ಬೆಳಗಾವಿ 30: ಬೆಳಗಾವಿ ಜಿಲ್ಲೆಯ ಇತಿಹಾಸ ಪರಂಪರೆ ಇಲ್ಲಿಯ ಕಲೆ ವಾಸ್ತುಶಿಲ್ಪ, ವಿವಿಧ ದೇವಾಲಯಗಳು, ಚರ್ಚಗಳು, ಮಸೀದಿಗಳು ಹಾಗೂ ಈ ಭಾಗದಲ್ಲಿ ಆಳ್ವಿಕೆ ಮಾಡಿದ ರಾಜವಂಶಗಳು ಮತ್ತು ಆ ಕಾಲಿನ ಅಧಿಕಾರಿಗಳ ಕೊಡುಗೆಯೆ ಕಲೆಯ ವಾಸ್ತುಶಿಲ್ಪದ ಚಿತ್ರಣವಾಗಿದೆ ಎಂದು ಖಾನಾಪುರ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಚಂದ್ರಶೇಖರ ತಾಬೋಜಿ ಹೇಳಿದರು.
ಆಂಜನೇಯ ನಗರ ಮಾಳ ಮಾರುತಿ ಬಡಾವಣೆಯ ಸಂಗೊಳ್ಳಿ ರಾಯಣ್ಣ ಪ್ರಥಮ ದಜರ್ೆ ಘಟಕ ಮಹಾವಿದ್ಯಾಲಯದಲ್ಲಿ ದಿ. 29 ರಂದು ಜರುಗಿದ ಇತಿಹಾಸ ವಿಭಾಗದ ಪರಂಪರೆ ಕೂಟದ ಅಡಿಯಲ್ಲಿ "ಕನರ್ಾಟಕದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಐತಿಹಾಸಿಕ, ಧಾಮರ್ಿಕ ಮತ್ತು ಧಾಮರ್ಿಕೇತರ ಕಟ್ಟಡಗಳನ್ನು ಕಾಣುತ್ತೇವೆ. ಪ್ರತಿ ತಾಲೂಕಿನಲ್ಲಿ ಕಾಣುವ ಸ್ಮಾರಕಗಳು ಪರಂಪರೆಯ ಬಿಂಬಿತ ನಿದರ್ಶಗಳಾಗಿವೆ. ಕಟ್ಟಡಗಳ ಶೈಲಿ ಆಕಾರ ಆ ಕಾಲದ ದೇವಾಲಯದ ಪರಿಕಲ್ಪನೆ ಇಂದಿನ ಯುವ ಜನತೆಗೆ ಚರಿತ್ರೆ ಅಭ್ಯಸಿಸಲು ಪ್ರೇರಕವಾಗಿವೆ. ಭಾರತದ ಇತಿಹಾಸದಲ್ಲಿ ಬೆಳಗಾವಿ ಐತಿಹಾಸಿಕ ಮತ್ತು ಭೌಗೊಳಿಕ ದೃಷ್ಠಿಯಿಂದ ಮಹತ್ವ ಹೊಂದಿದೆ. ಬೆಳಗಾವಿಯ ಸುತ್ತುಮುತ್ತಲಿನ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಕಾರ್ಯ ಅತ್ಯವಶ್ಯವಾಗಿದೆ ಎಂದು ತಾಬೋಜಿ ಅಭಿಪ್ರಾಯ ಪಟ್ಟರು.
