ಎಂದು ಉಪಜಿಲ್ಲಾ ಗವರ್ನರ್ ಜೈ ಮೋಲ್ ನಾಯಕ ಹೇಳಿದರು.
ನಗರದ ಬಸವ ಭವನದಲ್ಲಿ ಜರುಗಿದ ಲಯನ್ಸ ಸಂಸ್ಥೆಯ 55 ನೇಯ ಸಂಸ್ಥಾಪನಾ ದಿನಾಚಾರಣೆಯಲ್ಲಿ ಲಯನ್ಸ ಸಂಸ್ಥೆ ಸಂಸ್ಥಾಪಕ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಜಯಂತುತ್ಸವದ ನಿಮಿತ್ಯ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ ಪದವಿಗಾಗಿ ಭಾಜನರಾದ ಡಾ. ದಡ್ಡಿ, ವಿಶ್ವ ಮಾನ್ಯ ಪ್ರಶಸ್ತಿಗೆ ಭಾಜನರಾದ ಬಿ.ಕೆ. ಕೊಣ್ಣೂರ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ವೈಷ್ಣವಿ ಜಂಬಗಿ ಲಯನ್ಸ ಸಂಸ್ಥೆವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಇತ್ತಿಚೆಗೆ ಲಯನ್ಸ ಕ್ರಿಕೆಟ್ ಟೂರ್ನಮೆಂಟನಲ್ಲಿ ರನ್ನರ್ಸ ಆಫ ಜಮಖಂಡಿ ಲಯನ್ಸ ತಂಡದ ಆಟಗಾರರಿಗೆ ಹಾಗೂ ಆಲರೌಂಡ್ ಪ್ರದರ್ಶನ ನೀಡಿದ ಆನಂದ ಚೌಗಲಾ ಅವರಿಗೆ ಸನ್ಮಾನಿಸಲಾಯಿತು.
ಲಯನ್ಸ ಸಂಸ್ಥೆಗೆ ನೂತನ ಸೇರೆ್ಡಯಾದ ಸದಸ್ಯರಿಗೆ ಹಾಗೂ ಪರಿಚಯಿಸಿದ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಕೌಜಲಗಿ ಉಪಸ್ಥಿತರಿದ್ದರು. ಕು. ಪ್ರಗತಿ ಮತ್ತು ಅನುಷ್ಕಾ ಪ್ರಾರ್ಥಿಸಿದರು.