‘ನಗೆಯ ಬಣ್ಣ ಹುಡುಕಿದ ಡಾ.ಎಂ.ಎಸ್. ಸುಂಕಾಪುರ’ ಉಪನ್ಯಾಸ
Lecture on 'Dr. M.S. Sunkapura, who discovered the color of laughter'
ಧಾರವಾಡ 11: ಕನ್ನಡದ ಬೇರನ್ನುಜಾನಪದ ಸಂಸ್ಕೃತಿಯಲ್ಲಿಕಂಡಡಾ.ಎಂ.ಎಸ್. ಸುಂಕಾಪುರಅಪ್ಪಟಗ್ರಾಮೀಣ ಸಂಸ್ಕೃತಿಯಲ್ಲಿ ಬೆಳೆದು ಬಂದವರು.ಅವರ ಮನೆತನವೇಜಾನಪದ ಪರಂಪರೆಯ ಪ್ರಯೋಗಾಲಯದಂತಿತ್ತುಎಂದು ಪುಣೆಯಡಾ.ಶಶಿಕಾಂತ ಪಟ್ಟಣಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ.ಎಂ.ಎಸ್. ಸುಂಕಾಪುರದತ್ತಿ ಅಂಗವಾಗಿ ಆಯೋಜಿಸಿದ್ದ ‘ನಗೆಯ ಬಣ್ಣ ಹುಡುಕಿದ ಮಹಾಮಾನವತಾವಾದಿ ಡಾ.ಎಂ.ಎಸ್. ಸುಂಕಾಪುರ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದಅವರು, ಡಾ.ಎಂ.ಎಸ್. ಸುಂಕಾಪೂರ ಸೃಜಶೀಲ ಕೃತಿಗಳ ಪ್ರಧಾನ ಅಂಶವೇ ಹಾಸ್ಯ ಮತ್ತು ವಿಡಂಬನೆ. ಅವರ ಸಹಜ ಮಾತುಗಳಲ್ಲಿಯೂ ಸಹ ಹಾಸ್ಯ ಪ್ರಜ್ಞೆಇರುತ್ತಿತ್ತು.ಅಪ್ಪಟ ದೇಶಿಯ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದ ಅವರು ಬಾಲ್ಯದಿಂದಲೇಗ್ರಾಮೀಣಜಾನಪದ ಸಂಸ್ಕೃತಿಯ ಬಯಲಾಟಗಳ ಬಗ್ಗೆ ಆಸಕ್ತಿ ಇತ್ತು.ಬೆಳಗಾವಿ ಲಿಂಗರಾಜಕಾಲೇಜಿನಲ್ಲಿಅಧ್ಯಯನ ಮಾಡುವಾಗ ಮರಾಠಿಮಯವಾದಕಾಲದಲ್ಲಿಜಾನಪದ ಆಟಗಳ ಪ್ರದರ್ಶನದ ಮೂಲಕ ಬೆಳಗಾವಿಯಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಿದ್ದರು.
ಡಾ. ಆರ್.ಸಿ. ಹಿರೇಮಠರ ಒಳ್ಳೆಯ ಒಡನಾಡಿಯಾಗಿದ್ದಅವರು ಕ.ವಿ.ವಿ. ಕನ್ನಡಅಧ್ಯಯನ ಪೀಠದ ಮುಖ್ಯಸ್ಥರಾಗಿ, ವಿಭಾಗವನ್ನು ಬೆಳೆಸಿದರು.ಪ್ರೊ.ಕೆ.ಜಿ. ಕುಂದಣಗಾರ ಮಾರ್ಗದರ್ಶನದಲ್ಲಿಕನ್ನಡ ಸಾಹಿತ್ಯದಲ್ಲಿ ಹಾಸ್ಯ ಮಹಾಪ್ರಬಂಧ ರಚಿಸಿ ಕ.ವಿ.ವಿ., ಪಿ.ಎಚ್.ಡಿ. ಪಡೆದರು. ಹರಟೆ ಹಾಗೂ ನಾಟಕಕ್ಕೆ ಸಂಬಂಧಿಸಿದಂತೆ ನಗೆಹೊಗೆ, ಗಫ್‌ಚಿಪ್ ನಗೆಗಾರ ನಯಸೇನ, ಜೀವನದಲ್ಲಿ ಅನೇಕ ಹಾಸ್ಯಕೃತಿ ರಚಿಸಿದ್ದಾರೆ. ತಮ್ಮ 33 ವರ್ಷದ ವೃತ್ತಿಜೀವನದಲ್ಲಿ ಸುಮಾರು 60 ಕೃತಿ ರಚಿಸಿದ ಕನ್ನಡಕಟ್ಟಿದ ವಿದ್ವಾಂಸರಾಗಿದ್ದರುಎಂದುಡಾ.ಶಶಿಕಾಂತ ಪಟ್ಟಣ ಹೇಳಿದರು.
