ಕಾಗವಾಡ 07: ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ, ಕೈಗಾರಿಕೀಕರಣ, ನಗರೀಕರಣ, ಅರಣ್ಯನಾಶ, ಸಾಗರ ಮಾಲಿನ್ಯ ಮುಂತಾದ ಕಾರಣಗಳಿಂದ ಪರಿಸರ ದಿನೇ ದಿನೇ ನಾಶವಾಗುತ್ತಿದೆ. ಪರಿಸರವನ್ನು ಇಂಥ ಸಮಸ್ಯೆಗಳಿಂದ ರಕ್ಷಿಸುವ ಸಲುವಾಗಿ ಹಾಗೂ ಪರಿಸರ ನಾಶದಿಂದಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರು ಒಂದಾಗಿ ಶ್ರಮಿಸೋಣ ಎಂದು ಕಾಗವಾಡ ತಹಸೀಲ್ದಾರ ಪರಿಮಳಾ ದೇಶಪಾಂಡೆ ಕರೆ ನೀಡಿದರು.
ಶುಕ್ರವಾರ ದಿ. 7ರಂದು ಕಾಗವಾಡದ ಅರಣ್ಯ ಇಲಾಖೆ ವತಿಯಿಂದ "ವಿಶ್ವಪರಿಸರ ದಿನಾಚರಣೆ" ನಿಮಿತ್ಯ ಸುಮಾರು 500 ಸಸಿಗಳು ಮಲ್ಲಿಕಾಜರ್ುನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮತ್ತು ಸಕರ್ಾರಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮ ಆಚರಿಸಿದರು.
ಅತಿಥಿಗಳಾಗಿ ಆಗಮಿಸಿದ ಅಥಣಿ ಫಾರ್ಮಸರ್್ ಸಕ್ಕರೆ ಕಾಖರ್ಾನೆ ಎಂ.ಡಿಶ್ರೀನಿವಾಸ ಶ್ರೀಮಂತ ಪಾಟೀಲ, ಪಿಎಸ್ಐ ಹನಮಂತ ಶಿರಹಟ್ಟಿ, ಅರಣ್ಯ ಇಲಾಖೆಯ ಕಾಗವಾಡ ವಲಯದ ಅಧಿಕಾರಿ ಪ್ರಶಾಂತ ಗಂಗಧರ, ಉಪತಹಸೀಲ್ದಾರ ವಿಜಯ ಚೌಗುಲೆ, ಯೊಗೇಶ ಶ್ರೀಮಂತ ಪಾಟೀಲ ಇವರಿಂದ ಸಸಿ ನೆಡುವ ಕಾರ್ಯಕ್ರಮ ನೆರವೇರಿತು.
ಶಾಲೆಯ ವಿದ್ಯಾಥರ್ಿಗಳಿಗೆ ಉಗಾರ ಲಾಯನ್ಸ ಕ್ಲಬ್ ಕಾರ್ಯದಶರ್ಿ ಜ್ಯೋತಿಕುಮಾರ ಪಾಟೀಲ, ಕಾಗವಾಡ ತಾಲೂಕಾ ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಮುಖ್ಯಾಧ್ಯಾಪಕರಾದ ಕಲ್ಲಪ್ಪಾ ಹೊನ್ನಾಯಿಕ, ವಾಯುಸೇನಾ ಎನ್.ಸಿ.ಸಿ ಅಧಿಕಾರಿ ಎಸ್.ಬಿ.ಹಿರಗೆನ್ನವರ, ಅರಣ್ಯ ವಿಭಾಗದ ರಕ್ಷಕರಾದ ಮಹಾಂತೇಶ ಚೌಗುಲೆ, ಸಂಜೀವ ಕುಲಗೌಡಾ, ಸಾಗರ ಕಲಾವಂತ, ಎ.ಎಸ್.ಪಾಟೀಲ, ಪ್ರಕಾಶ ಚೌಗುಲೆ, ಪಾರಿಸ್ ಕವಟಗೆ, ಕಂದಾಯ ನೀರಿಕ್ಷಕ ಬಸವರಾಜ ಬೋರಗಲ, ಎಂ.ಆರ್.ಮುಲ್ಲಾ, ವಿನೋದ ದೇವಣೆ ಇವರಿಂದ ಸಸಿಗಳನ್ನು ವಿತರಿಸಲಾಯಿತು.
ವಿದ್ಯಾಥರ್ಿಗಳಿಗೆ ಪರಿಸರ ಬಗ್ಗೆ ತಹಸೀಲ್ದಾರ ಪರಿಮಳಾ ದೇಶಪಾಂಡೆ ವಿಶೇಷ ಮಾಹಿತಿ ನೀಡಿದರು.