ರಾಯಣ್ಣನ ದೇಶಭಕ್ತಿ ಪ್ರತಿಯೊಬ್ಬರಿಗೂ ಆದರ್ಶವಾಗಲಿ: ಗುರುನಾಥ ಮುರಡಿ

Let Rayanna's patriotism be an example for everyone: Gurunath Murdi

ರಾಯಣ್ಣನ ದೇಶಭಕ್ತಿ ಪ್ರತಿಯೊಬ್ಬರಿಗೂ ಆದರ್ಶವಾಗಲಿ: ಗುರುನಾಥ ಮುರಡಿ

ದೇವರಹಿಪ್ಪರಗಿ 28: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಅವರ ದೇಶಭಕ್ತಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಹೇಳಿದರು. 

ತಾಲೂಕಿನ ಹರನಾಳ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ವೃತ್ತಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದರು ಮಂಗಳವಾರದಂದು ಗ್ರಾಮದಲ್ಲಿ ಮತ್ತೆ ಅದೆ ಜಾಗದಲ್ಲಿ ಪುನರ್ ನಿರ್ಮಾಣ ಮಾಡಿ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಪಿ.ಎಸ್‌.ಐ ಬಸವರಾಜ ತಿಪ್ಪರಡ್ಡಿ ಅವರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮನವಿ ಮಾಡಿ ಮಾತನಾಡಿದ ಅವರು, ದೇಶಕ್ಕಾಗಿ ಬಲಿದಾನವಾದ ಮಹನೀಯರ ವೃತ್ತದ ಮೇಲೆ ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಶೀಘ್ರವೇ ಬಂದಿಸಬೇಕು. ಈ ಮಹನೀಯರು ಒಂದು ಸಮುದಾಯಕ್ಕೆ ಸೀಮಿತವಲ್ಲ ಇವರ ತತ್ವ ಆದರ್ಶ ಹೋರಾಟ ಹಾದಿಗಳ ಮೂಲಕ ಸರ್ವ ಸಮುದಾಯದ ಜನರ ಮನದಾಂಗಲದಲ್ಲಿ ನೆಲೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದರು.  

 ಗ್ರಾಪಂ  ಸದಸ್ಯ ಶಿವಾನಂದ ಯಾತಗೇರಿ, ಸಿದ್ದರಾಮ ಕುರುಬರ, ಶಿವಣ್ಣ ಪರಸಪ್ಪ ಹರನಾಳ, ಮಲ್ಲಪ್ಪ ಯಂಕಂಚಿ, ಶಿವರಾಜ ಹಿರೇಕುರುಬರ, ಮಲ್ಕಪ್ಪ ಹದಿಮನಿ, ಗ್ರಾ.ಪಂ ಕಾರ್ಯದರ್ಶಿ ಯಮನಪ್ಪ ತಳವಾರ, ಪ್ರಕಾಶ ಭಜಂತ್ರಿ, ಮಲ್ಲು ಹಿರೇಕುರುಬರ, ರಾಯಪ್ಪ ಪಡಗಾನೂರ, ಸಮುದಾಯದ ಮುಖಂಡರುಗಳಾದ ಪ್ರಕಾಶ ದೊಡಮನಿ, ಸುನಿಲ ಮಾಗಿ, ಆದೇಶ ಪೂಜಾರಿ, ಸಿದ್ದು ದೊಡ್ಡಿಣಿ, ಆನಂದ ವಗ್ಗರ, ಶರಣು ಪೂಜಾರಿ, ಅಪ್ಪು ಪಟೇದ, ಶ್ರೀಶೈಲ ಇಂಗಳಗಿ, ಭೀಮು ಬುಳ್ಳಾ, ಭೀರು ಹಳ್ಳಿ, ಹಸನ್ ಮುಲ್ಲಾ, ರಾಜು ರಾಠೋಡ, ದಯಾನಂದ ರಾಠೋಡ, ಪರಸು ನಾಯ್ಕೋಡಿ, ಚಂದು ಪೂಜಾರಿ, ರಾಮು ವಗ್ಗರ, ಪರಸು ಹಿಪ್ಪರಗಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಯುವಕರು ಇದ್ದರು.