ಶಿಕ್ಷಣ ಓಲೈಕೆಯಾಗದಿರಲಿ, ಒಲುಮೆಯಿಂದ ಅರಳಲಿ : ಡಾ.ಈಶ್ವರ
Let education not be a distraction, but a flourishing one: Dr. Eshwara
ಹಾರೂಗೇರಿ, 28 : ಮಕ್ಕಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಸಂಕಲ್ಪ ತೊಡಬೇಕು. ಉದ್ದೇಶಿತ ಗುರಿ ಸಾಧನೆಗೆ ಮೊಬೈಲ್, ಟಿವಿಯಿಂದ ದೂರವಿದ್ದು, ಕಠಿಣ ಅಭ್ಯಾಸದಲ್ಲಿ ನಿರತರಾಗಬೇಕು. ಶಿಕ್ಷಣ ಓಲೈಕೆಯಾಗದಿರಲಿ, ಒಲುಮೆಯಿಂದ ಅರಳಿಸಿ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕೆಂದು ಧಾರವಾಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ನಡೆದ ದರೂರ ಉತ್ಸವ ನಿಮಿತ್ತ ನಡೆದ ವಾರ್ಷಿಕೋತ್ಸವ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧೈರ್ಯ ಆತ್ಮವಿಶ್ವಾಸಗಳೊಂದಿಗೆ ಅಗತ್ಯ ತಯಾರಿ, ಸ್ಪಷ್ಟ ಗುರಿಯಿಂದ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ. ತಮ್ಮ ಯಶಸ್ಸಿನ ಹಿಂದೆ ಪೋಷಕರ ಪರಿಶ್ರಮ ಇರುವುದನ್ನು ಮರೆಯಬಾರದು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಲವು ಸೂತ್ರಗಳನ್ನು ಸಿದ್ಧಪಡಿಸಿದ್ದು, ನೀರೀಕ್ಷಿತ ಗುರಿ ಮುಟ್ಟಲು ಶಿಕ್ಷಕರು, ಪಾಲಕರು ಶ್ರಮಿಸಬೇಕೆಂದರು.
ಬಸವನಬಾಗೇವಾಡಿಯ ಸಾಹಿತಿ ಅಶೋಕ ಹಂಚಲಿ ಅತಿಥಿಗಳಾಗಿ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನದ ಜೊತೆಗೆ ಕೌಶಲ ಬಳಸಿಕೊಂಡು ಸಾಧನೆಯತ್ತ ಮುಖ ಮಾಡಬೇಕು. ಓದುವ ಅಭಿರುಚಿ ಯಶಸ್ಸಿಗೆ ಮುನ್ನುಡಿ. ಮಕ್ಕಳಲ್ಲಿ ಸಾಧಿಸುವ ಛಲವಿದ್ದರೆ ಯಾವುದೇ ಸನ್ನಿವೇಶ, ಎದುರಾಗುವ ಕಷ್ಟವನ್ನು ದಾಟಿ ಸಾಧನೆಯ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
ಸಂಸ್ಥೆ ಅಧ್ಯಕ್ಷ ಗೀರೀಶ ದರೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಡಾ.ವಿ.ಎಸ್.ಮಾಳಿ, ಆರ್.ಎಸ್.ಯಲಶೆಟ್ಟಿ, ಆಡಳಿತಾಧಿಕಾರಿ ಎಸ್.ಎಲ್.ಜಾಧವ, ಸಿಆರ್‌ಪಿ ಮಹಾಂತೇಶ ಮುಗಳಖೋಡ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಸದಸ್ಯರಾದ ಬಸವರಾಜ ಚೌಗಲಾ, ವಿನಾಯಕ ಮುಡಸಿ, ನೇಮಿನಾಥ ನಾಗನೂರ, ರವೀಂದ್ರ ಪಾಟೀಲ, ಲಕ್ಷ್ಮಣ ಜಾಯಗೋಣಿ, ಬಿ.ಬಿ.ಮುಗಳಿಹಾಳ ಮತ್ತೀತರರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಆರ್.ಎ.ಭಾವಿ ಸ್ವಾಗತಿಸಿದರು. ಪ್ರೊ.ಶಂಕರ ಮೊಕಾಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ : ಬೆಳಿಗ್ಗೆ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಚಿಕ್ಕೋಡಿಯ ಡಾ.ದಯಾನಂದ ನೂಲಿ ಉದ್ಘಾಟಿಸಿ, ಮಾತನಾಡಿದರು. ಸಂಸ್ಥೆ ನಿರ್ದೇಶಕಿ ಕಲ್ಪನಾತಾಯಿ ದರೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಲಹಾ ಸಮಿತಿ ಅಧ್ಯಕ್ಷ ಶ್ರೀಶೈಲಗೌಡ ಉಮರಾಣಿ, ಸಂಸ್ಥೆ ಕಾರ್ಯದರ್ಶಿ ಡಾ.ವಿ.ಎಸ್.ಮಾಳಿ, ಪುರಸಭೆ ಸದಸ್ಯರಾದ ಜ್ಞಾನೇಶ್ವರ ಧರ್ಮಟ್ಟಿ, ಅಜೀತ ಕೊತ್ತಲಗಿ, ಅಪ್ಪಾಸಾಬ ಸರಿಕರ, ಧನಪಾಲ ಶಿರಹಟ್ಟಿ, ರಾಮಪ್ಪ ದರೂರ, ಪ್ರಾಚಾರ್ಯ ಎಸ್.ಎಸ್.ಅಣ್ಣಿಗೇರಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 