ಮಂದಿರ ನಿರ್ಮಾಣಕ್ಕೆ ನಿತ್ಯ ಸತ್ಸಂಗ ಬಳಗದಿಂದ ಧನಸಹಾಯ

ಮಂದಿರ ನಿರ್ಮಾಣಕ್ಕೆ ನಿತ್ಯ ಸತ್ಸಂಗ ಬಳಗದಿಂದ ಧನಸಹಾಯ  Financial assistance for temple construction from the Nitya Satsanga Balaga

ಜಮಖಂಡಿ, ಜು. 3: ತಾಲ್ಲೂಕಿನ ಹುನ್ನೂರ ಗ್ರಾಮದ ಗ್ರಾಮದೇವಿ ನಿತ್ಯ ಸತ್ಸಂಗ ಬಳಗದ ವತಿಯಿಂದ ಗುರುದೇವಾಶ್ರಮದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣಕ್ಕಾಗಿ ?2,14,800 ದೇಣಿಗೆಯನ್ನು ಹರ್ಷಾನಂದ ಮಹಾಸ್ವಾಮೀಜಿಗಳಿಗೆ ಸಲ್ಲಿಸಲಾಯಿತು.  

ಸುಮಾರು ಆರು ದಶಕಗಳಿಂದ ಗ್ರಾಮದಲ್ಲಿ ನಿತ್ಯ ಸತ್ಸಂಗ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಬಳಗ, ಸತ್ಸಂಗದ ಅಂಗವಾಗಿ ಈ ದೇಣಿಗೆಯನ್ನು ಸಂಗ್ರಹಿಸಿ ಸಮರ​‍್ಿಸಿತು. ಇದೇ ಸಂದರ್ಭದಲ್ಲಿ ಹರ್ಷಾನಂದ ಮಹಾಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು.  

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಸಂಕಲ್ಪದಂತೆ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಸಿದ್ಧೇಶ್ವರ ಶ್ರೀಗಳು ಹುನ್ನೂರಿನಲ್ಲಿ ನಡೆಸಿದ್ದ ಪ್ರವಚನಗಳು ಗ್ರಾಮಸ್ಥರ ಮೇಲೆ ಆಧ್ಯಾತ್ಮಿಕ ಪ್ರಭಾವ ಬೀರಿದ್ದು, ಅವರ ಸ್ಮರಣಾರ್ಥ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ.  

ಸಿದ್ಧೇಶ್ವರ ಶ್ರೀಗಳ ಸಂಕಲ್ಪ ಸಾಕಾರಗೊಳಿಸುವ ಉದ್ದೇಶದಿಂದ ಮಹಿಳೆಯರು ಸೇರಿದಂತೆ ಸತ್ಸಂಗ ಬಳಗದ ಸದಸ್ಯರು ಸ್ವಯಂಪ್ರೇರಿತವಾಗಿ ದೇಣಿಗೆ ಸಂಗ್ರಹಿಸಿ ಸಮರ​‍್ಿಸಿದರು.  ಕಾರ್ಯಕ್ರಮದಲ್ಲಿ ಶಿವಪುತ್ರ ಸ್ವಾಮೀಜಿ, ದಯಾನಂದ ಕೊಣ್ಣೂರ, ಚೆನ್ನಪ್ಪ ಬಿರಾದಾರ, ಶೇಖರ ಸಾವಳಗಿ, ನರಸಪ್ಪ ತೇಲಿ, ಬಸವಂತಪ್ಪ ಹನಗಂಡಿ, ಸಂಗಣ್ಣ ಕಡಪಟ್ಟಿ, ಗುರುಪ್ಪ ಕಲಾದಗೋಳ, ಶಿವಪ್ಪ ಕಡಪಟ್ಟಿ, ಮಲ್ಲಪ್ಪ ಯಲಗುದ್ರಿ, ಅಂಬಿ ಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.