ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ : ಅಸ್ಕಿ

Let's work hard for the success of the Taluk Sahitya Sammelan: Aski

ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ : ಅಸ್ಕಿ 

ದೇವರಹಿಪ್ಪರಗಿ 14: ಪಟ್ಟಣದಲ್ಲಿ ಸಮಾಜ ಸೇವಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಸಿ.ಬಿ.ಅಸ್ಕಿ ಅವರನ್ನು ಕಂಡು.ಡಿ.27. ತಿಂಗಳಲ್ಲಿ ಜರುಗುವ ತಾಲೂಕ ಪ್ರಥಮ ಸಾಹಿತ್ಯ ಸಮ್ಮೇಳನ ಕುರಿತಂತೆ ಶನಿವಾರದಂದು ಸಂಘಟಕರಿಂದ ಸಮಾಲೋಚನೆ ಮಾಡಲಾಯಿತು.ನಂತರ ಮಾತನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಾಯ ಸಹಕಾರ ನೀಡಲಾಗುವುದು.ಸಮ್ಮೇಳನಅರ್ಥಪೂರ್ಣವಾಗಿ ಆಚರಿಸುವುದು ಎಲ್ಲಾ ಜನರ ಆಶಯವಾಗಬೇಕು. 

ಸಮ್ಮೇಳನ ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ, ಕನ್ನಡ ಸಾಹಿತ್ಯ ನಾಡು ನುಡಿ, ನೆಲ ಜಲದ ಕುರಿತು ಚರ್ಚೆಯಾಗಿ ಸಮ್ಮೇಳನ ಅಭಿವೃದ್ಧಿ ಪೂರಕವಾಗಬೇಕು. ಸಮ್ಮೇಳನದಲ್ಲಿ ಉತ್ತಮ ವಿಷಯಗಳು ಮಂಡನೆ ಯಾಗಬೇಕು ಹಾಗೂ ಸಮ್ಮೇಳನಾದ ಯಶಸ್ಸಿಗೆ ತನು ಮನ ಧನ ಗಳಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಸಂದರ್ಭದಲ್ಲಿ ಕ.ಸಾ.ಪ ತಾಲ್ಲೂಕಾಧ್ಯಕ್ಷ ಜಿ.ಪಿ.ಬಿರಾದಾರ ಸಮ್ಮೇಳನ ಯಶಸ್ವಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ),ಪ.ಪಂ ಸದಸ್ಯರಾದ ಬಸೀರ ಅಹ್ಮದ್ ಬೇಪಾರಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ರೀಯಾಜ ಯಲಿಗಾರ, ಮುಖಂಡರುಗಳಾದ ಪ್ರಕಾಶ ಮಲ್ಹಾರಿ, ಕಾಶೀನಾಥ ಕೋರಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.