ಪರೀಕ್ಷಾ ಭಯ ನಿವಾರಣೆ ಕುರಿತು ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಕಂಪ್ಲಿ 13:ಗುರುಗಳ ಉಪನ್ಯಾಸದ ಪಾಠ, ಪ್ರವಚನಗಳ ಮೂಲಕ ವಿದ್ಯಾಥರ್ಿಗಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈಯ್ಯಬೇಕು ಎಂದು ಗಂಗಾವತಿ ಎಸ್.ಎನ್.ಎಂ.ಎನ್.ಬಾಲಕಿಯರ ಸ.ಪ.ಪೂ.ಕಾಲೇಜು ಪ್ರಾಚಾರ್ಯ ಶಾಂತಪ್ಪ ಟಿ.ಸಿ ಅಭಿಪ್ರಾಯಪಟ್ಟರು ತಾಲ್ಲೂಕಿನ ಷಾಮಿಯಾಚಂದ್ ಸ.ಪ.ಪೂ.ಕಾಲೇಜು ಆವರಣದಲ್ಲಿ, ಸ್ವಾಮಿ ವಿವೇಕನಂದ ಜಯಂತಿ ನಿಮಿತ್ಯ ಷಾಮಿಯಾಚಂದ್ ಸರಕಾರಿ ಪದವಿಪೂರ್ವ ಕಾಲೇಜು ಹಳೇ ವಿದ್ಯಾಥರ್ಿಗಳ ಸಂಘ, ಕಂಪ್ಲಿ ತಾಲೂಕು ರಾಜ್ಯ ಸಕರ್ಾರಿ ನೌಕರರ ಸಂಘದ ಸಹಯೋಗದಲ್ಲಿ 10ನೇ ತರಗತಿ ವಿದ್ಯಾಥರ್ಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪರೀಕ್ಷಾ ಭಯ ನಿವಾರಣೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ನಿರಂತರ ಕಲಿಕೆ ಹಾಗೂ ಅಭ್ಯಾಸದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು. ಶಿಕ್ಷಣದಲ್ಲಿ ವಿದ್ಯಾಥರ್ಿಗಳ ಭವಿಷ್ಯ ಅಡಗಿದ್ದು, ಶಿಸ್ತು, ಸಂಯಮ, ಸಹನೆಯಿಂದ ವ್ಯಕ್ತಿತ್ವ ವಿಕಸನ ಕಂಡುಕೊಳ್ಳಬೇಕು. ಗುರಿಯೊಂದಿಗೆ ಭಯ, ನಿರ್ಭಯವನ್ನು ಬಿಟ್ಟು, ಪರೀಕ್ಷೆಯಲ್ಲಿ ಜಯ ಸಾಧಿಸುವ ಛಲ ಹೊಂದಬೇಕು. ಉತ್ತಮ ಸಾಧನೆಯೊಂದಿಗೆ ವಿದ್ಯಾಥರ್ಿಗಳು ವಿವಿಧ ಹುದ್ದೆಗಳನ್ನು ಅಲಂಕರಿಸಬೇಕೆಂದು ಸಲಹೆ ನೀಡಿದರು.

ಎಸ್.ಡಿ.ಎಂ.ಸಿ ಹಾಗೂ ಹಳೇ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಯು.ಎಂ.ವಿದ್ಯಾಶಂಕರ್ ಅಧ್ಯಕ್ಷತೆವಹಿಸಿ ಮಾತನಾಡಿ, ಗುರಿ ಜೊತೆಗೆ ಛಲ ಇದ್ದಲ್ಲಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬಹುದು. ಶಿಕ್ಷಕರು ನೀಡಿದ ಬೋಧನೆಯಿಂದ ವಿದ್ಯಾಥರ್ಿಗಳು ಪಾಠ, ಪ್ರವಚನಗಳ ಜ್ಞಾನಾರ್ಜನೆ ಹೊಂದಿ, ಜಯದ ಹಾದಿ ಕಂಡುಕೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸಿಪಿಐ ಡಿ.ಹುಲುಗಪ್ಪ, ಕಾಲೇಜು ಪ್ರಾಚಾರ್ಯ ಮಹ್ಮದ್ ಶಫಿ, ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ, ಸಮಾಜ ಸೇವಕ ಡಾ.ಪಿ.ಕೊಟ್ರಪ್ಪ ಸೋಗಿ, ರವಿ ಹಾಗೂ ಶಿಕ್ಷಕ ವೃಂದದವರು, ಹಳೇ ವಿದ್ಯಾಥರ್ಿಗಳ ಬಳಗ ಸೇರಿದಂತೆ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.