‘ಈ ಕಾಲದ ಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ’ ಉಪನ್ಯಾಸ ಕಾರ್ಯಕ್ರಮ
Lecture program 'Expression of Wishes in Kannada Poetry of this Time'
ಧಾರವಾಡ 30: ಮುದ್ರಣ ಮಾಧ್ಯಮದಲ್ಲಿರುವ ಬರಹದ ಸುಖ, ನೆಮ್ಮದಿ ಇಂದಿನ ಸಾಮಾಜಿಕ ಜಾಲತಾಣದ ಬರಹಗಳಲ್ಲಿ ನಿಗಿಸಲು ಸಾಧ್ಯವೇ ಇಲ್ಲ. ಹೀಗಾಗಿ ಕನ್ನಡದ ಕಾವ್ಯ ಶಕ್ತಿ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಾಜಿ ದೇವೆಂದ್ರ್ಪ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಎಸ್. ಎಂ. ವೃಷಭೇಂದ್ರಸ್ವಾಮಿ ಸಂಸ್ಮರಣದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಈ ಕಾಲದ ಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ’ ವಿಷಯ ಕುರಿತು ಉಪನ್ಯಾಸ ನೀಡ್ತಿದರು. ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದು. ಅದು ಕವಿರಾಜ ಮಾರ್ಗಕಾರನಿಂದ ಹಿಡಿದು ಇಂದಿನ ತನಕ ನಿರಂತರವಾಗಿ ಕನ್ನಡಕಾವ್ಯ ಕೃಷಿ ಮಾಡುತ್ತಲೇ ಬಂದಿದೆ. 70ರ ದಶಕದಲ್ಲಿ ಬರಹಗಾರರಲ್ಲಿದ್ದ ಬದ್ದತೆ ಇಂದಿನ ತಲೆಮಾರಿನ ಬರಹಗಾರರಲ್ಲಿ ಇಲ್ಲದಿರುವುದು ವಿಷಾದನೀಯ. ಬೇಂದ್ರೆ, ಕುವೆಂಪು, ಗೋಕಾಕ, ಯಕ್ಕುಂಡಿ ಅವರಂತಹ ಮೇಧಾವಿ ಕವಿಗಳಲ್ಲಿ ಅದ್ಭುತವಾದ ಕಾವ್ಯಶಕ್ತಿ ಇತ್ತು. ಇಂದು ನಮ್ಮಲ್ಲಿ ಉತ್ತಮ ಬರಹಗಾರರು ಇದ್ದರೂ ಸಹ ಅವರ ಕಾವ್ಯ ಓದುವವರ ಸಂಖ್ಯೆ ಇಲ್ಲದಿರುವುದು ಆತಂಕಕಾರಿಯಾಗಿದೆ.
ಕಾವ್ಯ ನಿಂತನೀರಲ್ಲ ಆದರೆ ಚಲನ ಶೀಲ ಗುಣವಿದೆ. ಇಂದು ಅನೇಕ ಯುವ ಬರಹಗಾರರು ತಮ್ಮ ವಿಭಿನ್ನ ಆಲೋಚನೆ ಮೂಲಕ ಕಾವ್ಯ ಸೃಷ್ಟಿ ಮಾಡುತ್ತಲೇ ಇದ್ದಾರೆ. ಆದರೆ ಅವರ ಬರಹಗಳನ್ನು ಅರಗಿಸಿಕೊಳ್ಳುವವರು ಇಲ್ಲವಾಗಿದೆ. ಕಾವ್ಯ ರಚನೆಕಾರರಲ್ಲಿ ಮೊದಲು ಬದ್ದತೆ ಬೇಕು.