ಶಿಕ್ಷಣದಲ್ಲಿ ಶ್ರದ್ದೆ, ಕಠಿಣ ಪರಿಶ್ರಮದಿಂದ ಕಲಿತು ಮುಂದೆ ಬನ್ನಿ : ಡಾ.ಜಯಪ್ರಕಾಶ

ಶಿಕ್ಷಣದಲ್ಲಿ ಶ್ರದ್ದೆ, ಕಠಿಣ ಪರಿಶ್ರಮದಿಂದ ಕಲಿತು ಮುಂದೆ ಬನ್ನಿ : ಡಾ.ಜಯಪ್ರಕಾಶ  Learn with dedication and hard work in education and come forward: Dr. Jayaprakash

ನೇಸರಗಿ 23: ಪ್ರತಿಯೊಬ್ಬ ವಿದ್ಯಾರ್ಥಿಗಳು ವ್ಯಾಸಂಗ ಸಮಯದಲ್ಲಿ ಕಠಿಣ ಪರಿಶ್ರಮದಿಂದ ಪ್ರಾಥಮಿಕ ಹಂತದಿಂದ ಶ್ರದ್ದೆಯಿಂದ ವ್ಯಾಸಂಗ ಮಾಡಿ ಅತೀ ಉತ್ತಮ ಅಂಕಗಳನ್ನು ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂದು  ಇಂಟರ ನ್ಯಾಷನಲ್ ಜನರಲ್  ಮೆಡಿಸನ್ ಖ್ಯಾತ, ಬೆಳಗಾವಿಯ ಪ್ರಮುಖ ವೈದ್ಯರಾದ ಡಾ. ಜಯಪ್ರಕಾಶ ಅಪ್ಪಾಜಿಗೋಳ ಹೇಳಿದರು. ಅವರು ಇಲ್ಲಿನ  ಸರಕಾರಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ  ಸಾಧಕರಿಗೆ ಸತ್ಕಾರ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ, 7 ನೇ  ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ ನಾವು ಕಲಿಕೆಗೆ, ಸರ್ಕಾರಿ ಹಾಗೂ ಖಾಸಗಿ ಶಾಲೆ ಎಂಬ ಭೇದವಿಲ್ಲದೆ, ಅಭ್ಯಾಸ ಮಾಡಿ, ನಾವು ಹಾಗೂ ಡಾ. ಮಂಜುನಾಥ ಸೋಮಣ್ಣವರ ಇದೆ ಶಾಲೆಯಲ್ಲಿ ಕಲಿತು ಇಂದು ವೈದ್ಯರಾಗಿದ್ದೇವೆ,

ಇದ್ದಕ್ಕೆ  ಕಾರಣ ಕಠಿಣ ಪರಿಶ್ರಮದ ವಿದ್ಯಾಭ್ಯಾಸ ಕಲಿತು ಈ ಶಾಲೆಯಿಂದಲೇ  ಅನೇಕರು  ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ, ಹಾಗೂ ಜೀವನದಲ್ಲಿ ಮುಂದೆ ಬಂದಿದ್ದಾರೆ ಎಂದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಈ ಸಂದರ್ಭದಲ್ಲಿ  ನೇಸರಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಶ್ವರಿ ದೊಡ್ಡಗೌಡರ, ಡಾ. ಮಂಜುನಾಥ ಸೋಮಣ್ಣವರ, ಮಾಜಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ನಿಂಗಪ್ಪ ತಳವಾರ,  ವೀರಭದ್ರೇಶ್ವರ ಪಿಕೆಪಿಎಸ್ ಅಧ್ಯಕ್ಷ ಸೋಮನಗೌಡ ಪಾಟೀಲ,ಮುರಳಿ ಹಮ್ಮಣ್ಣವರ, ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ, ವಿಷ್ಣು ಮೂಲಿಮನಿ, ರಾಘವೇಂದ್ರ ಮದೇನ್ನವರ, ಬಸವರಾಜ ಕಾರಜೋಳ, ಮಹಾದೇವ ಕರಾಳೆ, ವಿಶ್ವನಾಥ ಸೋಮಣ್ಣವರ, ಮುಖ್ಯ ಶಿಕ್ಷಕರು, ಶಿಕ್ಷಕರು, ಪಾಲಕರು, ಶಾಲಾ ಸಲಹಾ ಸಮಿತಿ ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.