‘ಉರಿಬರಲಿ ಸಿರಿಬರಲಿ’ ಕುರಿತು ಉಪನ್ಯಾಸ
Lecture on 'Let there be fire and let there be wealth'
ಧಾರವಾಡ 16: ಡಾ. ಆರ್. ಸಿ. ಹಿರೇಮಠ ಆತ್ಮಕಥನ ‘ಉರಿಬರಲಿ ಸಿರಿಬರಲಿ’ ಅದು ಬರಿ ವ್ಯಕ್ತಿ ಚರಿತ್ರೆ ಆಗಿರದೇ ಆ ಕಾಲಘಟ್ಟದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯನ್ನು ಕಟ್ಟಿಕೊಡುವ ಅಪರೂಪದ ಶ್ರೇಷ್ಠ ಜೀವನ ಚರಿತ್ರೆಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶಾಂತಾ ಇಮ್ರಾಪೂರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಶ್ರೇಷ್ಠ ಭಾಷಾ ವಿಜ್ಞಾನಿಗಳಾದ ಡಾ. ಆರ್. ಸಿ. ಹಿರೇಮಠ ದತ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಆತ್ಮಕಥೆ ಉರಿಬರಲಿ ಸಿರಿಬರಲಿ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಡಾ. ಆರ್. ಸಿ. ಹಿರೇಮಠ ಕಡು ಬಡತನದಲ್ಲಿ ಹುಟ್ಟಿಬಂದು ಜೋಳಿಗೆ ಹಾಕಿ ಕಂತಿಭಿಕ್ಷೆಯಿಂದ ಜೀವನಸಾಗಿಸಿದ ಪರಿ. ಇವರು ಬಡತನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಬಂದವರು. ತಮ್ಮ ಸ್ವಪ್ರತಿಭೆಯಿಂದಲೇ ಜ್ಞಾನ ದಾಸೋಹಿಯಾಗಿ, ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಸ್ಥಾಪಕರಾಗಿ ಕೊನೆಗೆ ಕುಲಪತಿಗಳಾಗಿ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆಸಿದರು. ಒಬ್ಬ ಶ್ರೇಷ್ಠ ಸಂಶೋಧಕನಿಗಿರಬೇಕಾದ ವೈಜ್ಞಾನಿಕತೆ, ಸತ್ಯ ನಿಷ್ಠುರತೆ, ಪಾಂಡಿತ್ಯ ಅವರಲ್ಲಿತ್ತು.
ಅವರು ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯ ಓದುವ ವಿದ್ಯಾರ್ಥಿಗಳಿಗೆ ಅನುಕೂಲಿಸಲು ಕನ್ನಡ ಸಾಹಿತ್ಯದ ಜೊತೆಗೆ ಭಾಷಾಶಾಸ್ತ್ರ, ಜಾನಪದ ಶಾಸ್ತ್ರದಂತಹ ವಿಷಯ ಅಧ್ಯಯನಕ್ಕೆ ಅನುಕೂಲಿಸಿದರು. ಅಳಿದು ಹೋಗುತ್ತಿದ್ದ ಸುಮಾರು 10 ಸಾವಿರ ಹಸ್ತಪ್ರತಿ ಸಂರಕ್ಷಿಸಿ ಸಂಗ್ರಹಿಸಿದ್ದರು. ಶರಣ ಸಂಸ್ಕೃತಿಯ ಚಿಂತಕರಾದ ಅವರು ವಚನ ಸಾಹಿತ್ಯ, ದಾಸಸಾಹಿತ್ಯ, ಗ್ರಂಥ ಪ್ರಕಟಣೆಯ ವಿಭಾಗ ಪ್ರಾರಂಭಿಸಿದರು. ವಿದೇಶಗಳಿಗೆ ಹೋಗಿ ಭಾಷಾಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ಮಾಡಿದರು. ಯಾವ ಟಿಪ್ಪಣಿ ಇಲ್ಲದೇ ತಾಸುಗಟ್ಟಲೆ ನಿರರ್ಗಳವಾಗಿ ಉಪನ್ಯಾಸ ನೀಡುತ್ತಿದ್ದರು. ಅವರ ಆತ್ಮಕಥೆ “ಉರಿಬರಲಿ ಸಿರಿಬರಲಿ” ಎಂಬುದು ಜಗತ್ತಿನ ಆತ್ಮಕಥನದಲ್ಲೇ ಸರ್ವಶ್ರೇಷ್ಠವಾದುದಾಗಿದೆ. ಅವರು ನಿಜ ಅರ್ಥದಲ್ಲಿ ಕನ್ನಡ ಸಾಹಿತ್ಯದ ಯುಗ ಪ್ರವರ್ತಕರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿಗಳಾದ ಡಾ. ಬಾಳಣ್ಣ ಶೀಗೀಹಳ್ಳಿ ಮಾತನಾಡಿ, ಡಾ. ಆರ್. ಸಿ. ಹಿರೇಮಠ ಅವರು ತಮ್ಮ ಆತ್ಮಕಥನ ‘ಉರಿಬರಲಿ ಸಿರಿಬರಲಿ’ ಎಂಬುದನ್ನು ವಸ್ತುನಿಷ್ಠವಾಗಿ, ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಪಾಠ ಕೇಳುವುದೇ ವಿದ್ಯಾರ್ಥಿಗಳಿಗೆ ಸಂಭ್ರಮ ಪ್ರಾಧ್ಯಾಪಕರಲ್ಲಿರಬೇಕಾದ ಬದ್ದತೆ ಹಾಗೂ ಆತ್ಮವಿಶ್ವಾಸ ಅವರಲ್ಲಿತ್ತು. ಗಾಂಧೀಜಿ ಅವರಂತೆ ಅವರ ಬದುಕೇ ಒಂದು ಸಂದೇಶವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದತ್ತಿದಾನಿ ಡಾ. ಶಶಿಕಲಾ ಆರ್. ಹಿರೇಮಠ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಸುಮಿತ್ರಾ ಕಾಡದೇವರಮಠ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಎಂ. ಎಂ. ಚಿಕ್ಕಮಠ, ಶಂಕರಲಿಂಗ ಶಿವಳ್ಳಿ, ಡಾ. ಲಿಂಗರಾಜ ಅಂಗಡಿ, ಸುರೇಶ ಭಂಡಾರಿ, ಡಾ. ಡಿ. ಎಂ. ಹಿರೇಮಠ ಸೇರಿದಂತೆ ಮುಂತಾದವರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 