ಹಿಂದುಸ್ತಾನಿ ಸಂಗೀತಗಾರರಾದಡಾ.ಮೃತ್ಯುಂಜಯ ಶೆಟ್ಟರ ಮಾತನಾಡುತ್ತಾಡಾ.ಎಂ.ಎಸ್. ಸುಂಕಾಪುರ ನೆಲ ಮೂಲ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿದವರು, ಹಾಸ್ಯ ಪ್ರಜ್ಞೆಯ ಮೂಲಕ ಜನರ ಮನಸ್ಸನ್ನು ಒಂದುಗೂಡಿಸಿದವರಾಗಿದ್ದಾರು.ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನಗುವುದಕ್ಕಾಗಿಯೇ ಕ್ಲಬ್‌ಗಳನ್ನು ರಚಿಸಿದ್ದು ವಿಪರ್ಯಾಸ. ಕಣ್ಣೀರು ಸುರಿಸುವಾಗಯಾರೂ ಹತ್ತಿರ ಬರುವುದಿಲ್ಲ. ಆದರೆ ಹಾಸ್ಯಎಂದರೆಜನರು ಸೇರುತ್ತಾರೆ ಹಾಸ್ಯಕ್ಕೆಅಂತಹ ಶಕ್ತಿ ಇದೆಎಂದರು.
ಮಾಜಿ ಸಚಿವೆ ಲೀಲಾವತಿಆರ್.ಪ್ರಸಾದ್ ವೇದಿಕೆಯಲ್ಲಿದ್ದು ಮಾತನಾಡಿದರು.ದತ್ತಿ ದಾನಿಗಳ ಪರವಾಗಿಎಫ್.ಆಯ್. ಚನ್ನಪ್ಪಗೌಡ ಮಾತನಾಡಿದರು. ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಶಂಕರ ಕುಂಬಿ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿಯ ಪ್ರಾಸ್ತಾವಿಕವಾಗಿ ಮಾನತಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.ಸುಂಕಾಪುರಅವರ ಪುತ್ರಿಯರಾದ ಶೋಭಾ, ಪುಷ್ಪ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ವಿಶ್ವೇಶ್ವರಿ ಹಿರೇಮಠ ವಿಶ್ರಾಂತಜಿಲ್ಲಾಧಿಕಾರಿಜಿ.ವ್ಹಿ. ಕೊಂಗವಾಡ, ಹನುಮಾಕ್ಷಿ ಗೋಗಿ, ಪ್ರೊ. ಅಯ್ಯನಗೌಡ್ರ ದಂಪತಿಗಳು, ಡಾ.ಪ್ರಭು ನೀರಲಗಿ, ಅಶೋಕ ಚಿಕ್ಕೋಡಿ, ರುದ್ರಣ್ಣಚಿಲುಮಿ, ಸುರೇಶ ಭಂಡಾರಿ, ಪಾರ್ವತಿ ಹಾಲಭಾವಿ ಸೇರಿದಂತೆ ಸುಂಕಾಪೂರಕುಟುಂಬದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 