ಸರಕಾರದ ಮೂಲಕ ಸೌಲಭ್ಯ ಪಡೆದು ಕೊರೊನಾದಿಂದ ಮುಕ್ತರಾಗೋಣ

ಲೋಕದರ್ಶನ ವರದಿ

ಮೂಡಲಗಿ 06: ಕೊರೊನಾ ಇಡೀ ಪ್ರಪಂಚಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನಲೆಯಲ್ಲಿ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ  ವಿರೋಧ ಪಕ್ಷದ ಮುಖಂಡರು ಸಹ  ಸೇರಿ ನಿಮರ್ೂಲನೆ ಮಾಡುವಂತ ಕೆಲಸವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೋನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಹರಡಿರುವ ಮಹಾಮಾರಿ ಕೊರೋನಾ ವೈರಸ್ದಿಂದ ನಮ್ಮ ದೇಶದಲ್ಲಿ ಸೋಂಕಿತರ ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗುತ್ತಾ ದೇಶ ಗಂಡಾತರ ಪರಿಸ್ಥಿತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮತ್ತು ವೈದ್ಯರ ಸಲಹೆ ಮತ್ತು ಸೌಲಭ್ಯಗಳನ್ನು ಸೂಕ್ತವಾಗಿ ಬಳಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಲಾಕ್ಡಾನ್ ಮಾಡುವ ಮೂಲಕ ಕೊರೋನಾದಿಂದ ಮುಕ್ತರಾಗೋಣಾ ಎಂದು ಹೇಳಿದರು.

ಕೊರೋನಾ ಹರಡದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬ ನಾಗರಿಕರು, ಜನಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಲ್ಲಿ ಪ್ರತಿದಿನ ಮನೆಗಳಿಗೆ ಭೇಟಿ ನೀಡಿ ಅನಾರೋಗ್ಯದಿಂದ ಇರುವಂತ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರೆ ಕೊರೋನಾ ಹರಡದಂತೆ ತಡೆಗಟ್ಟಲು ಸಾಧ್ಯವೆಂದು ಹೇಳಿದರು.

ನಿಜಾಮುದ್ದಿನ್ ದಿಂದ ಬಂದಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತಾವೇ ಬಂದು ಪರಿಶೀಲನೆ ಮಾಡಿಕೊಳ್ಳಬೇಕು ಹೊರೆತು ಮನೆಯಲ್ಲೇ ಬಚ್ಚಿಟ್ಟುಕೊಳ್ಳ ಬಾರದು, ಹಿಂದೂ ಮುಸ್ಲಿಂ ಭೇದ ಭಾವ ಇಲ್ಲದೇ ಒಗ್ಗಟ್ಟಿನಿಂದ ಕೊರೊನಾ ವಿರುದ್ದ ಹೋರಾಟ ಮಾಡಬೇಕೆಂದರು.

ಮೂಡಲಗಿ ದಂಡಾಧಿಕಾರಿ ಡಿ ಜೆ ಮಹಾತ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ತಾಲೂಕಿನಾದ್ಯಂತ 7 ಜನ ಹೊರದೇಶದಿಂದ ಬಂದಂತ ವ್ಯಕ್ತಿಗಳು, ಬೇರೆ ಬೇರೆ ರಾಜ್ಯದಿಂದ ಬಂದಂತ 446 ವ್ಯಕ್ತಿಗಳು, ಬೇರೆ ಜಿಲ್ಲೆಗಳಿಂದ ಬಂದವರು 772 ವ್ಯಕ್ತಿಗಳನ್ನು ಗುರುತಿಸಿ ಗೃಹ ಬಂಧನದಲ್ಲಿಡಲಾಗಿದೆ. ಸುದೈವ ಇವರಲ್ಲಿ ಯಾರಿಗೂ ಸೋಂಕು ತಗಲಿರುವುದು ಇದುವರೆಗೂ ದೃಡಪಟ್ಟಿರುವದಿಲ್ಲಾ. ಪೋಲಿಸ್ ಇಲಾಖೆ, ಅಂಗವಾಡಿ, ಆಶಾ ಕಾರ್ಯಕತರ್ೆಯರು, ಪುರಸಭೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ತಾಲೂಕಾ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಮಾತನಾಡಿ, ಈ ಸಾಂಕ್ರಾಮಿ ರೋಗವು ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದೆ, ಈ ರೋಗಕ್ಕೆ ನಿಖರವಾದ ಔಷಧಿ ಇನ್ನೂ ಸಿಕ್ಕಿಲಾ ವಯಸ್ಸಾದವರೂ ಮತ್ತು ಮಧುಮೇಹಿ ರೋಗಿಗಳು ಕಟ್ಟುನಿಟ್ಟಿನಿಂದ ಚಿಕಿತ್ಸೆ ಪಡೆದಿಕೊಳ್ಳಬೇಕೆಂದರು.

  ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಸರಕಾರಗಳ ಲಾಕ್ ಡೌನ ಕಟ್ಟಳೆಗಳಿಗೆ ಒಳಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರನ್ನು ರಕ್ಷಿಸಲು ಮುಂದಾಗೋಣ ಎಂದು ಹೇಳಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಹಾಗೂ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಜನಪ್ರತಿನಿಧಿಗಳು, ಅಭಿಮಾನಿಗಳು ತಂಡ ತಂಡವಾಗಿ ಸೋಂಕು ಹರಡದಂತೆ ಮುಂಜಾಗೃತೆ ಮೂಡಿಸುತ್ತಿದ್ದಾರೆ.

ತಾ.ಪಂ.ಕಾರ್ಯನಿವರ್ಾಹಕ ಬಸವರಾಜ ಹೆಗ್ಗನಾಯಕ ಮಾತನಾಡಿ, ಜಿಲ್ಲೆಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದು, ಪಕ್ಕದ ತಾಲೂಕಿನಲ್ಲಿ ಸೋಂಕು ದಾಖಲಾಗಿದ್ದು ಎಚ್ಚರಿಕೆಯಿಂದ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕನ್ನು ಹತೋಟಿಗೆ ತರಬೇಕೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ,  ಅರಬಾವಿ ಶಾಸಕರು ಮೂಡಲಗಿ ತಾಲೂಕಿಗೆ 2ಲಕ್ಷ ಮಾಸ್ಕಗಳನ್ನು ಹಂತ ಹಂತವಾಗಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೂಲಕ ವಿತರಿಸುವರೆಂದು ಹೇಳಿದರು. ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, ಸಿ.ಪಿ.ಐ.ವೆಂಕಟೇಶ ಮುರನಾಳ ಮಾತನಾಡಿದರು. 

ಸಭೆಯಲ್ಲಿ ಮುಖ್ಯಾಧಿಕಾರಿ ಡಿ.ಎಸ್.ಹದರ್ಿ, ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ, ಎಚ್.ವಾಯ್.ಬಾಲದಂಡಿ, ಆರ್.ಕೆ.ಬಿಸಿರೊಟ್ಟಿ, ಡಾ: ಭಾರತಿ ಕೋಣಿ, ಸಿ.ಡಿ.ಪಿ.ಒ. ವಾಯ್.ಎಮ್.ಗುಜನಟ್ಟಿ,  ಎನ್.ಎಸ್.ಎಫ್  ಅತಿಥಿ ಗೃಹದ ನಾಗಪ್ಪ ಶೇಖರಗೋಳ, ದಾಸಪ್ಪ ನಾಯಕ, ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಯವರು, ನೂಡಲ್ ಅಧಿಕಾರಿಗಳು ವಿವಿಧ ಗ್ರಾಮಸ್ಥರು ಮತ್ತಿತರರು ಇದ್ದರು. ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಸ್ವಾಗತಿಸಿ ವಂದಿಸಿದರು.