ಕೆರೆ ಹೂಳೆತ್ತುವ ಕಾಮಗಾರಿ ಯಶಸ್ವಿಗೆ ಎಲ್ಲರ ಸಹಕಾರ ಇರಲಿ: ಸಿದ್ದನಗೌಡ ಬಿರಾದಾರ
ತಾಳಿಕೋಟಿ,19: ನಮ್ಮ ಗ್ರಾಮದಲ್ಲಿರುವ ಬನ್ನಿ ಬಸವೇಶ್ವರ ಕೆರೆಯ ಹೂಳೆತ್ತುವ ಈ ಕಾಮಗಾರಿ ಯೋಜನೆಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗದವರೊಂದಿಗೆ ಸಾಕಷ್ಟು ಪ್ರಯತ್ನ ಮಾಡಿ ಕಾಮಗಾರಿ ಗೆ ಚಾಲನೆ ಮಾಡಿಸಿದ್ದು , ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಇದೆ ಎಂದು ಗ್ರಾಪಂ ಸದಸ್ಯ ಕೆರೆ ಕಮಿಟಿ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಹೇಳಿದರು.
ತಾಲೂಕಿನ ಜಲಪೂರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಂದಗಿ ಇವರ ಆರ್ಥಿಕ ಸಹಾಯ ದೊಂದಿಗೆ ಬೆಕಿನಾಳ ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಜಲಪುರ ಕೆರೆ ಹೂಳೆತ್ತುವ ಕಾಮಗಾರಿ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿ ಈಗಾಗಲೇ ಈ ಭಾಗದಲ್ಲಿ ಈ ಸಂಸ್ಥೆಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಇದೀಗ ನಮ್ಮ ಊರಿನ ಕೆರೆ ಹೂಳೆತ್ತುವ ಕಾಮಗಾರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ ಅವರಿಗೆ ನಾನು ನಿಮ್ಮೆಲ್ಲರ ವತಿಯಿಂದ ಅಭಿನಂದಿಸುತ್ತೇನೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೀನೊವ್ ಅವರು ಮಾತನಾಡಿ ನಮ್ಮೂರು ನಮ್ಮ ಕೆರೆ ಕಾಮಗಾರಿ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪ ರೂಪರೇಷೆಗಳನ್ನು ಹಾಕಿಕೊಂಡಿದ್ದು ಕೆರೆ ಕಮಿಟಿ ಅಧ್ಯಕ್ಷ ಸಮಾಜ ಸೇವಕರಾದ ಸಿದ್ದನಗೌಡರಿಗೆ ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.
ಕೆರೆ ವಿಭಾಗದ ಇಂಜಿನಿಯರ ನಿಂಗರಾಜ್ ಮಾತನಾಡಿ ಕೆರೆ ಕಾಮಗಾರಿ ನಡೆಯುವ ಸಮಯದಲ್ಲಿ ರೈತರು ಸಹಕಾರ ನೀಡಿ ಯೋಜನೆ ನೇಮದಂತೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವೇ.ಮೂ.ಟೋಪಯ್ಯ ಮುತ್ಯಾ,ಶಾಂತಯ್ಯ ಮುತ್ಯಾ ಹಿರೂರ, ಕೃಷಿ ಅಧಿಕಾರಿ ಸುರೇಶ, ಬೆಕಿನಾಳ ಗ್ರಾಪಂ ಅಧ್ಯಕ್ಷ ರವಿ ಸುಧಾಕರ, ಸಿಬ್ಬಂದಿಗಳಾದ ಸಿದ್ದಲಿಂಗಪ್ಪ, ರೇಣುಕಾ, ಗ್ರಾಪಂ ಸದಸ್ಯ ರಾಮರಾವ್ ಕುಲಕರ್ಣಿ, ಗ್ರಾಮ ಸಮಿತಿ ಸದಸ್ಯರಾದ ಮಾದೇವಪ್ಪಗೌಡ, ವೀರಭದ್ರ ಶೇಖಪ್ಪಣ್ಣ ಅಗಸರ, ಸಿದ್ದರಾಮಪ್ಪಗೌಡ ಪಾಟೀಲ, ಶರಣು ತುಂಬಗಿ,ಬಸವರಾಜ ಕುಂಬಾರ ಹಾಗೂ ಗ್ರಾಮದ ಗಣ್ಯರು ಹಿರಿಯರು ಸ್ವ ಸಹಾಯ ಸಂಘದ ಸದಸ್ಯರು ಇದ್ದರು.