ಜೀತಕ್ಕೆ ಒಳಪಟ್ಟವರಿಗೆ ಕಾನೂನು ನೆರವು, ಪುನರ್ವಸತಿ ಕಲ್ಪಿಸಬೇಕು: ಪಿ. ಮುರಳಿ ಮೋಹನ ರೆಡ್ಡಿ
ಬೆಳಗಾವಿ 14 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಿವಿದ ಇಲಾಖೆಗಳು ಹಾಗೂ ಸ್ಪಂದನ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಫೆ.14) “ಜೀತ ಪದ್ಧತಿ ನಿರ್ಮೂಲನಾ ದಿನ”ದ ಅಂಗವಾಗಿ “ಜೀತ ಪದ್ಧತಿ ನಿಷೇಧಾಧಿಕಾರಿಗಳಿಗೆ” ಕಾರ್ಯಾಗಾರ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ. ಮುರಳಿ ಮೋಹನ ರೆಡ್ಡಿ ಅವರು ಜೀತ ಪದ್ಧತಿ ಈ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ. ಮನೆಯಲ್ಲಿ ಹಣಕಾಸಿನ ತೊಂದರೆಯಾದರೆ ಹಣವಂತರ ಬಳಿ ಹಣವನ್ನು ಪಡೆಯುತ್ತಿದ್ದರು. ಪಡೆದ ಹಣಕ್ಕೆ ಬಡ್ಡಿಯ ರೂಪದಲ್ಲಿ ಎಲ್ಲರೂ ಕೂಡ ಅವರ ಮನೆಯಲ್ಲಿ ಜೀತವನ್ನು ಮಾಡಬೇಕಿತ್ತು. ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು 1976ರಲ್ಲಿ ದೇಶಾದ್ಯಂತ ಜಾರಿ ಮಾಡಲಾಗಿದೆ ಎಂದು ಹೇಳಿದರು. ಜೀತ ಪದ್ಧತಿ ಎಲ್ಲಿ ನಡೆಯುತ್ತದೆ ಎಂಬುದನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಜೀತಕ್ಕೆ ವಳಪಟ್ಟವರಿಗೆ ಕಾನೂನು ನೇರವು ನೀಡುವದರ ಜೊತೆಗೆ ಅಂತವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಹಾಯಕ ಕಾರ್ಮಿಕ ಆಯುಕ್ತರಾದ ದೇವರಾಜ ಎಮ್.ಎನ್ ಮಾತನಾಡಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು. ಜೀತ ಪದ್ಧತಿ ನಿರ್ಮೂಲನೆ ಕಾನೂನು ತಿಳಿದುಕೊಂಡು ಇಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದರ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯವಿದೆ. ಸರ್ಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಹೇಳುವುದು ನಮ್ಮ ಕರ್ತವ್ಯ” ಎಂದು ಹೇಳಿದರು ಜಿಲ್ಲಾ ಪ0ಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿ0ಧೆ ಅಧ್ಯಕ್ಷತೆ ವಹಿಸಿ ಮಾತನಾಡಿ “ಜೀತ ಪದ್ದತಿ” ನಿರ್ಮೂಲನೆಯಲ್ಲಿ ಇಲಾಖೆಗಳ ಜವಾಬ್ದಾರಿಗಳು, ಕ್ರಮ ಬದ್ದವಾದ ತನಿಖೆ, ಹಾಗೂ ಜೀತ ಕಾರ್ಮಿಕರನ್ನು ಗುರುತಿಸುವಿಕೆ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳು ಸಹಕಾರದಿ0ದ ಕೆಲಸ ನಿರ್ವಹಿಸಿದರೆ “ಜೀತ ಪದ್ಧತಿ” ನಿಯ0ತ್ರಣ ಮಾಡಲು ಸಾದ್ಯವೆ0ದು ಹೇಳಿದರು. ಸ್ಪಂದನಾ ಸಂಸ್ಥೆಯ ನಿರ್ದೇಶಕ ವಿ. ಸುಶೀಲ, ಜಿಲ್ಲಾ ಸಂಯೋಜಕ ಕರೆಪ್ಪಾ ಮಾದಿಗರ ಹಾಗೂ ವಿವಿದ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.