ಮೀನು ಮಾರುಕಟ್ಟೆ ಬಿಟ್ಟು ಕೊಡಿ : ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಮನವಿ ನೀಡುವ ವೇಳೆಗೆ ಸ್ಥಳಕ್ಕೆ ಆಗಮಿಸಿದ ಹಾಲಿ-ಮಾಜಿ ಶಾಸಕರು -ವಾಗ್ವಾದ ತಪ್ಪಿಸಿದ ಜಿಲ್ಲಾಧಿಕಾರಿ

ಕಾರವಾರ, 24: ನಗರದ  ರಾಷ್ಟ್ರೀಯ ಹೆದ್ದಾರಿ ಪಕ್ಕದ ತಾತ್ಕಲಿಕ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಕಷ್ಟ. ಅದು ಮಳೆಗಾಲದಲ್ಲಿ ಸಮಸ್ಯೆ ಉಲ್ಬಣವಾಗಿದೆ. ತಕ್ಷಣ ನೂತನ ಮೀನು ಮಾರುಕಟ್ಟೆಯ ಕೆಲಸ ಮುಗಿಸಿ ಬಿಟ್ಟುಕೊಡಿ ಎಂದು ಕಾರವಾರ ಮೀನು ಮಾರಾಟ ಮಹಿಳಾ ಸಂಘದ ಸದಸ್ಯೆಯರು ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ನೀಡಿದರು. ಹಲವು ಸಲ ಮೀನು ಮಾರುಕಟ್ಟೆ ಸಮಸ್ಯೆ ಹೇಳಿದ್ದೇವೆ. ಗಾಂಧಿ ಮಾರುಕಟ್ಟೆ ವಶಪಡಿಸಿಕೊಂಡು ಹಠಾತ್ ಪ್ರತಿಭಟನೆ ಸಹ ಮಾಡಿದ್ದೇವೆ. ಆದರೂ ನಗರಸಭೆ ನಮ್ಮ ಅಳಲು ಕೇಳುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಮೀನುಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಹೇಳಿದರು. ಇದೇ ತಿಂಗಳಾಂತ್ಯದಲ್ಲಿ ಮೀನು ಮಾರುಕಟ್ಟೆ ಬಿಟ್ಟುಕೊಡಿ. ಇಲ್ಲದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದರು. ಇಲ್ಲವೇ ನಗರದ ರಸ್ತೆಗಳಲ್ಲಿ ಮೀನು ಮಾರಾಟಕ್ಕೆ ಅವಕಾಶಕೊಡಿ. ಹೆದ್ದಾರಿ ಆಚೆ ಕುಳಿತು ಮೀನು ವ್ಯಾಪಾರ ಸಾಧ್ಯವಿಲ್ಲ ಎಂದು ಹೋರಾಟಗಾರರು ಹೇಳಿದರು. 

ಇದಕ್ಕೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಧ್ವನಿಗೂಡಿಸಿದರು. ಈಗಲೇ ನೂತನ ಮೀನು ಮಾರುಕಟ್ಟೆಯಲ್ಲಿ ಕುಳಿತುಕೊಳ್ಳಿ ಎಂದು ಹಾಲಿ ಶಾಸಕ ಸತೀಶ್ ಸೈಲ್ ಹೇಳಿದರು. ಈ ಹಂತದಲ್ಲಿ ಮಾತಿಗೆ ಮಾತು ಬೆಳೆಯುವ ಹಂತ ತಲುಪಿತು. ಆಗ ಶಾಸಕರನ್ನು ಫಿಶ್ ಫೆಡರೇಶನ್ ಅಧ್ಯಕ್ಷ ಮಾಂಗ್ರೆ ಸಮಾಧಾನ ಪಡಿಸಲು ಮುಂದಾದರು. ಆಗ ಮಾಜಿ ಶಾಸಕರು ಮೀನು ಮಾರಾಟ ಮಹಿಳೆಯರ ಪರ ಜೋರಾಗಿ ಮಾತನಾಡಿದರು. ಪ್ರತಿಭಟನೆಯ ವೇಳೆ ಬಂದ ಪಿಸು ಮಾತು ಮಾಜಿ ಶಾಸಕ ಸೈಲ್ರನ್ನು ಕೆರಳಿಸಿತ್ತು. ಜಿಲ್ಲಾಧಿಕಾರಿ ಹಾಲಿ ಮತ್ತು ಮಾಜಿ ಶಾಸಕರನ್ನು ಸಮಧಾನ ಮಾಡಿದರು. ಈ ಹಂತದಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಹಾಲಿ ಶಾಸಕರ ಅಧ್ಯಕ್ಷತೆಯಲ್ಲಿ ಇಂದೇ ಸಂಜೆ ಸಭೆ ಮಾಡಿ ಒಂದು ತಿಮರ್ಾನಕ್ಕೆ ಬನ್ನಿ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ, ನಾನು ಮೀನುಗಾರರ ಪರ ಎಂದು ಬಿಟ್ಟರು. 

