ಹಿಂದೂಗಳು ಇನ್ನಾದರೂ ಜಾಗೃತರಾಗಲಿ : ಶ್ರೀಕ್ಷೇತ್ರ ದ್ವಾರಪುರದ ಪರಮಾತ್ಮ ಮಹಾರಾಜ
Let Hindus be more aware: The Supreme Lord of Srikshetra Dwarapura
ಧಾರವಾಡ 09: ಪ್ರಸ್ತುತ ಇಡೀ ಭಾರತ ಇಂದು ಹಿಂದೂಗಳದ್ದು ಎನ್ನುವ ಹಾಗಿಲ್ಲ. ಭಾರತ ದೇಶದಲ್ಲಿ ಹಿಂದೂಗಳ ಅಸ್ತಿತ್ವ ಕ್ರಮೇಣ ಕಡಿಮೆಯಾಗುತ್ತಿದೆ. ಹಿಂದೂಗಳು ಇನ್ನಾದರೂ ನಿದ್ರಾವಸ್ಥೆಯಿಂದ ಎದ್ದು ಜಾಗೃತರಾಗಬೇಕು ಎಂದು ಧಾರವಾಡ ಶ್ರೀಕ್ಷೇತ್ರ ದ್ವಾರಪುರದ ಪರಮಾತ್ಮ ಮಹಾರಾಜ ಮಾರ್ಮಿಕವಾಗಿ ಹೇಳಿದರು.
ಇಲ್ಲಿನ ಕುಮಾರೇಶ್ವರ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಕುಮಾರೇಶ್ವರ ಉಪನಗರದ ಈಶ್ವರ ದೇವಸ್ಥಾನದ ಆವರಣದ ಹಾನಗಲ್ ಕುಮಾರಸ್ವಾಮೀಜಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಶಕ್ತಿ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಾರತದ 20 ರಾಜ್ಯಗಳಲ್ಲಿ ಮಾತ್ರ ಹಿಂದೂಗಳಿದ್ದಾರೆ. ನಮ್ಮ ದೇಶ ಎಲ್ಲಿಗೆ ತಲುಪುತ್ತಿದೆ? ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಗಂಡಾಂತರ ಬರುತ್ತದೆೆಂದು ಎಚ್ಚರಿಸಿದರು. ಮುಸ್ಲಿಮರಿಗೆ ಪ್ರಪಂಚದಲ್ಲಿ 52 ದೇಶಗಳಿವೆ. ಕ್ರಿಶ್ಚಿಯನ್‌ರಿಗೆ 70ಕ್ಕೂ ಹೆಚ್ಚು ದೇಶಗಳಿವೆ. ಆದರೆ, ಹಿಂದೂಗಳಿಗೆ ದೇಶನೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕವೂ ಹಿಂದೂಗಳದ್ದಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಂದೂಗಳು ಇನ್ಮುಂದೆಯಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ ಮಾತನಾಡುತ್ತ ಸಂಘದ ಧೇಯದ ಸಾಕಾರಕ್ಕಾಗಿ ದೇಶದ ಲಕ್ಷೊಪ ಲಕ್ಷ ಸಂಖ್ಯೆಯಲ್ಲಿ ಹಿಂದೂ ಸಮ್ಮೇಳನಗಳು ಸಂಘಟಿತವಾಗುತ್ತಿವೆ, ಇದರಿಂದ ಸಮಸ್ತ ಹಿಂದೂ ಸಮಾಜ ಒಂದಾಗುವುದೇ ಪ್ರಮುಖ ಉದ್ದೇಶವಾಗಿದೆ. ಹಿಂದೂ ಎಂದರೆ ಯಾರು? ಅಂದರೆ ಭಾರತದ ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಹಿಂದೂವೇ ಆಗಿದ್ದಾರೆ. ಹಿಂದೂ ಎನ್ನುವುದು ಸಿಂಧೂ ಸಂಸ್ಕೃತಿಯ, ಸಿಂದೂ ಸಭ್ಯತೆಯ ತಡಿಯಲ್ಲಿ ಬದುಕುತ್ತಿರುವ ಎಲ್ಲ ಜನವರ್ಗಗಳೂ ಹಿಂದುಗಳಾಗಿದ್ದಾರೆ ಎಂದರು.
ಬೇರೆ ಬೇರೆ ದೇವರನ್ನು ಆರಾಧಿಸುವ, ಭಜಿಸುವ ಜನಗಳಿದ್ದೇವೆ. ಆದರೆ, ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮ ನಮ್ಮ ಅರ್ಚನಾ ಪೂಜಾ ವಿಧಾನಗಳು ಬೇರೆ ಬೇರೆಯಾಗಿರಬಹುದು. ಆದರೆ, ಅಂತಿಮವಾಗಿ ನಾವು ಆರಾಧಿಸುತ್ತಿರುವುದು ಒಂದೇ ಚೈತನ್ಯಶಕ್ತಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಮಾತನಾಡುತ್ತ ನಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಯ ಅಪಾರ ಸಂಪತ್ತು ಇದೆ. ಅದು ಇಗಲೂ ಸಹ ಹಳ್ಳಿ ಹಳ್ಳಿಗಳಲ್ಲಿ ಸಂಸ್ಕೃತಿಯ ಬೇರು ಬಿಟ್ಟು ಬೆಳೆದುಕೊಂಡು ಬಂದಿದೆ. ವಿದೇಶಿಗರೂ ಸಹ ನಮ್ಮ ಸಂಸ್ಕೃತಿಗೆ ಮಾರುಹೋಗಿ ನಮ್ಮ ಹಿಂದೂ ಧರ್ಮದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ಹಿಂದೂ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠವಾದ ಧರ್ಮವಾಗಿದೆ. ಈಗ ಕಲುಷಿತವಾದ ವಾತಾವರಣ ನಿರ್ಮಾಣವಾಗಿದ್ದರಿಂದ ಹಿಂದೂ ಧರ್ಮದ ಸಂಘಟನೆ ಮಾಡುವುದು ಅತ್ಯಗತ್ಯವಾಗಿದೆ ಎಂದರು.
ಕುಮಾರೇಶ್ವರ ನಗರದ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಬಾಳೇಶ ಹುಣಶ್ಯಾಳ ಸ್ವಾಗತಿಸಿ, ಅತಿಥಿ ಪರಿಚಯಿಸಿದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಎಂ.ಐ. ಕಳ್ಳಿಗುಡ್ಡ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 