ಸುಂದರ ಸಮಾಜ ಕಟ್ಟೋಣ ಎಲ್ಲರೂ ಬನ್ನಿ: ತಾಲೂಕಾಧ್ಯಕ್ಷ ಬಳಿಗಾರ

ಲೋಕದರ್ಶನ ವರದಿ

ಶಿರಹಟ್ಟಿ 07: ಮಾನವೀಯ ನೆಲೆಗಟ್ಟಿನಲ್ಲಿ ಸುಂದರ ಸಮಾಜ ನಿಮರ್ಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಜಾತಿ, ಧರ್ಮ, ಭಾವನೆಗಳ ನಡುವಿನ ಭಿನ್ನಾಭಿಪ್ರಾಯ, ಅಪನಂಬಿಕೆಗಳನ್ನು ತೊಲಗಿಸಿ ಪ್ರೀತಿಯ ಸಾಮ್ರಾಜ್ಯ ಕಟ್ಟೋಣ ಎಲ್ಲರೂ ಬನ್ನಿ ಎಂದು ತಾಲೂಕಾಧ್ಯಕ್ಷ ಕೆ.ಎ. ಬಳಿಗಾರ ಕರೆ ನೀಡಿದರು.

ಅವರು ಸ್ಥಳೀಯ ಜ. ಫಕ್ಕೀರೇಶ್ವರ ಸರಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಮಂಗಳವಾರ ಸಹಮತ ವೇದಿಕೆ ವತಿಯಿಂದ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಸಮಾಜದಲ್ಲಿ ಜಾತಿ, ಮತ, ಪಂಥಗಳ ನಡುವಿನ ಘರ್ಷಣೆ, ಅಹಂ ಮನೋಭಾವ ತೊಲಗಿಸಿ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಮೂಡಿಸುವುದೇ ನಿಜವಾದ ಕಲ್ಯಾಣವಾಗಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡಬೇಕು, ಅರಿವೇ ಗುರು, ಆಚಾರವೇ ಶಿಷ್ಯ, ಪರಿಣಾಮವೇ ತಪಸ್ಸು, ಜ್ಞಾನವೇ ಪರಮೋಚ್ಛ ಸಂಪತ್ತು ಎಂದವರು ಬಸವಣ್ಣ, ಇಂತಹ ಮಹಾತ್ಮರ ಆಚಾರ, ವಿಚಾರಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸುಂದರ ಸಮಾಜ ನಿಮರ್ಿಸಲು ಮುಂದಾಗಬೇಕು ಎಂದು ಹೇಳಿದರು.

ನಂತರ ಪ್ರಾಚಾರ್ಯ ಎಸ್.ಆರ್. ಶಿರಹಟ್ಟಿ ಮಾತನಾಡಿ. 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿದು ಜಾತಿ ಪದ್ಧತಿ, ಅಸಮಾನತೆ, ಕಂದಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಿ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದರು, ಕನ್ನಡದಲ್ಲಿ ವಚನ, ಸಾಹಿತ್ಯ, ಕಥೆ, ಕಾದಂಬರಿಗಳನ್ನು ರಚಿಸುವುದರ ಮೂಲಕ ಕನ್ನಡ ಭಾಷೆಯನ್ನು ಉತ್ತುಂಗದಲ್ಲಿ ಮೆರೆಯುವಂತೆ ಮಾಡಿದ್ದರು. ಅಲ್ಲದೇ ಬಸವಣ್ಣನವರು 12ನೇ ಶತಮಾನಲ್ಲೇ ಈಗಿನ ರಾಜಕೀಯ ಹಾಗೂ ಸಂವಿಧಾನದ ಅಂಶಗಳನ್ನು ವಚನ ಸಾಹಿತ್ಯದ ಮೂಲಕ ಜನರಿಗೆ ತಿಳಿಸಿದ್ದರು ಎಂದು ಹೇಳಿದರು.

ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಎಚ್.ಎಂ. ದೇವಗಿರಿ, ಎಫ್.ಎಸ್. ಅಕ್ಕಿ, ಎಂ.ಕೆ. ಲಮಾಣಿ, ಶಿವಾನಂದ ತಳ್ಳಳ್ಳಿ, ಅನುಪಮಾ ಬಾತಖಂಡೆ, ವೆಂಕಟೇಶ ಅರ್ಕಸಾಲಿ, ಶಿವಶಂಕರ ಎಸ್, ಎಸ್.ಎಸ್. ಹಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.