ಉಪಪ್ರಾಚಾರ್ಯ ಪ್ರೊ. ಬಿ.ಎಸ್.ನಾವಿ ಮಾತಾಡುತ್ತಾ ಇತಿಹಾಸ ವಿಭಾಗದ ಪರಂಪರೆ ಕೂಟದ ಅಡಿಯಲ್ಲಿ ಇತಿಹಾಸ ವಿಭಾಗವು ಅನೇಕ ಪಠ್ಯ ಮತ್ತು ಪಠ್ಯೇತರ ಜೊತೆಗೆ ಐತಿಹಾಸಿಕ ಚಟುವಟಿಕೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈ ಚಟುವಟಿಕೆಗಳ ಅಡಿಯಲ್ಲಿ ವಿದ್ಯಾಥರ್ಿಗಳ ವೃತ್ತಿ ಬೆಳವಣಿಗೆಗೆ ಹಾಗೂ ಅವರ ಐತಿಹಾಸಿಕ ಜ್ಞಾನಕ್ಕೆ ಭದ್ರ ಬುನಾದಿಯಾಗಿದೆ. ಬಹು ಸಂಸ್ಕೃತಿಯ ಸಂಪ್ರದಾಯಗಳನ್ನು ಹೊಂದಿದ ಬೆಳಗಾವಿ ವೇಣುಗ್ರಾಮ ಎಂಬ ಹೆಸರಿನಿಂದ ಪ್ರಾರಂಭವಾಗಿ ಸಕ್ಕರೆಯ ಬಟ್ಟಲು ಎಂದು ಕರೆಯಿಸಿಕೊಂಡು ಭಾರತದ ಭೌಗೋಳಿಕ ಎಲ್ಲೆಯಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದೆ. ವಿವಿಧೆತೆಯಲ್ಲಿ ಏಕತೆಯಂಬಂತೆ ನಾವೆಲ್ಲರು ಕಲೆ ಮತ್ತು ವಾಸ್ತುಶಿಲ್ಪದ ಕುರುಹುಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಧ್ಯಾಪಕ ಡಾ. ಎಂ. ಸಿ. ಎರ್ರಿಸ್ವಾಮಿ ಮಾತನಾಡಿ ಮನುಕುಲದ ಅನುಭವಗಳ ಗಣಿಯೆ ಇತಿಹಾಸವಾಗಿದೆ. ಹಿಂದಿನ ಇತಿಹಾಸ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುತ್ತದೆ. ಇತಿಹಾಸದ ಬಗ್ಗೆ ಪ್ರತಿಯೊಬ್ಬ ವಿದ್ಯಾಥರ್ಿಗಳಿಗೆ ಅವುಗಳ ಅರಿವು ಮತ್ತು ಅವುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿರಬೇಕೆಂದು ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿರುವ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳ ಶೈಲಿ, ವಿನ್ಯಾಸ, ಆಕಾರ ಮತ್ತು ಅದಕ್ಕಿರುವ ಐತಿಹಾಸಿಕ ಹಿನ್ನಲೆಯನ್ನು ನಾವು ಅರಿತು, ಸ್ಥಳೀಯ ಪ್ರದೇಶದಿಂದ ಹಿಡಿದು ರಾಷ್ಟ್ರಮಟ್ಟದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ನಾವೆಲ್ಲರು ಶ್ರಮಿಸಬೇಕೆಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಂಪರೆ ಕೂಟದ ಸಂಚಾಲಕರಾದ ಡಾ.ಸಾದಾಶಿವ ಮುಗಳಿಯವರು ಪರಂಪರೆ ಕೂಟದ ಮಹತ್ವ ಮತ್ತು ಅದರಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿದರು.
ನವ್ಯಶ್ರೀ ಶೆಟ್ಟಿ ಪ್ರಾರ್ಥನ, ಸಂಗೀತಾ ಲಮಾಣಿ ವಂದನಾರ್ಪಣೆ, ನಿರೂಪಣೆಯನ್ನು ಶ್ವೇತಾ ಬೊಳಶೆಟ್ಟಿ ನೆರವೇರಿಸಿದರು. ಸಂಗೊಳ್ಳಿ ರಾಯಣ್ಣ ಪ್ರಥಮ ದಜರ್ೆ ಘಟಕ ಮಹಾವಿದ್ಯಾಲಯದ ಬೋಧಕ/ಬೋಧಕೇತರ ಹಾಗೂ ಎಲ್ಲ ತರಗತಿಗಳ ಪರಂಪರೆ ಕೂಟದ ಸದಸ್ಯರು ಪಾಲ್ಗೊಂಡಿದ್ದರು.