ಇಂದಿನ ಯುವ ಬರಹಗಾರರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗುವಂತಾಗಬೇಕು ಅಂದಾಗ ಕಾವ್ಯಕ್ಕೆ ಶಕ್ತಿ ಹಾಗೂ ಬಲ ತುಂಬಿದಂತಾಗುತ್ತದೆ. ಶರಣರು, ತತ್ವ ಪದಕಾರರು, ದಾರ್ಶನಿಕರೂ ಸಹ ತಮ್ಮಕಾವ್ಯ ಶಕ್ತಿ ಮೂಲಕ ಸಮಾಜಲ್ಲಿ ಒಡೆದ ಮನಸ್ಸು ಬೆಸೆದು ಒಂದಾಗಿ ಬಾಳುವುದನ್ನು ಕಲಿಸಿದ್ದು ಸ್ಮರಿಸಬೇಕು. ಇಂದಿನ ಬರಹಗಾರರು ಇಂದಿನ ಸಾಮಾಜಿಕ ತಲ್ಲಣಗಳು, ಬಿಕ್ಕಟ್ಟು ಕುರಿತು ತಮ್ಮ ಬರಹದ ಮೂಲಕ ಸಮುದಾಯಕ್ಕೆ ತಿಳಿಸಬೇಕಿದೆ. ನಮ್ಮಕಾವ್ಯ ಪರಂಪರೆಯನ್ನು ಇಂದಿನ ಬರಹಗಾರರು ಅರಿತು ಕೊಳ್ಳಬೇಕೆಂದರು. ಹೊನ್ನಾವರದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶ್ರೀಪಾದ ಶೆಟ್ಟಿಅವರು ಮಾತನಾಡಿ, ನಮ್ಮ ಗುರುಗಳಾದ ಡಾ.ಎಸ್.ಎಂ. ವೇಷಭೇಂದ್ರ ಸ್ವಾಮಿಗಳದ್ದು ವರ್ಣರಂಜಿತ ವ್ಯಕ್ತಿತ್ವ. ಅಪಾರ ಜೀವನೋತ್ಸಾಹ ಅವರಲ್ಲಿತ್ತು. ತಮ್ಮ ಜೀವನವನ್ನು ಹಬ್ಬದಂತೆ ಕಂಡವರಾಗಿದ್ದರು. ಅವರು ನಮ್ಮ ಹೃದಯದಲ್ಲಿ ಬಿತ್ತಿದ ಅಕ್ಷರದ ಬೀಜ -ತೋರಿದ ಪ್ರೀತಿ ಅನನ್ಯವಾದುದು. ಎದ್ದು ಕಾಣುವ ವ್ಯಕ್ತಿತ್ವದ ಅವರಲ್ಲಿದ್ದ ಕಾವ್ಯದ ಶಕ್ತಿ ದೊಡ್ಡದಿತ್ತು. ಬರಹಗಾರರಿಗೆ ಅವರಂತಹ ಬದ್ಧತೆ, ಅಗತ್ಯಎಂದು ಸ್ಮರಿಸಿಕೊಂಡರು.
ದತ್ತಿ ದಾನಿಗಳಾದ ಡಾ. ಎಸ್.ಎಂ. ಶಿವಪ್ರಸಾದ ದತ್ತಿ ಆಶಯ ಕುರಿತು ಮಾತನಾಡಿ ಕ.ವಿ.ವ ಸಂಘದಲ್ಲಿದತ್ತಿ ಇಡುವ ಮೂಲಕ ತಮ್ಮ ತಂದೆಯವರಾದ ದಿ.ಎಸ್. ಎಂ. ವೃಷಭೇಂದ್ರ ಸ್ವಾಮಿಗಳನ್ನು ಸ್ಮರಿಸಿ, ಅವರನ್ನು ಜೀವಂತವಾಗಿಸುವ ಕಾರ್ಯ ಮಾಡಲಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಜ್ಯೋತಿ ಭಾವಿಕಟ್ಟಿ ಮತ್ತು ಪ್ರೊ.ಆಶಾ ಗುಳೇದಗುಡ್ಡ ಪ್ರಾರ್ಥಿಸಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸದರು. ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಸಂಜೀವ ಕುಲಕರ್ಣಿ, ಶಂಕರ ಕುಂಬಿ, ಪ್ರೊ.ಶಶಿಧರ ತೋಡಕರ, ಡಾ. ಡಿ. ಎಂ. ಹಿರೇಮಠ, ಎಂ.ಎಂ. ಚಿಕ್ಕಮಠ, ಶಿವಾನಂದ ಹೂಗಾರ, ಡಾ.ಸಿದ್ಧನಗೌಡ ಪಾಟೀಲ, ವಾಯ್.ಆರ್.ನಿಂಬಣ್ಣವರ, ಸುಶೀಲಾ ಶೆಟ್ಟಿ, ಪ್ರೊ. ಡಿ.ಎಂ.ನಿಡವಣಿ, ನಿರ್ಮಲಾ ಶೆಟ್ಟರ, ನಾಗಭೂಷಣ, ಪ್ರೊ.ಬಿ.ಎಸ್. ಶಿರೋಳ, ಡಾ.ಮಾರ್ಕಂಡೇಯ ದೊಡಮನಿ, ಬಿ.ಆಯ್.ಈಳಿಗೇರ, ಜೋಸೆಫ್ ಮಲ್ಲಾಡಿ, ಎಂ.ಬಿ.ಹೆಗ್ಗೇರಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 