ಸಮಸ್ಯೆ ಕಗ್ಗಂಟಾಗಿದೆ :

ಆದರೆ ಸಮಸ್ಯೆ ಅಷ್ಟು ಬೇಗ ಬಗೆ ಹರಿಯುವಂತಹದ್ದಲ್ಲ ಎಂದು ಮಾಕರ್ೆಟ್ ನಿಮರ್ಾಣದ ಬೆಳವಣಿಗೆ ಬಿಚ್ಚಿಟ್ಟರು ಜಿಲ್ಲಾಧಿಕಾರಿ. ವಾಣಿಜ್ಯ ಸಂಕೀರ್ಣ ನಿಮರ್ಾಣಕ್ಕೆ ಕೆಲವರು ತಡೆ ತಂದಿದ್ದಾರೆ. ವಿವಾದ ಕೋರ್ಟನಲ್ಲಿದೆ. ಸಮಸ್ಯೆ ಕೋರ್ಟನಲ್ಲಿ ಇರುವಾಗ ನಾವು ಮೀನುಗಾರರಿಗೆ ಮೀನು ಮಾರಾಟ ಮಾಡಿ ಎಂದು ಹೇಳಿದರೆ ತಪ್ಪಾಗುತ್ತದೆ. ಮೀನುಗಾರರ ಸಮಸ್ಯೆಯೂ ಬಗೆಹರಿಯಬೇಕು. ಕಟ್ಟಡದ ಕಾಮಗಾರಿಯೂ ನಡೆಯಬೇಕು. ನಾನು ನಗರಸಭೆಗೆ ಆಡಳಿತಾಧಿಕಾರಿ ಇದ್ದೇನೆ. ಜಿಲ್ಲಾಧಿಕಾರಿಯೂ ಹೌದು. ಸಮಸ್ಯೆ ನನಗೆ ಗೊತ್ತಿದೆ. ಇದೇ 27ಕ್ಕೆ ಹೈಕೋರ್ಟ ನಿಲುವು ಪ್ರಕಟವಾಗಲಿದೆ. ಅದನ್ನು ನೋಡಿಕೊಂಡು, ಮೀನುಗಾರರಿಗೆ ಮಳೆಗಾಲದ ಸಮಯವಾದ್ದರಿಂದ ತಾತ್ಕಲಿಕ ಪರಿಹಾರ ಮಾಡಬೇಕು. ಮತ್ತು ಅವರಿಗೆ ಶಾಶ್ವತ ಮೀನು ಮಾರುಕಟ್ಟೆ ಸಹ ಮಾಡಿಕೊಡಬೇಕಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಬಗೆಹರಿಸಲಾಗುವುದು. 

ನೂತನ ವಾಣಿಜ್ಯ ಸಂಕೀರ್ಣ:

ವಾಣಿಜ್ಯ ಸಂಕೀರ್ಣ ಐಡಿಎಸ್ಎಮ್ಟಿ ನಿಧಿಯಲ್ಲಿ ಕಟ್ಟಲಾಗುತ್ತಿದೆ. ನಗರೋತ್ಥಾನದ ನಿಧಿ ಬಳಸಲು ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿ ಸಭೆಯಲ್ಲಿ ನಿಧರ್ಾರವಾಗಬೇಕು. ನಗರೋತ್ಥಾನ ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಬೇಕು. ಸಮಿತಿ ನಿರ್ಧರಿಸಿದ ನಂತರ ಸಕರ್ಾರಕ್ಕೆ ಬರೆದು ಅನುಮತಿ ಪಡೆಯಬೇಕು. ಅಲ್ಲದೇ ಮೀನುಗಾರ ಮಹಿಳೆಯರ ಮೀನು ಮಾರಾಟಕ್ಕೆ ಶಾಶ್ವತ ಪರಿಹಾರ ಸಹ ಹುಡುಕುತ್ತೇನೆ. ನೂತನ ಮೀನು ಮಾರುಕಟ್ಟೆಯ ಪರ ತೀಪರ್ು ಬಂದಲ್ಲಿ ಏನು ಮಾಡಬೇಕು. ಬರದಿದ್ದರೆ ಏನು ಮಾಡಬೇಕು ಎಂಬುದು ಜೂ.27 ರ ನಂತರ ನಿಧರ್ಾರವಾಗಲಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರ ಗಮನಕ್ಕೆ ತಂದು, ಅವರ ಸಮ್ಮುಖದಲ್ಲಿ ಸಭೆ ಮಾಡಿ ನಿಧರ್ಾರಕ್ಕೆ ಬರಲಾಗುವುದು. ಮಳೆಗಾಲದ ಸಮಸ್ಯೆ ನನಗೂ ಗೊತ್ತಿದೆ. ನೀವು ಸಹಕಾರ ಕೊಡಿ. ಸಮಸ್ಯೆ ಬಗೆಹರಿಸುವೆ ಎಂದರು. 

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್ , ಸಮಸ್ಯೆಗೆ ಪರಿಹಾರ ಕೊಡುತ್ತೇವೆ. ಸಹಕಾರ ನೀಡಿ ಎಂದರು. ಕೆ.ಟಿ.ತಾಂಡೇಲ ಹಾಗೂ ಮೀನುಗಾರರ ಮುಖಂಡರು, ಮಾಜಿ ಸಚಿವ  ಆನಂದ ಅಸ್ನೋಟಿಕರ್, ಆರ್.ಜಿ.ನಾಯ್ಕ. ರಾಜು ತಾಂಡೇಲ , ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಹಾಲಿ ಶಾಸಕಿ ರೂಪಾಲಿ ನಾಯ್ಕ ಮತ್ತು ಅವರ ಬೆಂಬಲಿಗರು ಹಾಗೂ ಮೀನು ಮಾರಾಟ ಮಹಿಳಾ ಸಂಘದ ಸದಸ್ಯರು ಇದ್ದರು. ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು. ನಗರದಲ್ಲಿ ಮನವಿ ನೀಡುವುದಕ್ಕೂ ಮುನ್ನ ಬೃಹತ್ ಪ್ರತಿಭಟನಾ ಮೆರವಣಿಗೆ ಸಹ ನಡೆಯಿತು.